Money Plant: ಮನಿ ಪ್ಲಾಂಟ್ ಬೆಳೆಸುವುದಕ್ಕೆ 6 ಸಿಂಪಲ್ ಟಿಪ್ಸ್ ಇಲ್ಲಿದೆ!
Money Plant: ಮನಿಪ್ಲಾಂಟ್.. ಹೆಸರಿನಲ್ಲೇ ಇರುವಂತೆ ದುಡ್ಡಿನ ಸಸಿ ಅಂತ ತುಂಬಾ ಜನ ನಂಬುವುದು ಇದೆ. ಇನ್ನು ಕಡಿಮೆ ಜಾಗದಲ್ಲಿ ಮಣ್ಣು ಸಹ ಇಲ್ಲದೆ ಮನೆಯಲ್ಲಿಯೇ ನೀವು ಮನಿಪ್ಲಾಂಟ್ (Golden Pothos) ಸಸಿಯನ್ನು ಬೆಳೆಸುವುದಕ್ಕೆ ಸಾಧ್ಯವಿದೆ. ಸಣ್ಣ ಸಣ್ಣ ಹಸಿರು ಎಲೆಗಳ ತೋರಣ ನಿಮ್ಮ ಮನೆಯ ಒಳಗೆ ಹಾಗೂ ಹೊರಗಿನ ಸೌಂದರ್ಯವನ್ನು ಹೆಚ್ಚಿಸಬಲ್ಲದು. ಮನಿಪ್ಲಾಂಟ್ ಬೆಳೆಯುವುದು ಹೇಗೆ, ಮನಿಪ್ಲಾಂಟ್ ಸಸಿಯನ್ನು ಯಾವ ರೀತಿ ನೆಡಬೇಕು ಹಾಗೂ ಮನಿಪ್ಲಾಂಟ್ ನೆಡುವಾಗ ಏನು ಮಾಡಬೇಕು ಎನ್ನುವ ಸರಳ ಟಿಪ್ಸ್ ಇಲ್ಲಿದೆ. ಈ ಟಿಪ್ಸ್‌ಗಳನ್ನು ಫಾಲೋ ಮಾಡಿದರೆ ನೀವು ಸಹ ಸುಲಭವಾಗಿ ಮನಿ ಪ್ಲಾಂಟ್ ಬೆಳೆಸಬಹುದು.
ಮನಿ ಪ್ಲಾಂಟ್ ಸಸಿಯನ್ನು ಅತ್ಯಂತ ಸುಲಭವಾಗಿ ಬೆಳೆಯುವುದಕ್ಕೆ ಸಾಧ್ಯವಿದೆ ನಿಜ. ಆದರೆ, ನಮಗೇ ತಿಳಿಯದಂತೆ ನಾವು ಮಾಡುವ ಕೆಲವೊಂದು ಸಣ್ಣ ತಪ್ಪುಗಳಿಂದ ಮನಿ ಪ್ಲಾಂಟ್ ಹಾಳಾಗುವ ಸಾಧ್ಯತೆಯೂ ದಟ್ಟವಾಗಿದೆ. ಮನಿಪ್ಲಾಂಟ್ ಹೆಚ್ಚು ಬಿಸಿಲಿಗೆ ಇರಿಸುವುದರಿಂದ ಹಾಗೂ ಪದೇ ಪದೇ ನೀರು ಬದಲಾಯಿಸುವುದರಿಂದಲೂ ಹಾಳಾಗುತ್ತದೆ. ಹಾಗಾದರೆ, ಮನಿ ಪ್ಲಾಂಟ್ ಅನ್ನು ಸುರಕ್ಷಿತವಾಗಿ ಹಾಗೂ ಬೆಸ್ಟ್ ವಿಧಾನದಲ್ಲಿ ಬೆಳೆಸುವುದು ಹೇಗೆ ಎನ್ನುವುದನ್ನು ನೋಡೋಣ..

* ಮನಿ ಪ್ಲಾಂಟ್ ಸಸಿ ಆಯ್ಕೆ: ಮನಿ ಪ್ಲಾಂಟ್ ಅನ್ನು ನೀವು ಒಂದು ಗಾಜಿನ ಬಾಟಲಿಯಲ್ಲಿ ಇಲ್ಲವೇ ಮಣ್ಣಿನಲ್ಲೂ ಬೆಳೆಸಬಹುದಾಗಿದೆ. ಸಾಮಾನ್ಯವಾಗಿ ಬಾಟಲಿನಲ್ಲಿ ಬೆಳೆಸುವುದು ಉತ್ತಮ. ಇದಾದ ಮೇಲೆ ಒಂದು ಕಾಂಡವನ್ನು (Plant stem - ಬೇರು) ಮತ್ತೊಂದು ಪಾಟ್‌ಗೆ ಬೇಕಾದರೆ ನೀವು ಬದಲಾಯಿಸಿಕೊಳ್ಳಬಹುದು. ಒಂದು ಸಣ್ಣ ಗಾಜಿನ ಬಾಟಲಿಯಲ್ಲಿ ನೀವು ಮನಿ ಪ್ಲಾಂಟ್ ನೆಟ್ಟರೂ ಬೆಳೆಯುತ್ತದೆ. ಆದರೆ, ಗಾಜಿನ ಬಾಟಲಿಯ ಬಾಯಿ ದೊಡ್ಡದಾಗಿರುವಂತೆಯೂ ಬಾಟಲಿ ತುಸು ದೊಡ್ಡದಾಗಿರುವಂತೆಯೂ ನೋಡಿಕೊಳ್ಳಿ.
