Get Updates
Get notified of breaking news, exclusive insights, and must-see stories!

Ridge Gourd Benefits: ಇದರ ಮೈ ಹರಿತ ಆರೋಗ್ಯ ಸಮಸ್ಯೆಗಳಿಗೆ ಕೊಡುತ್ತದೆ ಹೊಡೆತ: ಹೀರೆಕಾಯಿ ಆರೋಗ್ಯಕರ ಪ್ರಯೋಜನಗಳು

ನನ್ನ ಮೈ ತುಂಬಾ ಹರಿತ. ನನಗೆ ಜನ್ಮ ನೀಡಿದ ತಾಯಿ ಒಂದು ಬಳ್ಳಿ. ಯಾವಾಗಲು ನೇತಾಡುತ್ತ ಇರುವ ನನಗೆ ಸೂರ್ಯನ ಬೆಳಕು ಹಾಗೂ ನೀರು ಬೇಕೇಬೇಕು. ಬೇರೆಯವರಿಗೆ ಹೋಲಿಸಿದರೆ ನಾನು ತುಂಬಾ ವಿಭಿನ್ನ. ನನ್ನ ಮೈ ಹರಿತವಾಗಿದ್ದರೂ ನಾನ್ನೊಂದು ಎಲ್ಲರಿಗೂ ಇಷ್ಟವಾಗುವ ತರಕಾರಿ. ದೇಹದಲ್ಲಿನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುವ ನನ್ನ ಹೆಸರು ಹೀರೆಕಾಯಿ.

ಹೀರೆಕಾಯಿ... ಹೀರೆಕಾಯಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹರಿತವಾದ ಸಿಪ್ಪೆಯಿಂದ ತನ್ನ ಬೀಜದವರೆಗೂ ಪ್ರಯೋಜನಕಾಯಿಯಾದ ತರಕಾರಿ ಇದು. ಹಳ್ಳಿಯಾಗಲಿ ಪಟ್ಟಣವಾಗಲಿ ಎಲ್ಲಾ ರೀತಿಯ ಜನ ಹೀರೆಕಾಯಿಯನ್ನು ಇಷ್ಟಪಟ್ಟು ಖರೀದಿ ಮಾಡ್ತಾರೆ. ರೊಟ್ಟಿ, ಚಪಾತಿ, ಪಾರಾಟ, ಪೂರಿ, ಅನ್ನದೊಂದಿಗೆ ಸೇವಿಸಲು ತಯಾರಿಸಲಾಗುವ ಈ ಹೀರೆಕಾಯಿಯನ್ನು ಇಷ್ಟಪಡದೇ ಇರುವವರು ತುಂಬಾ ವಿರಳ.

10 Amazing Health Benefits of Ridge Gourd That you must know in Kannada

ಇದು ತಿನ್ನಲು ರುಚಿ ಮಾತ್ರವಲ್ಲದೆ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದರ ಎಲೆಗಳು, ಬೇರುಗಳು ಮತ್ತು ಬೀಜಗಳು ಎಲ್ಲವೂ ಒಂದಾಲ್ಲಾ ಒಂದು ರೀತಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತವೆ. ಹಾಗಾದರೆ ಈ ಹೀರೆಕಾಯಿಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಯಾವವು? ಇದರ ಬಳಕೆ ಹೇಗೆ? ಇದರಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿದುಕೊಳ್ಳೋಣ.

ಹೀರೆಕಾಯಿಯ ಆರೋಗ್ಯಕರ ಪ್ರಯೋಜನಗಳು:-

1. ತೂಕ ಇಳಿಕೆಗೆ ಪ್ರಯೋಜನಕಾರಿ ಹೀರೆಕಾಯಿ

ಹೀರೆಕಾಯಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಲಭ್ಯವಿದ್ದು, ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆ ಇದೆ. ಹಾಗಾಗಿ ಪ್ರತಿ ದಿನ ನೀವು ಆಹಾರ ಸೇವನೆ ಮಾಡುವಾಗ ಜೊತೆಗೆ ಹೀರೆಕಾಯಿಯ ಖಾದ್ಯಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಹೇಹದಲ್ಲಿ ಆಹಾರದ ಮೂಲಕ ಸೇರುವ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶಗಳನ್ನು ಸರಿಯಾಗಿ ಜೀರ್ಣ ಮಾಡಿ ವಿಪರೀತ ಕೊಬ್ಬಿನ ಅಂಶಗಳು ನಿಮ್ಮ ದೇಹದಲ್ಲಿ ಸೇರ್ಪಡೆ ಆಗುವುದನ್ನು ತಪ್ಪಿಸಿ ನಿಮ್ಮ ಸೋಂಟದ ಸುತ್ತ ಮುತ್ತ ಅಡಗಿರುವ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

2. ಮಲಬದ್ಧತೆ ಸಮಸ್ಯೆಗೆ ಪರಿಹಾರ

ಹೀರೆಕಾಯಿಯಲ್ಲಿ ನೀರಿನ ಅಂಶ ಅಧಿಕವಾಗಿದೆ. ಇದರಿಂದ ತಯಾರಾದ ಯಾವುದೇ ಆಹಾರವನ್ನು ಸೇವಿಸುವುದರಿಂದ ಸರಿಯಾಗಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣ ದೇಹದಲ್ಲಿ ಲಭ್ಯ ಆಗುತ್ತದೆ. ಇದರ ಜೊತೆಗೆ ಹೀರೇಕಾಯಿಯಲ್ಲಿ 'ಸೆಲ್ಯಲಲೋಸ್ ಎಂಬ ನೈಸರ್ಗಿಕ ನಾರಿನ ಅಂಶ ಇರುವುದರಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವಂತಹ ಪ್ರಕ್ರಿಯೆ ನಡೆಯುತ್ತದೆ. ಆಹಾರ ತಜ್ಞರ ಪ್ರಕಾರ ಒಂದು ಗ್ಲಾಸ್‌ಗೆ ಹೀರೆಕಾಯಿ ಜ್ಯೂಸ್ ಗೆ ಸ್ವಲ್ಪ ಜೇನು ತುಪ್ಪ ಮುಶ್ರಣ ಮಾಡಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

10 Amazing Health Benefits of Ridge Gourd That you must know in Kannada

3. ಲಿವರ್ ಆರೋಗ್ಯ ಕಾಪಾಡುವ ಹೀರೆಕಾಯಿ

ನಮ್ಮ ದೇಹಲದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿ ಶೇಖರಣೆ ಆಗಬಾರದು ಅಂದರೆ ನಮ್ಮ ಲಿವರ್ ಯಕೃತ್ ಭಾಗ ಚೆನ್ನಾಗಿ ಕೆಲಸ ಮಾಡಬೇಕು. ನಮ್ಮ ದೇಹದ ರಕ್ತದಲ್ಲಿ ಕಂಡು ಬರುವ ವಿಷಕಾರಿ ಅಂಶಗಳನ್ನು ದೂರ ಮಾಡಿ ಅಳಿದುಳಿದ ಜೀರ್ಣವಾಗದ ಆಹಾರದಲ್ಲಿ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಹೀರಿಕೊಂಡು ನಮ್ಮ ದೇಹಕ್ಕೆ ಶಕ್ತಿ ಮತ್ತು ಸದೃಢತೆಯನ್ನು ಒದಗಿಸಬೇಕು. ಇದು ಸುಗಮವಾಗಿ ಆಗಬೇಕು ಅಂದರೆ ಹಿರೇಕಾಯಿ ಜ್ಯೂಸ್ ತುಂಬಾ ಮುಖ್ಯ.

3. ಕಣ್ಣಿನ ದೃಷ್ಟಿ ಕಾಪಾಡುವ ಹೀರೆಕಾಯಿ

ಹೀರೆಕಾಯಿಯಲ್ಲಿ ವಿಟಮಿನ್ 'ಎ' ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು ಜಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತ: ತಜ್ಞರೇ ಹೇಳುತ್ತಾರೆ. ಕಣ್ಣಿನ ಪರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ ಬೀಟಾ-ಕ್ಯಾರೋಟಿನ್ ಎಂಬ ವಿಟಮಿನ್ 'ಎ' ಅಂಶದ ರೂಪ ಸರಿ ಪಡಿಸುತ್ತದೆ.

5. ಉರಿಯೂತ ನಿವಾರಣೆ

ಸಾಮಾನ್ಯವಾಗಿ ದೇಹದ ಅಂಗಾಂಶಗಳಲ್ಲಿ ದ್ರವದ ಶೇಖರಣೆಯಿಂದಾಗಿ ಊತ (ಎಡಿಮಾ)ಮತ್ತು ಗ್ರ್ಯಾನ್ಯುಲೋಮಾ (ಉರಿಯೂತ) ಕಂಡುಬರುತ್ತದೆ. ಇದಕ್ಕೆ ಹೀರೆಕಾಯಿ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಎಥೆನಾಲ್ ಸಾರ ಉರಿಯೂತದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್ ನೈಸರ್ಗಿಕ ಉರಿಯೂತ ನಿವಾರಕವಾಗಿದ್ದು, ಇದು ಅಪಧಮನಿಕಾರಿಣ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೊಲೆಸ್ಟ್ರಾಲ್‌ನಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಹೀರೆಕಾಯಿ ಹೊಟ್ಟೆಯ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗ್ಯಾಸ್ಟ್ರಿಕ್ ಅಲ್ಸರ್ ಅನ್ನು ಸಹ ಕಡಿಮೆ ಮಾಡುತ್ತದೆ.

6. ತಲೆನೋವಿಗೆ ಹೀರೆಕಾಯಿಯ ಪ್ರಯೋಜನಗಳು

ಹೀರೆಕಾಯಿ ತಲೆನೋವನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ. ಎನ್‌ಸಿಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಂಶೋಧನೆಯ ಪ್ರಕಾರ, ಹೀರೆಕಾಯಿ ಎಲೆಗಳು ಮತ್ತು ಅದರ ಬೀಜಗಳ ಎಥೋಲಿಕ್ ಸಾರಗಳು ನೋವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಸಂಶೋಧನೆಯ ಪ್ರಕಾರ, ಇದು ನೋವು ನಿವಾರಕವಾಗಿದೆ. ತಲೆ ನೋವನ್ನು ಕಡಿಮೆ ಮಾಡಲು ಹೀರೆಕಾಯಿ ಬಳಕೆಯನ್ನು ಬೆಂಬಲಿಸಬಹುದು ಎಂದು ಸಂಶೋಧನೆ ಹೇಳುತ್ತದೆ.

7. ಮಧುಮೇಹಕ್ಕೆ ಹೀರೆಕಾಯಿಯ ಪ್ರಯೋಜನಗಳು

ಹೀರೆಕಾಯಿಯನ್ನು ಪ್ರಾಚೀನ ಕಾಲದಿಂದಲೂ ಮಧುಮೇಹವನ್ನು ನಿಯಂತ್ರಿಸುವ ತರಕಾರಿ ಎಂದು ಕರೆಯಲಾಗುತ್ತದೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ನಂಬಿಕೆಗೆ ಸಂಬಂಧಿಸಿದಂತೆ ಇಲಿಗಳ ಮೇಲೂ ಸಂಶೋಧನೆ ನಡೆಸಲಾಯಿತು. ಈ ನಿಟ್ಟಿನಲ್ಲಿ ಎನ್‌ಸಿಬಿಐ ವೆಬ್‌ಸೈಟ್‌ನಲ್ಲಿ ಅಧ್ಯಯನವೂ ಲಭ್ಯವಿದೆ. ಸೋರೆಕಾಯಿಯ ಎಥೋಲಿಕ್ ಸಾರವು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಈ ಪರಿಣಾಮದಿಂದಾಗಿ ಹೀರೆಕಾಯಿಯನ್ನು ಮಧುಮೇಹವನ್ನು ನಿಯಂತ್ರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

8. ಕ್ಯಾನ್ಸರ್ ವಿರೋಧಿ

ವೈದ್ಯರು ಮಾತ್ರ ಕ್ಯಾನ್ಸರ್ಗೆ ಚಿಕಿತ್ಸೆ ನೀಡಬಹುದಾದರೂ, ಕೆಲವು ತಡೆಗಟ್ಟುವ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯ ಮಾಡುವ ವಿಧಾನಗಳಲ್ಲಿ ಹೀರೆಕಾಯಿ ಕೂಡ ಒಂದು ಎಂದು ನಂಬಲಾಗಿದೆ. ಹೀರೆಕಾಯಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಕಂಡುಬಂದಿವೆ.

