ಗಂಡನನ್ನು ಹೆಂಡ್ತಿಯಿಂದ ಕಾಪಾಡಲು ಯಮನಿಗೂ ಆಗಲ್ಲ

ಸ್ಟೂಡೆಂಟ್ : ನಾನು ವಿಶ್ವಸುಂದರಿಯ ಮಗ..
ಟೀಚರ್: ಸುಳ್ಳು ಹೇಳ ಬೇಡ..
ಸ್ಟೂಡೆಂಟ್: ಸತ್ಯವಾಗಿ ಹೇಳ್ತೀನಿ..ನನ್ನ ತಂದೆಯ ಹೆಸರು ವಿಶ್ವ, ತಾಯಿಯ ಹೆಸರು ಸುಂದರಿ..
***
ಟೀಚರ್: ಸ್ಕೂಲಿಗೆ ದಿನಾಲೂ ನಡ್ಕೊಂಡು ಬರ್ತಾ ಇದ್ದೀಯಾಂತೆ
ಮರಿಗುಂಡ: ಹೌದು ಟೀಚರ್.
ಟೀಚರ್: ಗವರ್ಮೆಂಟ್ ಕೊಟ್ಟಾ ಫ್ರೀ ಸೈಕಲ್ ಏನೋ ಆಯ್ತು?
ಮರಿಗುಂಡ: ಎಲ್ಲರಿಗೂ ಉಪಯೋಗವಾಗಲಿ ಎಂದು ಬಾಡಿಗೆಗೆ ಬಿಟ್ಟಿದೀನಿ ಟೀಚರ್.
***
ಮೇಷ್ಟ್ರು ಮಕ್ಕಳಿಗೆ ಸತಿಸಾವಿತ್ರಿ ಕಥೆ ಹೇಳುತ್ತಿದ್ದರು..
ಮೇಷ್ಟ್ರು: ಮಕ್ಕಳೇ, ಸಾವಿತ್ರಿ ತನ್ನ ಪತಿಗಾಗಿ ಸಾವಿನ ದೇವರು ಯಮನ ಬಳಿ ಹೋರಾಡಿ ಪತಿಯನ್ನು ಉಳಿಸಿಕೊಂಡಳು. ಈ ಕಥೆಯ ನೀತಿ ಪಾಠವೇನು?
ಮರಿಗುಂಡ: ಹೆಂಡತಿಯಿಂದ ಪತಿಯನ್ನು ಬಚಾವ್ ಮಾಡಲು ಯಮನಿಂದಲೂ ಸಾಧ್ಯವಿಲ್ಲ. ಕರೆಕ್ಟಾ ಮೇಸ್ಟ್ರೆ?












Click it and Unblock the Notifications