ಕ್ಷಣಾರ್ಧದಲ್ಲಿ ನನ್ನ ಟಚ್ ಮಾಡಿ ಓಡಿಹೋಗುತ್ತಾನೆ
ಗಜಲಕ್ಷ್ಮೀ ತನ್ನ ಗಂಡನ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು. ಗಂಡ ಸೀತಾಪತಿ ಬೇರೆ ದಾರಿಯಿಲ್ಲದೆ ಸಮ್ಮತಿ ಸೂಚಿಸಿದ್ದ. ವಿಚ್ಛೇದನ ಅರ್ಜಿ ಹಾಕಲು ಕಾರಣವೇನೆಂದರೆ, ಗಜಲಕ್ಷ್ಮೀ ಮತ್ತು ಸೀತಾಪತಿ ಮದುವೆಯಾಗಿ 10 ವರ್ಷಗಳಾಗಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ ಮತ್ತು ಅಜಾನುಬಾಹು ವ್ಯಕ್ತಿತ್ವದ ಸೀತಾಪತಿ ತನ್ನ ಹೆಂಡತಿಗೆ ಹಾಸಿಗೆಯಲ್ಲಿ ಸುಖ ನೀಡಲು ಸಂಪೂರ್ಣ ವಿಫಲನಾಗಿದ್ದನು.
ಇದರಿಂದ ರೋಸಿಹೋಗಿದ್ದ ಗಜಲಕ್ಷ್ಮೀ ಸೋಡಚೀಟಿ ನೋಟೀಸ್ ಕಳಿಸಿ ಕೌಟುಂಬಿಕ ಕೋರ್ಟಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಒಂದು ದಿನ ಕೇಸ್ ವಿಚಾರಣೆಗೆ ಬಂದಿತು. ಗಜಲಕ್ಷ್ಮೀಯನ್ನು ಕಟಕಟೆಯಲ್ಲಿ ನಿಲ್ಲಿಸಿದ ನ್ಯಾಯಾಧೀಶರು ವಿಚಾರಣೆ ಆರಂಭಿಸಿದರು.
ನ್ಯಾಯಾಧೀಶ : ಏನಮ್ಮಾ, ಯಾವ ಕಾರಣಕ್ಕೆ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಿಯಾ?
ಗಜಲಕ್ಷ್ಮೀ : ಮಹಾಸ್ವಾಮಿ, ಈ ಹತ್ತು ವರ್ಷಗಳಲ್ಲಿ ಒಂದು ದಿನವೂ ನನ್ನ ಗಂಡ ಸೀತಾಪತಿ ನನಗೆ ಸುಖ ನೀಡಿಲ್ಲ. ಆತ ಪುರುಷನೇ ಅಲ್ಲ ಅನ್ನುವ ಅನುಮಾನವಿದೆ.
ನ್ಯಾಯಾಧೀಶ : ಅದು ಹ್ಯಾಗೆ ಹೇಳ್ತೀಯಾ? ನನಗೆ ತಿಳಿದ ಮಟ್ಟಿಗೆ ನಿನ್ನ ಗಂಡ ಜಿಲ್ಲಾಮಟ್ಟದ ಖ್ಯಾತ ಕಬಡ್ಡಿ ಆಟಗಾರನಲ್ಲವಾ?
ಗಜಲಕ್ಷ್ಮೀ : ತೊಂದರೆ ಇರುವುದು ಅಲ್ಲೇ ಸ್ವಾಮಿ, ಕಬಡ್ಡಿ ಕಬಡ್ಡಿ ಅಂತ ಹಾಸಿಗೆಗೆ ಬರುತ್ತಾನೆ, ನಾನು ಇನ್ನೇನು ಆತನನ್ನು ಕ್ಯಾಚ್ ಹಾಕಿಕೊಳ್ಳಬೇಕು, ಕ್ಷಣಾರ್ಧದಲ್ಲಿ ನನ್ನ ಟಚ್ ಮಾಡಿ ಓಡಿಹೋಗುತ್ತಾನೆ.












Click it and Unblock the Notifications