• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯೂಟಿಫುಲ್ ಲೇಡಿ ಸೆಕ್ರೆಟರಿಗೆ ಬಾಸ್, ಸಂಜೆ ಫ್ರೀ ಇದ್ದೀಯಾ ಎಂದು ಕೇಳಿದಾಗ..

By ಅಭಿಜಿತ್
|
Google Oneindia Kannada News

ಶಾಲೆಯೊಂದರಲ್ಲಿ ಟೀಚರ್ ಮಾನವೀಯತೆ, ಪರೋಪಕಾರದ ಬಗ್ಗೆ ಪಾಠ ಮಾಡುತ್ತಾ..
ಶಿಕ್ಷಕಿ : ಯಾರು ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುತ್ತಾರೋ ಅವರೇ ನಿಜವಾದ ಮನುಷ್ಯರು.
ವಿದ್ಯಾರ್ಥಿ: ಆದರೆ ಪರೀಕ್ಷೆಯ ಹಾಲ್ ನಲ್ಲಿ ನೀವು ಯಾಕೆ ಮನುಷ್ಯರಾಗಿ ಇರುವುದಿಲ್ಲ, ಯಾಕೆ ಬೇರೆಯವರನ್ನು ಮನುಷ್ಯರಾಗಿ ಇರೋಕೆ ಬಿಡೋಲ್ಲಾ..
ಶಿಕ್ಷಕಿ: ಮುಚ್ಚೋ ಬಾಯ್..
---

ಗಂಡ - ಹೆಂಡತಿಯ ನಡುವೆ ಚರ್ಚೆ ನಡೆಯುತ್ತಿತ್ತು..

ಗಂಡ: ನನ್ನ ಮೇಲೆ ಸಿಟ್ಟು ಬಂದರೆ, ಅದನ್ನು ಯಾವ ರೀತಿ ತೋರಿಸುತ್ತೀಯಾ?
ಹೆಂಡತಿ: ಟಾಯ್ಲೆಟ್ ಕ್ಲೀನ್ ಮಾಡಿ..
ಗಂಡ: ಎಂಥಾ ಹುಚ್ಚಿ ಕಣೇ ನೀನು..
ಹೆಂಡತಿ: ನಾನು ಟಾಯ್ಲೆಟ್ ತೊಳೆಯುವುದು ನಿಮ್ಮ ಟೂತ್ ಬ್ರಷ್ ನಿಂದ..

--
ಆಫೀಸ್ ಒಂದರಲ್ಲಿ ಕೆಲಸ ಮಾಡುವ ಸುಂದರ ಸೆಕ್ರೆಟರಿ ಕೋಪದಿಂದ, ಬಾಸ್ ಕ್ಯಾಬಿನ್ ನಿಂದ ಸಿಟ್ಟಿನಿಂದ ಹೊರಗೆ ಬರುತ್ತಾಳೆ. ಅವಳ ಸಹದ್ಯೋಗಿ ಆಕೆಯನ್ನು ಕೇಳುತ್ತಾಳೆ

ಲಾಕ್ಡೌನ್ ಟೈಮ್ ನಲ್ಲಿ ಜೋಕ್ಸ್: ಪಮ್ಮಿಗೆ ಕಾಲ್ ಮಾಡಿದ್ರೆ...ಲಾಕ್ಡೌನ್ ಟೈಮ್ ನಲ್ಲಿ ಜೋಕ್ಸ್: ಪಮ್ಮಿಗೆ ಕಾಲ್ ಮಾಡಿದ್ರೆ...

ಸಹದ್ಯೋಗಿ: ಯಾಕೆ ಏನಾಯಿತು?
ಸೆಕ್ರೆಟರಿ: ಇಂದು ಸಂಜೆ ಫ್ರೀ ಇದ್ದೀಯಾ ಅಂತ ಬಾಸ್ ಕೇಳ್ತಾ ಇದ್ದಾರೆ..
ಸಹದ್ಯೋಗಿ: ನೀನು ಏನ್ ಹೇಳಿದೆ?
ಸೆಕ್ರೆಟರಿ: ಹೌದು ಸರ್, ಫ್ರೀ ಇದ್ದೀನಿ ಅಂದೆ..
ಸಹದ್ಯೋಗಿ: ಅದಕ್ಕೆ, ಬಾಸ್ ಏನಂದ್ರು?
ಸೆಕ್ರೆಟರಿ: ಹುಚ್ಚ.. ಅರವತ್ತು ಪೇಜ್ ಡಾಕ್ಯುಮೆಂಟ್ ಟೈಪ್ ಮಾಡಿ, ಆಮೇಲೆ ಮನೆಗೆ ಹೋಗು ಅಂದಾ..

English summary
Jokes For The Day, Boss Asked Lady Secretary Are You Free In The Evening
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X