ಬಿಎಸ್ವೈ ಸರಕಾರದ ಸಂಪುಟ ವಿಸ್ತರಣೆ ಮತ್ತು ಒಂದು ಮೀನಿನ ಕಥೆ

ಈಗ ತಾನೇ ಖಾತೆ ಹಂಚಿಕೆ ಆಗಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಆರು ಬಾರಿ ಶಾಸಕರಾಗಿರುವ ಅಂಗಾರ ಅವರಿಗೆ ಮೀನು ಮತ್ತು ಬಂದರು ಖಾತೆ ಕೊಟ್ಟಿದ್ದಾರೆ.

ಸಿ.ಪಿ. ಯೋಗೇಶ್ವರ್ ಅವರಿಗೆ ಸಿಎಂ ಯಡಿಯೂರಪ್ಪನವರು 'ದೊಡ್ಡ'ಮನಸ್ಸು ಮಾಡಿ 'ಸಣ್ಣ' ನೀರಾವರಿ ಕೊಟ್ಟಿದ್ದಾರೆ. ಕೊಟ್ಟಿಲ್ಲದಿದ್ದರೆ ಅವರು 'ಸಿಡಿ'ಯುತ್ತಿದ್ದರೊ ಏನೋ? ಯಾವನಿಗೊತ್ತು.

ಆದರೆ ವಿಷಯ ಅದಲ್ಲ, ವಿಷಯಕ್ಕೆ ಬರುವುದಾದರೆ, ಕರಾವಳಿಯ ಶಾಸಕರಿಗೆ ಮೀನಿನ ಖಾತೆ ಯಾಕೆ? ಕಾಂಗ್ರೆಸ್ ಇರಲಿ.. ಬಿಜೆಪಿ ಇರಲಿ...ಎಲ್ಲರೂ ಮಾಡಿದ್ದು ಇದನ್ನೇ.. ಮೀನು ಎಲ್ಲರಿಗೂ ಬೇಕು ತಿನ್ನಲು, ಆದರೆ ಖಾತೆ ಯಾರಿಗೂ ಬೇಡ..

Jokes For The Day: BSY Government Cabinet Portfolio Allotment And Ministership To Angara

ಇಂಧನ, ನೀರಾವರಿ, ಲೊಕೋಪಯೋಗಿ ಇಂಥ ಖಾತೆಗಳಲ್ಲಿ ದುಡ್ಡು ಸಿಕ್ಕಾಪಟ್ಟೆ. ನಮ್ಮ ಕರಾವಳಿಯ ಶಾಸಕರು ಇಂಥ ಶ್ರೀಮಂತ ಖಾತೆಗಳಿಂದ ಅವಕಾಶ ವಂಚಿತರಾಗಿ ಬಹಳ ಮಳೆಗಾಲ ಕಳೆದಿದೆ.

ನಮ್ಮ ಪಾಲಿಗೆ ಏನಿದ್ದರೂ ಬಂಗುಡೆ, ಭೂತಾಯಿ, ನಂಗ್‌, ಪೊಡಿ ಮೀನೇ ಗತಿ. (ಮುಜರಾಯಿ, ಪಶು, ಮೀನು, ಬಂದರು). ಅವರು "ಕರಾವಳಿಯವರು ಭಾರೀ ಬುದ್ದಿವಂತರು" ಅಂತ ಹೇಳಿ ಅಟ್ಟಕ್ಕೆ ಏರಿಸಿದ್ದೇ ಏರಿಸಿದ್ದು..
ನಾವು ಏರಿದ್ದೇ ಏರಿದ್ದು...

ತಲೆಮಾರಿನಿಂದ ಅವರು ತಿಂದದ್ದು ಅಂಜಲು..ನಾವು ನೋಡಿ ಸುರಿಸಿದ್ದು ಎಂಜಲು. ಎಂತ ಕರ್ಮ ಮಾರ್ರೆ... (ವಾಟ್ಸಾಪ್ ನಲ್ಲಿ ಬಂದಿದ್ದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+