* ನೇರ ಬಿಸಿಲು ಬೀಳದಂತೆ ನೋಡಿಕೊಳ್ಳಿ: ಇನ್ನು ಸಾಮಾನ್ಯವಾಗಿ ಮನಿ ಪ್ಲಾಂಟ್ ಮಾತ್ರವಲ್ಲ ಮನೆಯಲ್ಲಿ ಬೆಳೆಸುವ ಯಾವುದೇ ಸಸಿಗಾದರೂ ನೇರವಾಗಿ ಸೂರ್ಯನ ಬಿಸಿಲು ಬೀಳಲು ಪ್ರಾರಂಭವಾದರೆ ಸಸಿ ನಶಿಸುವ ಸಾಧ್ಯತೆ ಇದೆ. ಹೀಗಾಗಿ, ಸಸಿಗಳ ಮೇಲೆ ನೇರ ಸೂರ್ಯನ ಕಿರಣಗಳು ಬೀಳದಂತೆ ನೋಡಿಕೊಳ್ಳಿ. ನೇರ ಸೂರ್ಯನ ಕಿರಣಗಳು ಇಲ್ಲವೇ ಬಿಸಿಲು ಮನಿಪ್ಲಾಂಟ್ ಮೇಲೆ ಬೀಳುವುದರಿಂದ ಅದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ. ಹಳದಿ ಬಣ್ಣಕ್ಕೆ ತಿರುಗಿದರೆ, ಮನಿ ಪ್ಲಾಂಟ್ ಬೆಳೆಯದೆ ಹಾಳಾಗಿ ಹೋಗುತ್ತದೆ. ಹೀಗಾಗಿ ಸೂರ್ಯನ ಬಿಸಿಲು ಹೆಚ್ಚು ಮನಿಪ್ಲಾಂಟ್ ಮೇಲೆ ಬೀಳದಂತೆ ನೋಡಿಕೊಳ್ಳುವುದು ಮುಖ್ಯ.
* ನೀರು ಬದಲಾಯಿಸಿ: ಮನಿ ಪ್ಲಾಂಟ್ ನೀರನ್ನು ಕನಿಷ್ಠ 7ರಿಂದ 10 ದಿನಗಳಿಗೆ ಒಮ್ಮೆ ಬದಲಾಯಿಸುತ್ತಿರಿ. ಮನಿ ಪ್ಲಾಂಟ್‌ನಲ್ಲಿರುವ ನೀರು ಪಾಚಿ ಕಟ್ಟಿದರೆ ಸಸಿ ಹಾಳಾಗುತ್ತದೆ. ಅಲ್ಲದೇ ಮನಿ ಪ್ಲಾಂಟ್ ಅನ್ನು ಮನೆಯ ಒಳಗೆ ಅಥವಾ ಮನೆಯ ಕಿಟಕಿಯ ಬಳಿ ಇರಿಸುವುದರಿಂದ ಪಾಚಿ ಕಟ್ಟಿದರೆ ಮನೆಯ ಒಳಗೆ ಪಾಚಿ ವಾಸನೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
* ನೆಡುವ ಮುನ್ನ ಈ ವಿಷಯವನ್ನು ಗಮನಿಸಿ: ಇನ್ನು ಮನಿ ಪ್ಲಾಂಟ್ ನೆಡುವ ಮುಂಚೆ ಕೆಲವೊಂದು ಪ್ರಮುಖ ವಿಷಯಗಳನ್ನು ನೀವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಅದರಲ್ಲಿ ಮನಿ ಪ್ಲಾಂಟ್‌ನ ಆರೋಗ್ಯಕರ ಕಾಂಡಗಳನ್ನು (ಸಸಿಯ ಬೇರು) ಕತ್ತರಿಸುವುದು ಪ್ರಮುಖವಾದದ್ದು. ಈ ರೀತಿ ಕಾಂಡವನ್ನು ಕತ್ತರಿಸುವ ಸಂದರ್ಭದಲ್ಲಿ ಆರೋಗ್ಯಕರ ಕಾಂಡಗಳನ್ನು ಕತ್ತರಿಸಿ. ಇನ್ನು ಈ ಕಾಂಡದಲ್ಲಿ ಕನಿಷ್ಠ ಎರಡು ಎಲೆಗಳನ್ನು ಇರುವಂತೆ ನೋಡಿಕೊಳ್ಳಿ. ಎಲೆಯ ತೊಟ್ಟುಗಳ ಕೆಳಗೆ ಕಾಂಡವನ್ನು ಸ್ವಲ್ಪ ಕತ್ತರಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಸುಲಭವಾಗಿ ಮನಿಪ್ಲಾಂಟ್ ಬೆಳೆಯುತ್ತದೆ.
* ಆಕರ್ಷಕ ಬಾಟಲಿಗಳಲ್ಲಿ ಬೆಳೆಸಬಹುದು: ಇನ್ನು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಮನಿ ಪ್ಲಾಂಟ್ ಇನ್ನಷ್ಟು ಆಕರ್ಷಕವಾಗಿ ಕಾಣಿಸುವ ಉದ್ದೇಶದಿಂದ ನೀವು ಆಕರ್ಷಕ ಬಾಟಲಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಮನೆಯ ಒಳಾಂಗಣ ಹಾಗೂ ಹೊರಾಂಗವು ಸುಂದರವಾಗಿರುತ್ತದೆ.












Click it and Unblock the Notifications