ಅಕ್ಕತಂಗಿ ಮಾತು ಕೇಳಿ ಯುವಕ ಕಕ್ಕಾಬಿಕ್ಕಿ
ಗೋಟಿ ಗಡ್ಡ, ಕೆದರಿದ ಕೂದಲು, ವಿಚಿತ್ರ ಟೀಶರ್ಟು, ಸೊಂಟದಿಂದ ಕೆಳಗೆ ಇಳಿದ ಜೀನ್ಸ್ ತೊಟ್ಟಿದ್ದ ಕಡ್ಡಿ ಮೈಕಟ್ಟಿನ ಯುವಕನೊಬ್ಬ ಔಷಧಿ ಅಂಗಡಿಗೆ ಬರುತ್ತಾನೆ. ಅಲ್ಲಿ ಇಬ್ಬರು ಹದಿಹರೆಯದ ಯುವತಿಯರು ಗ್ರಾಹಕರಿಗಾಗಿ ಕಾಯುತ್ತಿರುತ್ತಾರೆ. ಆದರೆ, ಈತ ಮಾತ್ರ ಏನನ್ನೂ ಕೇಳದೆ ಅತ್ತಿಂದಿತ್ತ ಅನುಮಾನಾಸ್ಪದವಾಗಿ ನೋಡಲು ಆರಂಭಿಸುತ್ತಾನೆ.
ಸುಂದರ ಯುವತಿಯರಿಬ್ಬರು ಅಕ್ಕತಂಗಿಯರು. ಇಬ್ಬರೂ ಒಬ್ಬರಿಗೊಬ್ಬರು ಮುಖಮುಖ ನೋಡ್ಕೊಂಡು ಕಿಸಕ್ಕನೆ ನಕ್ಕು, ಏನು ಬೇಕೆಂದು ಯುವಕನನ್ನು ಕೇಳಿದರು. ವಿಪರೀತ ಮುಜುಗರದಿಂದ ಮುದುಡಿದಂತಾಗಿದ್ದ ಗೋಟಿ ಗಡ್ಡದ ಯುವಕ ಇನ್ನಷ್ಟು ಕೆಂಪೇರಿ, "ಇಲ್ಲಿ ಯಾರೂ ಗಂಡಸರಿಲ್ವಾ?" ಎಂದು ಕೇಳಿದ. ಅಷ್ಟು ಕೇಳುವ ಹೊತ್ತಿಗೆ ಬೆವರೊಡೆದಿದ್ದ.
"ಇಲ್ಲಿ ಗಂಡಸರಾರೂ ಇಲ್ಲ. ಈ ಫಾರ್ಮಸಿ ನಡೆಸುತ್ತಿರುವವರು ನಾವಿಬ್ಬರೇ ಅಕ್ಕತಂಗಿಯರು. ಏನು ಬೇಕೋ ನಿಸ್ಸಂಕೋಚವಾಗಿ ಕೇಳಿ, ಪರವಾಗಿಲ್ಲ, ಖಂಡಿತ ಹೆಲ್ಪ್ ಮಾಡ್ತೀವಿ" ಎಂದು ತಂಗಿ ಉತ್ತರಿಸಿದಳು.
ಕಡೆಗೂ ಧೈರ್ಯ ತಂದುಕೊಂಡ ಯುವಕ, "ಹೇಳೋದಕ್ಕೆ ಸಿಕ್ಕಾಪಟ್ಟೆ ಮುಜುಗರ. ನಾನು... ನಾನು ನಿಮಿರು ಸಾಫಲ್ಯತೆಯಿಂದ ಬಳಲ್ತಿದ್ದೇನೆ. ಇದರಿಂದ ತುಂಬಾ ತೊಂದರೆ ಮತ್ತು ಮುಜುಗರ ಅನುಭವಿಸುತ್ತಿದ್ದೇನೆ. ಡಾಕ್ಟ್ರು ಬಳಿ ಹೋಗೋಕೆ ಕಾಸಿಲ್ಲ. ಪ್ರಿಸ್ಕ್ರಿಪ್ಶನ್ ನನ್ನ ಬಳಿ ಇಲ್ಲ. ನೀವೇ ಏನಾದರೂ ಇದಕ್ಕೆ ಔಷಧಿ ಕೊಡೋಕೆ ಆಗತ್ತಾ?" ಎಂದು ಕಷ್ಟಪಟ್ಟು ತನ್ನ ತೊಂದರೆ ನಿವೇದಿಸಿಕೊಂಡ.
ಸಣಕಲ ಕಡ್ಡಿಯಾದರೂ ಪರವಾಗಿಲ್ವೆ ಅಂತ ಮನದಲ್ಲೇ ಅಂದುಕೊಂಡ ಇಬ್ಬರೂ ಅಕ್ಕತಂಗಿಯರು, "ಒಂದ್ನಿಮಿಷ ಇಲ್ಲೇ ಇರು" ಎಂದವರೇ ಪುಸಕ್ಕನೆ ಒಳಹೋಗಿಬಿಟ್ಟರು. ಇವನಿಗೋ ಅಚ್ಚರಿ. ಅದೇನೋ ಟುಸುಪುಸು ಮಾತಾಡಿಕೊಂಡು ಬಂದರು.
ಅವರಿಬ್ಬರಲ್ಲಿ ಹೆಚ್ಚು ಸುಂದರವಾಗಿದ್ದ ಮತ್ತು ಬಲುಮಸ್ತಾಗಿದ್ದ ಅಕ್ಕ, "ನಮ್ಮ ಅಂಗಡಿಯ ಮೂರನೇ ಒಂದು ಭಾಗದ ಮಾಲಿಕತ್ವ ನಿನಗೇ ಬಿಟ್ಟುಕೊಡುತ್ತೇವೆ. ಅಲ್ಲದೆ, ಒಂದು ತಿಂಗಳಿಗೆ 10 ಸಾವಿರ ರು. ಕೊಡುತ್ತೇವೆ" ಎಂದಾಗ ಅವರು ಏನು ಹೇಳುತ್ತಿದ್ದಾರೋ ಎಂಬುದು ಒಂಚೂರು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದ.












Click it and Unblock the Notifications