• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಹಬ್ಬದ ಜೋಕ್ಸ್, ಗಂಡ ಹೆಂಡತಿ, ಕುಡುಕನ ಹಾಸ್ಯ

|
Google Oneindia Kannada News

ಹಾಸ್ಯ ಯಾರಿಗೆ ಇಷ್ಟವಾಗಲ್ಲ ಹೇಳಿ. ಬಿಡುವಿಲ್ಲದ ಜೀವನದಲ್ಲಿ ಒಂದಿಷ್ಟು ಹಾಸ್ಯ ರಸಾಯನ ಇದ್ದರೆ ಚಂದ, ಇಲ್ಲವಾದರೆ ನಮ್ಮ ಬುದ್ಧಿ ಮಂದ ಮಂದ...

ರಾಜ್ಯದ ಬಹುತೇಕ ಕಡೆ ಸುರಿಯುತ್ತಿರುವ ಮಹಾ ಮಳೆ ಮತ್ತು ಸೃಷ್ಟಿಯಾಗಿರುವ ಪ್ರವಾಹ ಸ್ಥಿತಿಯಲ್ಲೂ ವಾಟ್ಸಾಪ್‌ನಲ್ಲಿ ಜೋಕ್ಸ್‌ಗೇನು ಬರವಾಗಿಲ್ಲ. ವೈರಲ್ ಆಗಿರುವ ಒಂದೆರಡು ಜೋಕ್ಸ್ ಇಲ್ಲಿದೆ. ಜೊತೆಗೆ ಗಂಡ ಹೆಂಡತಿ ನಡುವಿನ ಜಗಳ, ಅತ್ತೆ ಅಳಿಯನ ಸಂವಾದ, ಡಾಕ್ಟರ್ ರೋಗಿ ಮಾತುಕತೆ ಮೊದಲಾದ ಹಾಸ್ಯಗಳು ಇಲ್ಲಿವೆ.

ಸಖತ್ ಜೋಕ್ಸ್: ನನ್ ಸಿನಿಮಾದಲ್ಲಿ ನಟಿಸ್ತೀಯಾ? ಹೆಂಡ್ತಿಗೆ ಗಂಡ ಕೊಟ್ಟ ಆಫರ್! ಸಖತ್ ಜೋಕ್ಸ್: ನನ್ ಸಿನಿಮಾದಲ್ಲಿ ನಟಿಸ್ತೀಯಾ? ಹೆಂಡ್ತಿಗೆ ಗಂಡ ಕೊಟ್ಟ ಆಫರ್!

ಗಣೇಶ ಮತ್ತು ಮಳೆ:
"ಮೊದಲೆಲ್ಲಾ ಗಣೇಶನ ಬಿಡಲು ಕೆರೆ, ಕಟ್ಟೆ, ಹೊಳೆಗೆ ಹೋಗಬೇಕಾಗಿತ್ತು. ಈಗ ಕೆರೆಗಳೇ ಮನೆ ಬಳಿ ಬರುತ್ತಿವೆ."

"ಶಿವ ಶಿವ, ಹಬ್ಬಕ್ಕೆ ಗೌರಮ್ಮನ ಕಳುಹಿಸು ಎಂದರೆ ಗಂಗಮ್ಮನೂ ಕಳುಹಿಸಿಕೊಟ್ಟಿದ್ದೀಯಲ್ಲಪ್ಪ.... ಏಕೋ ಈ ಕೋಪ ಶಂಕರಾ, ಶಿವಶಂಕರ..."

ಲಾಟರಿ ಮತ್ತು ಹೆಂಡತಿ

ಲಾಟರಿ ಮತ್ತು ಹೆಂಡತಿ

ಗಂಡ: ನಂಗೆ ಲಾಟರಿ ಹೊಡೆದ್ರೆ ಏನ್ ಮಾಡ್ತೀಯ?
ಹೆಂಡತಿ: ಲಾಟರಿ ದುಡ್ಡಲ್ಲಿ ನಂಗೆ ಅರ್ಧ ಕೊಟ್ ಬಿಡ್ರಿ. ನಾನು ಪರ್ಮನೆಂಟ್ ಆಗಿ ಅಮ್ಮನ ಮನೆಗೆ ಹೋಗಿ ಇದ್ ಬಿಡ್ತೀನಿ.
ಗಂಡ: ನೂರು ರೂಪಾಯಿ ಲಾಟರಿ ಹೊಡ್ತಿದೆ. 50 ರೂಪಾಯಿ ತಗೊಂಡು ನಿನ್ ಮನೆಗ್ ಹೋಗು.

ಪೈಲಟ್ ಅಳಿಯ

ಪೈಲಟ್ ಅಳಿಯ

ಹುಡುಗನದ್ದು ಏರ್‌ಲೈನ್ಸಲ್ಲಿ ಕೆಲಸ. ಮಗಳ ಜೀವನ ಆಕಾಶದಲ್ಲಿ ತೇಲಾಡ್ತಾ ಇರ್ತದೆ ಅಂತ ಧಾಮ್ ಧೂಮ್ ಅಂತ ಮದುವೆ ಮಾಡ್ತಾರೆ. ಮದುವೆ ಎಲ್ಲಾ ಆದ್ಮೇಲೆ ಯಾರೋ ಬಂದು, ಹುಡುಗ ಏರ್‌ಲೈನ್ಸಲ್ಲಿ ಕೆಲಸ ಮಾಡೋಲ್ಲ, ಅವ ಲೋಕಲ್ ಅಂತ ಹೇಳ್ತಾರೆ. ಅತ್ತೆ ನೇರವಾಗಿ ಅಳಿಯನನ್ನೇ ವಿಚಾರಿಸ್ತಾರೆ:

ಅತ್ತೆ: ಅಳಿಯಂದ್ರೆ, ನೀವು ಏನ್ ಕೆಲಸ ಮಾಡ್ತೀರಿ?
ಅಳಿಯ: ನಾನು ಪೈಲಟ್ ಅಗಿದೀನಿ
ಅತ್ತೆ: ಯಾವ ಏರ್‌ಲೈನ್ಸಲ್ಲಿ ಪೈಲಟ್ ಆಗಿದೀರಿ?
ಅಳಿಯ: ಮದುವೆ ಮನೇಲಿ ಡ್ರೋನ್ ಹಾರಿಸೋ ಕೆಲಸ ಮಾಡ್ತೀನಿ ಅತ್ತೆ.
ಅಳಿಯನ ಮಾತು ಕೇಳಿ ಅತ್ತೆಗೆ ತಲೆ ಸುತ್ತು...

ಕುಡುಕ ರೋಗಿ

ಕುಡುಕ ರೋಗಿ

ಡಾಕ್ಟರ್: ಹೇಗಿದೀರಿ? ಕುಡಿಯೋದನ್ನು ಬಿಟ್ಟಿದ್ದೀರೋ ಇಲ್ಲವೋ?
ರೋಗಿ: ಈಗ ಕುಡಿಯೋದನ್ನ ಬಿಟ್ಟಿದ್ದೀನಿ ಡಾಕ್ಟ್ರೆ, ಆದ್ರೆ, ಯಾರಾದ್ರೂ ಜಾಸ್ತಿ ಫೋರ್ಸ್ ಮಾಡಿದ್ರೆ ಕುಡೀತೀನಿ ಅಷ್ಟೇ.
ಡಾಕ್ಟರ್: ಸೂಪರ್... ನಿಮ್ ಜೊತೆ ಇದಾರಲ್ಲ ಇವರು ಯಾರು? ನಿಮ್ಮ ತಮ್ಮನಾ?
ರೋಗಿ: ನಂಗೆ ಕುಡಿಯೋದಕ್ಕೆ ಫೋರ್ಸ್ ಮಾಡೋಕೆ ಅಂತ ನಾನೇ ಇವನನ್ನು ಇಟ್ಟುಕೊಂಡಿದೀನಿ ಸಾರ್.

ಹೆಂಡತಿಯ ಛಮಕ್

ಹೆಂಡತಿಯ ಛಮಕ್

ಗಂಡ ಮತ್ತು ಹೆಂಡತಿ ಮಧ್ಯೆ ಜೋರು ಜಗಳ ಆಗುತ್ತೆ. ಗಂಡನಿಗೆ ಸಿಟ್ಟು ಬರುತ್ತೆ. ಅದಕ್ಕೆ ಹೆಂಡತಿ ಕೊಟ್ಟ ಉತ್ತರ ಬಲು ಮಜಾ..!
ಗಂಡ: ನಿನ್ನಂಥ 50 ಜನ ನಂಗೆ ಸಿಕ್ತಾರೆ
ಹೆಂಡತಿ ನಗುತ್ತಾ ಹೇಳ್ತಾಳೆ, "ನಿಮ್ಗೆ ಈಗ್ಲೂ ನನ್ನಂಥ ಹೆಂಡ್ತೀನೇ ಇಷ್ಟ ಪಡ್ತೀರಿ ಅಂತ ಆಯ್ತು".
ಹೆಂಡತಿ ಉತ್ತರ ಕೇಳಿ ಗಂಡನಿಗೆ ಏನು ಹೇಳಬೇಕೋ ತೋಚದಂಗಾಯ್ತು.

ನಿದ್ರಾಭಂಗ

ನಿದ್ರಾಭಂಗ

ಸರಕಾರಿ ಕಚೇರಿಯಲ್ಲಿ ಒಂದು ಫಲಕದಲ್ಲಿ ಹೀಗೆ ಬರೆದಿರುತ್ತೆ: "ದಯವಿಟ್ಟು ಶಬ್ದ ಮಾಡಬೇಡಿ".
ಯಾರೋ 'ಕಿಡಿಗೇಡಿ'ಗಳು ಅದರ ಕೆಳಗೆ ಹೀಗೆ ಬರೆಯುತ್ತಾರೆ: "ನಮಗೆ ನಿದ್ರೆಯಿಂದ ಎಚ್ಚರವಾಗುತ್ತೆ".

(ಗಮನಿಸಿ: ಈ ಮೇಲಿನ ಹಾಸ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂಥವು. ಇದರಲ್ಲಿರುವ ಪಾತ್ರಗಳು ನೈಜವಲ್ಲ. ಯಾರನ್ನೂ ನೋಯಿಸುವ ಉದ್ದೇಶದಿಂದ ಹಾಸ್ಯ ಸೃಷ್ಟಿಸಿರುವುದಲ್ಲ. ಯಾರದೇ ವ್ಯಕ್ತಿತ್ವವನ್ನು ಹೀಗಳೆಯುವ ಉದ್ದೇಶವಿಲ್ಲ. ಈ ಹಾಸ್ಯದಿಂದ ಯಾರಿಗಾದರೂ ನೋವಾಗಿದ್ದ ಪಕ್ಷದಲ್ಲಿ ಕ್ಷಮೆ ಕೋರುತ್ತೇವೆ.)

(ಒನ್ಇಂಡಿಯಾ ಸುದ್ದಿ)

English summary
See some funny jokes on the occasion of Ganesha festival amidst rain pour. Besides, here are jokes of usual husband wife banter, drunkard comedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X