ಗಂಡ ಹೆಂಡತಿಯ ಮಾತುಕತೆಯಲ್ಲಿನ ಜೋಕ್‌ಗಳು ನಿಮಗಾಗಿ

ನಗು ಯಾರಿಗೆ ತಾನೇ ಬೇಡ...ಆರೋಗ್ಯದ ಜೊತೆಗೆ ಮನಸ್ಸಿಗೆ ಮುದವನ್ನು ನೀಡುವುದು ನಗು. ನಗುವಿಗೆ ಕಾರಣವಾಗುವುದು ಹಾಸ್ಯ ಚಟಾಕಿಗಳು. ಇವು ನಮ್ಮ ನಿತ್ಯ ಬದುಕಿನಲ್ಲಿ ಹಾಸು ಹೊಕ್ಕಾಗಿರುತ್ತವೆ.

ಇಬ್ಬರು ಕೂಡಿದರೇ ಸಾಕು ಯಾವುದೋ ಮಾತು, ಯಾವುದೋ ಕಥೆಯ ನಡುವೆಯೇ ಒಂದು ಹಾಸ್ಯ ಚಟಾಕಿ ಪಟ್ ಎಂದು ಹಾರಿರುತ್ತದೆ. ಹಾಗೆಯೇ ಗಂಡ ಹೆಂಡತಿ ಸಂಬಂಧವು ಕೂಡ. ಇಲ್ಲಿ ಪ್ರತಿಯೊಂದರಲ್ಲೂ ಹಾಸ್ಯವನ್ನು ಹುಡುಕಬಹುದು. ಅಂತಹದ್ದೇ ಕೆಲವು ಘಟನೆಗಳು ಇಲ್ಲಿವೆ. ಓದಿ ನಕ್ಕುಬಿಡಿ.

*ಗಂಡನ ನೆನಪು ಮತ್ತು ಚಹಾ*

ಹೆಂಡತಿ: ರೀ ಇವತ್ತು ಚಹಾ ಮಾಡುವಾಗ ನಿಮ್ಮ ನೆನಪಾಯಿತು

ಗಂಡ (ಪ್ರೀತಿಯಿಂದ): ಓ ಹೌದಾ...

ಹೆಂಡತಿ: ಹೌದು ರೀ ತುಂಬಾ ನೆನಪಾಗುತ್ತಿತ್ತು

ಗಂಡ: ಇದಕ್ಕೆ ಏನು ಮಾಡಿದೆ?

ಹೆಂಡತಿ: ಶುಂಠಿಯನ್ನು ತಗೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿದೆ.

*ಚಪಾತಿ, ಸಮೋಸ ಮತ್ತು ಹೆಂಡತಿ*

ಹೆಂಡತಿ ಚಪಾತಿ ಮಾಡಿ ಗಂಡನಿಗೆ ಬಡಿಸುತ್ತಾಳೆ.

ಗಂಡ: ಚಪಾತಿ ಯಾಕೆ ಇಷ್ಟು ದಪ್ಪ?

ಹೆಂಡತಿ: ಹೌದಾ...ಹೊರಗಡೆ ಸಮೋಸಾ, ಕಚೋರಿ ತಿನ್ನೋಕೆ ಇಷ್ಟು ದೊಡ್ಡದಾಗಿ ಬಾಯಿ ತಗೀತಿರಿ. ಮನೇಲಿ ಮಾತ್ರ ಹೆಂಡತಿ ಮತ್ತು ಚಪಾತಿ ಸಣ್ಣಗೆ ಇರುಬೇಕಾ..? ತೆಪ್ಪಗೆ ತಿನ್ನಿ.

Read Some Husband And Wife Jokes in Kannada

*ಹೊಸ ಸೀರೆ ಮತ್ತು ಹೆಂಡತಿ*

ಹೆಂಡತಿ: ರೀ ಹೊಸ ಸೀರೆ ಕೊಡಿಸಿ

ಗಂಡ: ಈಗ ಹೊಸ ಸೀರೆ ಯಾಕೆ..? ನಿನ್ ಹತ್ರ ಎಷ್ಟು ಸೀರೆಯಿದೆ?

ಹೆಂಡತಿ: ಇರೋದು 120 ಸೀರೆ ಅಷ್ಟೇ!

ಗಂಡ; ಅಂದ್ರೆ ಇರೋ ಸೀರೆಗಳೇ ದಿನಕ್ಕೆ ಒಂದೊಂದು ಅಂದ್ರು 4 ತಿಂಗಳು ಹಾಕಬಹುದಲ್ಲೇ?

ಹೆಂಡತಿ: ಮತ್ತೆ ಉಳಿದ 8 ತಿಂಗಳಿಗೆ ಏನು ಮಾಡೋದು?

*ತಾಳಿ, ಹೆಂಡತಿ ಮತ್ತು ಗಂಡ*

ಹೆಂಡತಿ: ಹೆಣ್ಣು ಮದುವೆ ಆಗಿದೆ ಅಂತ ತೋರ್ಸೋಕೆ ತಾಳಿ ಕಾಲುಂಗುರ ಬಳೆ ಎಲ್ಲಾ ಹಾಕ್ತಾರೆ. ಆದ್ರೆ ನಿಮಗೆ ಮದುವೆಯಾಗಿದೆ ಅಂತ ಹೇಗೆ ಗೊತ್ತಾಗುತ್ತೆ?

ಗಂಡ: ನಮ್ಮ ಮುಖ ನೋಡಿದ್ರೆ ಸಾಕು ಜನಕ್ಕೆ ಗೊತ್ತಾಗುತ್ತೆ.

*ದೇಶ ಮತ್ತು ರಾಷ್ಟ್ರ*

ಹೆಂಡತಿ: ದೇಶ ಮತ್ತು ರಾಷ್ಟ್ರಕ್ಕೆ ಇರುವ ವ್ಯತ್ಯಾಸ ಹೇಳಿ

ಗಂಡ: ಏನೂ ವ್ಯತ್ಯಾಸವಿಲ್ಲ ಕಣೇ. ಎರಡು ಒಂದೇ

ಹೆಂಡತಿ: ಇಲ್ಲ ರೀ ದೇಶ ದೇ ಅಕ್ಷದರಿಂದ, ರಾಷ್ಟ್ರ ರಾ ಅಕ್ಷರದಿಂದ ಆರಂಭವಾಗುತ್ತೆ.

*ಎಲೆಕ್ಟ್ರಿಸಿಟಿ ಮತ್ತು ಗಂಡ*

ಹೆಂಡತಿ: ರೀ ಮನುಷ್ಯ ಬದುಕೋಕೆ ಆಗದೆ ಇರೋ ಸಿಟಿ ಯಾವುದು ಹೇಳಿ

ಗಂಡ: ಲೇ ಅಂತದ್ಯಾವ ಸಿಟಿ ಇರುತ್ತೆ? ಮನುಷ್ಯ ಬದುಕಿರೋದಕ್ಕೆ ಅದನ್ನ ಸಿಟಿ ಅನ್ನೋದು

ಹೆಂಡತಿ: ಹಾಗಾದ್ರೆ ಎಲೆಕ್ಟ್ರಿಸಿಟಿನಲ್ಲಿ ಬದುಕಿರುವ ಮನುಷ್ಯನನ್ನು ತೋರಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+