ಸಿಗರೇಟ್ ಸೇದುತ್ತಲೇ ಪ್ರಾಬ್ಲಂ ಹೇಳು, ಕಮಾನ್!

ನೋಡಿದೊಡನೆ ಎಪ್ಪತ್ತರ ಹರೆಯದ ವಯಸ್ಕರು ಕೂಡ ಇಪ್ಪತ್ತರ ವಯಸ್ಸಿನ ಕನಸಿಗೆ ಜಾರುವಂಥ, ಪರ್ಪೆಕ್ಟ್ ಸ್ಟಾಟಿಸ್ಟಿಕ್ಸ್ ಇರುವಂಥ ಸುಂದರ ತರುಣಿಯೊಬ್ಬಳು ಅಪಾಯಿಂಟ್ಮೆಂಟ್ ತೆಗೆದುಕೊಂಡು ಡಾ. ಡಿಬ್ಬಿ ಬಳಿಗೆ ಬಂದಳು. ಆಕೆಯನ್ನು ನೋಡಿದೊಡನೆ ಇಪ್ಪತ್ತೇಳರ ಡಿಬ್ಬಿಯ ಹೃದಯ ಡಬಡಬ ಹೊಡೆದುಕೊಳ್ಳಲು ಆರಂಭಿಸಿತು. ಅಂಥ ಪೇಷಂಟನ್ನು ತನ್ನ ಜನುಮದಲ್ಲೇ ಆತ ನೋಡಿರಲಿಲ್ಲ.

ಡಾ. ಡಿಬ್ಬಿ : ಏನು ನಿನ್ನ ಹೆಸರು? ವಯಸ್ಸೆಷ್ಟು? ಏನು ತೊಂದರೆ?

ಯುವತಿ : ಹೆಸರು ಲವೀನಾ ಡಾಕ್ಟ್ರೆ. ವಯಸ್ಸು ಇಪ್ಪತ್ತೊಂದಕ್ಕೆ ಇನ್ನೊಂದೇ ವಾರ ಬಾಕಿಯಿದೆ. ತೊಂದರೆ.... ಒಂದು ವಿಚಿತ್ರವಾದ ತೊಂದರೆಯಿಂದ ಬಳಲುತ್ತಿದ್ದೀನಿ.

ಡಾ. ಡಿಬ್ಬಿ : ಅದೇನು ಸವಿವರವಾಗಿ ಹೇಳು, ನಾಚ್ಕೋಬೇಡ.

ಲವೀನಾ : ನನಗೆ ನನ್ನ ಗಂಡ ಮನೇಲಿಲ್ಲದಾಗ ಆಗಾಗ ಸಿಗರೇಟ್ ಸೇದುವ ಹುಚ್ಚಿದೆ. ಆಗ ವಿಚಿತ್ರ ಅನುಭವ ಆಗಲು ಪ್ರಾರಂಭಿಸುತ್ತದೆ.

ಡಾ. ಡಿಬ್ಬಿ : ವಿಚಿತ್ರ ಅನುಭವನಾ? ಅಂದ ಹಾಗೆ, ಕಾಶಿನಾಥ್ ಅವರ ಅನುಭವ ಪಿಕ್ಚರ್ ನೋಡಿದ್ಯಾ?

ಲವೀನಾ : ಆ ಅನುಭವ ನೆಗೆದುಬಿದ್ದು ಹೋಗ್ಲಿ. ನನ್ನ ಅನುಭವದ ಬಗ್ಗೆ ಕೇಳಿ. ಸಿಗರೇಟ್ ಅಂಟಿಸಿದೊಡನೆ ವಿಚಿತ್ರವಾಗಿ ಆಗಲು ಆರಂಭಿಸುತ್ತದೆ. ನಿಂತಲ್ಲಿ ನಿಲ್ಲಲು ಆಗುವುದಿಲ್ಲ, ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ. ಒಂದು ಜುರಕಿ ಎಳೆಯುತ್ತಿದ್ದಂತೆ ಬಟ್ಟೆ...

ಡಾ. ಡಿಬ್ಬಿ : ವೇಟ್ ವೇಟ್, ಗಡಿಬಿಡಿ ಮಾಡಬೇಡ ನಿಧಾನವಾಗಿ ಹೇಳು.

ಲವೀನಾ : ಒಂದು ಜುರಕಿ ಎಳೆಯುತ್ತಿದ್ದಂತೆ ನನಗೇ ತಿಳಿಯದಂತೆ ಸೀರೆ ಬಿಚ್ಚಿ ಬಿಸಾಕಿರ್ತೀನಿ. ಎರಡನೇ ದಮ್ಮಿಗೆ ಬ್ಲೌಸ್...

ಆಕೆ ಮುಂದಿನ ವಿವರ ಹೇಳುವಷ್ಟರಲ್ಲಿ ಡಿಬ್ಬಿ ಆಕೆಯನ್ನು ಮತ್ತೆ ತಡೆಯುತ್ತಾನೆ. "ನನಗೆ ನೀನು ಏನು ಹೇಳಿತ್ತಿದ್ದಿಯಾ, ನಿನಗೇನಾಗುತ್ತಿದೆ ಒಂದೂ ತಿಳಿಯುತ್ತಿಲ್ಲ. ಒಂದ್ನಿಮಿಷ ಬಂದೆ ತಾಳು" ಎಂದು ಹೊರಗೋಡಿದವನೆ ಒಂದು ಫುಲ್ ಸಿಗರೇಟ್ ಪ್ಯಾಕ್ ಕೈಯಲ್ಲಿ ಹಿಡಿದುಕೊಂಡು ಬಂದು, "ಹಂಗೇ ಬಾಯಲ್ಲಿ ಹೇಳಿದ್ರೆ ಅರ್ಥವಾಗಲ್ಲ. ಈ ಸಿಗರೇಟ್ ಸೇದುತ್ತಲೇ ಎಲ್ಲವನ್ನೂ ಸವಿವರವಾಗಿ ಹೇಳು, ಕಮಾನ್..."

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+