ಆತ್ಮಹತ್ಯೆ ಮಾಡಿಕೊಳ್ಳಲು ಹೊಂಟ ಸರ್ದಾರ್ಜಿ
ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಸರ್ದಾರ್ಜಿಯೊಬ್ಬ ಬದುಕಿಗೆ ಅಂತ್ಯ ಹಾಡಲು ನಿರ್ಧರಿಸಿದ. ಯಾವ್ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಚಿಂತಿಸಲು ಶುರು ಮಾಡಿದ. ಟಿಕ್ ಟ್ವೆಂಟಿ ಕುಡಿಯಲಾ, ಎತ್ತರದ ಬೆಟ್ಟದಿಂದ ಧುಮುಕಿಬಿಡಲಾ, ಚಾಕುವಿನಿಂದ ಚುಚ್ಚಿಕೊಳ್ಳಲಾ, ಸಮುದ್ರದಲ್ಲಿ ಜಿಗಿದುಬಿಡಲಾ ಅಂತ ಚಿಂತಿಸಿದ.
ಆ ಯಾವ ರೀತಿಯೂ ಸರ್ದಾರ್ಜಿಗೆ ಸರಿ ಕಾಣಲಿಲ್ಲ. ಕೊನೆಗೆ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಗಟ್ಟಿ ನಿರ್ಧಾರ ಮಾಡಿದ. ಮನೆಯ ಹತ್ತಿರದಲ್ಲೇ ಇದ್ದ ಪಾರ್ಕಿಗೆ ಹೋಗಿ ಗಿಡಕ್ಕೆ ನೇಣು ಹಾಕಿಕೊಳ್ಳೋಣವೆಂದು ಹಗ್ಗ ತೆಗೆದುಕೊಂಡು ಬೆಳಗಿನ ಜಾವ 5 ಗಂಟೆಗೆ ನಡೆದ.
ಗಿಡಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಳ್ಳಲು ಸರ್ದಾರ್ಜಿ ಹರಸಾಹಸ ಪಡುತ್ತಿದ್ದ. ಅದೇ ಸಮಯದಲ್ಲಿ ಜಾಗಿಂಗ್ ಮಾಡುತ್ತಿದ್ದ ವ್ಯಕ್ತಿ ಸರ್ದಾರ್ಜಿಯನ್ನು ನೋಡಿ ಸಿಕ್ಕಾಪಟ್ಟೆ ನಗು ಬಂದಿತು.
"ನಮಸ್ಕಾರ ಸಾರ್, ಏನು ಮಾಡ್ತಿದ್ದೀರಾ?" ಅಂತ ದಾರಿಹೋಕ ಸರ್ದಾರ್ಜಿಗೆ ಪ್ರಶ್ನೆ ಹಾಕಿದ.
"ಕಾಣಲ್ವಾ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಸರ್ದಾರ್ಜಿ ಸಖತ್ ರೇಗಿಬಿಟ್ಟ.
"ಅಲ್ಲ ಸ್ವಾಮಿ, ನೇಣು ಹಾಕಿಕೊಳ್ಳಲು ಹಗ್ಗವನ್ನು ಸೊಂಟಕ್ಕಲ್ಲ ಕುತ್ತಿಗೆಗೆ ಬಿಗಿದುಕೊಳ್ಳಬೇಕು" ಎಂದು ಆ ವ್ಯಕ್ತ ಗಹಗಹಿಸಿ ನಕ್ಕ.
ಸರ್ದಾರ್ಜಿಗೆ ಅವಮಾನವಾದಂತಾಗಿ, "ನನಗೇನು ಗೊತ್ತಿಲ್ವಾ, ಮೊದಲು ಅಲ್ಲೇ ಬಿಗಿದುಕೊಂಡಿದ್ದೆ. ಆದರೆ, ಉಸಿರಾಡಿಸಲು ಸಿಕ್ಕಾಪಟ್ಟೆ ಕಷ್ಟವಾಗಿದ್ದರಿಂದ ಇಲ್ಲಿ ಬಿಗಿದುಕೊಂಡಿದ್ದೇನೆ" ಅಂತ ಸಿಡಕ್ಕನೆ ರೇಗಿದ. ಮುಂದೆ ಸರ್ದಾರ್ಜಿ ಏನು ಮಾಡಿದ ಅಂತ ವಿವರಿಸಿ ಹೇಳಬೇಕಾಗಿಲ್ಲ.












Click it and Unblock the Notifications