9. ಕುಷ್ಠರೋಗ

ಪುರಾತನ ಕಾಲದಲ್ಲಿ ಕುಷ್ಠರೋಗದ ಚಿಕಿತ್ಸೆಗಾಗಿ ಕೂಡ ಹೀರೆಕಾಯಿಯನ್ನು ಬಳಸಲಾಗುತ್ತಿತ್ತು. ಇದರ ಎಲೆಗಳ ಪೇಸ್ಟ್ ಅನ್ನು ತಯಾರಿಸಿ ಅದನ್ನು ಪೀಡಿತ ಪ್ರದೇಶದ ಮೇಲೆ ಲೇಪಿಸುವುದು ಕುಷ್ಠರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿದ್ದು, ಮೈಕೋಬ್ಯಾಕ್ಟೀರಿಯಂ ಲೆಪ್ರೇ (7) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ರೀತಿಯ ಕಾಯಿಲೆಗೆ ನೀವು ಮನೆಮದ್ದುಗಳನ್ನು ಮಾಡಲು ಬಯಸಿದರೆ. ಇದನ್ನು ಮಾಡಬಹುದು. ಆದರೆ ವೈದ್ಯರ ಸಲಹೆಯೊಂದಿಗೆ ಮಾಡುವುದು ಉತ್ತಮ ಮಾರ್ಗವಾಗಿದೆ.

10. ಅಸ್ತಮಾಕ್ಕೆ ಹೀರೆಕಾಯಿಯ ಪ್ರಯೋಜನಗಳು

ಒಬ್ಬ ವ್ಯಕ್ತಿಗೆ ಅಸ್ತಮಾ ಅಥವಾ ಉಸಿರಾಟದ ತೊಂದರೆ ಇದ್ದರೆ, ಅವನು ಹೀರೆಕಾಯಿಯನ್ನು ಸೇವಿಸಬಹುದು. ಅಸ್ತಮಾದಿಂದ ಬಳಲುತ್ತಿರುವವರು ಅರ್ಧ ಬಟ್ಟಲು ಸೊಪ್ಪನ್ನು ರಸದ ರೂಪದಲ್ಲಿ ಸೇವಿಸಬಹುದು.ಈ ರಸವನ್ನು ದಿನಕ್ಕೆರಡು ಬಾರಿ ಸೇವಿಸಬಹುದು. ನಮ್ಮ ಸಲಹೆ ಏನೆಂದರೆ ಸೋರೆಕಾಯಿ ರಸದ ಜೊತೆಗೆ ವೈದ್ಯಕೀಯ ಸಲಹೆಯಂತೆ ಅಸ್ತಮಾ ಔಷಧಿಯನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ.

ಹೀರೆಕಾಯಿ ಪೌಷ್ಟಿಕಾಂಶದ ಮೌಲ್ಯ:-

ಹೀರೆಕಾಯಿ ಪೌಷ್ಟಿಕಾಂಶವುಳ್ಳ ತರಕಾರಿಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೀರೆಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ಈಗಾಗಲೇ ಮೇಲೆ ಹೇಳಿದ್ದೇವೆ. ಈಗ ನಾವು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುತ್ತಿದ್ದೇವೆ.

100 ಗ್ರಾಂಗೆ ಪೌಷ್ಟಿಕಾಂಶದ ಅಂಶ

ನೀರು 93.85 ಗ್ರಾಂ

ಶಕ್ತಿ 20 kcal

ಪ್ರೋಟೀನ್ 1.2 ಗ್ರಾಂ

ಹೀರೆಕಾಯಿಯನ್ನು ತಿನ್ನುವುದರಿಂದಾಗುವ ಅಡ್ಡ ಪರಿಣಾಮಗಳು:

ಹೀರೆಕಾಯಿ ದೇಹಕ್ಕೆ ಅನಾನುಕೂಲಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

*ಗರ್ಭಾವಸ್ಥೆಯಲ್ಲಿ ಇದನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಗರ್ಭಾವಸ್ಥೆಯಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.

*ಇದರ ಸೇವನೆಯಿಂದ ಜನರು ಅಲರ್ಜಿಯನ್ನು ಸಹ ಅನುಭವಿಸಬಹುದು.

*ಆರೋಗ್ಯಕ್ಕೆ ಇದರ ಹಾನಿ ಅತ್ಯಲ್ಪ.

*ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಬಗ್ಗೆ ನೀವು ಯೋಚಿಸಬೇಕು. ಯಾವುದೇ ಗಂಭೀರ ಕಾಯಿಲೆಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಸೇವಿಸಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+