ಜನ ಲೋಕಪಾಲ, ಅಣ್ಣಾ ಹಜಾರೆ ಎಸ್ಎಂಎಸ್ ಜೋಕುಗಳು
ಬೆಂಗಳೂರು: ಬಲಿಷ್ಠ ಜನ ಲೋಕಪಾಲ ಮಸೂದೆಗಾಗಿ ಅಣ್ಣಾ ನಡೆಸುತ್ತಿರುವ ಹೋರಾಟ ಎಲ್ಲೆಡೆ ಸಂಚಲನವನ್ನುಂಟು ಮಾಡಿದೆ. ಈ ಮಧ್ಯೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಒಂದಚ್ಟು ಎಸ್ ಎಂ ಎಸ್ ಜೋಕುಗಳು ಸರಿದಾಡುತ್ತಿವೆ.
ಅಣ್ಣಾಜೀ ಈ ಲೋಕಪಾಲ ಮಸೂದೆಗಾಗಿ ಇಷ್ಟೆಲ್ಲ ಹೋರಾಟ ನಡೆಸುವ ಬದಲು ಲಕ್ಷಣವಾಗಿ ಪ್ರಧಾನಿ ಸಿಂಗ್ ಗೆ ಒಂದಷ್ಟು ಲಂಚ ನೀಡಿ ಕೆಲಸ ಸಾಧಿಸಿಕೊಳ್ಳಬಾರದೇ!? ಎಂಬ ಪ್ರಶ್ನೆ ಸುಳಿದಾಡುತ್ತಿದೆ.
ಚಿನ್ನದ ದರ ಗಗನಕ್ಕೆ ತಲುಪಿದೆ. ಇದನ್ನು ಸರಿಯಾಗಿ ಬಂಡವಾಳ ಮಾಡಿಕೊಳ್ಳುತ್ತಿರುವುದು ಪ್ರಧಾನಿ ಸಿಂಗ್ ಒಬ್ಬರೇ. ಏಕೆಂದರೆ ಮೌನ ