ನಾಚಿಕೆಯಿಲ್ಲದ ಜನ ನನ್ನ ಬಟ್ಟೆ ತೆಗೆದು ತಿನ್ನುತ್ತಾರೆ

Posted By: ರಾಜೇಶ್ ಕಾಮತ್
Subscribe to Oneindia Kannada

ಒಂದು ದಿನ ನಿಂಬೆಹಣ್ಣು, ಬಾಳೆಹಣ್ಣು ಮತ್ತು ತೆಂಗಿನಕಾಯಿ ತಮ್ಮತಮ್ಮ ನೋವಿನ ಕಥೆಗಳನ್ನು

ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದವು.

ನಿಂಬೆಹಣ್ಣು : ಮನುಷ್ಯರು ಅತೀ ನಿರ್ಧಯೆಯಿಂದ ನನ್ನನ್ನು ಕತ್ತರಿಸುತ್ತಾರೆ ಮತ್ತು
ಸಂಪೂರ್ಣವಾಗಿ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ.
ಬಾಳೆಹಣ್ಣು : ನಿನ್ ವಿಷಯ ಏನೂ ಅಲ್ಲ..ಬಿಡು.. ನಾಚಿಕೆಯಿಲ್ಲದ ಜನ ನನ್ನ ಬಟ್ಟೆ ತೆಗೆದು ತಿನ್ನುತ್ತಾರೆ!!
ತೆಂಗಿನಕಾಯಿ : ಅವರೆಲ್ಲರ ಮಾತು ಕೇಳಿ ತೆಂಗಿನಕಾಯಿ ಹೇಳಿತು.. ಅಣ್ಣಂದಿರಾ...
ನಿಮಗಾಗಿರೋದು ಏನೇನು ಅಲ್ಲ...ಈ ಜನಗಳು ನನ್ನನ್ನು ಎಷ್ಟು ಜೋರಾಗಿ ಕಲ್ಲಿನಮೇಲೆ ಹೊಡಿತಾರಂದ್ರೆ..
ಆ ಹೊಡಿಯೋ ರಭಸಕ್ಕೆ ನನಗೆ ಸು.. ಸು.. ಬಂದ್ಬಿಡುತ್ತೆ!! ಈ ಜನಗಳು ಅದನ್ನೂ ಬಿಡದೆ
ಲೋಟದಲ್ಲಿ ಹಾಕೊಂಡ್ ಕುಡಿತಾರೆ! (ವಾಟ್ಸಾಪ್)
--
ತಲೆಯಲ್ಲಿ ಎಂಟೇ ಎಂಟು ಕೂದಲಿದ್ದ ಗ್ರಾಹಕನೋರ್ವ ಕಟ್ಟಿಂಗ್ ಶಾಪ್ ಗೆ ಹೋಗುತ್ತಾನೆ.
ಗ್ರಾಹಕನನ್ನು ನೋಡಿ ಆವಕ್ಕಾದ ಕ್ಷೌರಿಕ : ಕೂದಲನ್ನು ಕಟ್ ಮಾಡ್ಲಾ, ಅಥವಾ ಕೌಂಟ್ ಮಾಡ್ಲಾ ಎಂದು ಕಿಚಾಯಿಸುತ್ತಾನೆ...
ಅದಕ್ಕೆ ಗ್ರಾಹಕ: ಎರಡೂ ಮಾಡಬೇಡ, ಅದಕ್ಕೆ ಡೈ ಹೊಡಿ...
--
ಹೆಂಡತಿ: ಏನ್ರೀ.. ಮಾಡ್ತಾ ಇದ್ದೀರಾ?
ಗಂಡ: ಸೊಳ್ಲೆಗಳನ್ನು ಸಾಯಿಸ್ತಾ ಇದ್ದೀನಿ...
ಹೆಂಡತಿ: ಎಷ್ಟು ಸೊಳ್ಳೆಗಳನ್ನು ಸಾಯ್ಸಿದ್ರಿ.. ಇದುವರೆಗೆ?
ಗಂಡ: ಐದು, ಅದರಲ್ಲಿ ಮೂರು ಗಂಡು, ಎರಡು ಹೆಣ್ಣು...
ಹೆಂಡತಿ: ಗಂಡು, ಹೆಣ್ಣು .. ಅದು ಹೇಗೆ ಕರೆಕ್ಟಾಗಿ ಹೇಳ್ತೀರಾ?
ಗಂಡ: ಅಯ್ಯೋ ಸಿಂಪಲ್ ಕಣೇ..ಎರಡು ಕನ್ನಡಿಯತ್ರ ಇತ್ತು, ಇನ್ನು ಮೂರು ಬಿಯರ್ ಬಾಟಲ್ ಹತ್ರ ಸುತ್ತುತ್ತಿತ್ತು..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jokes for the day: Funny dialogue between customer and barber, husband and wife.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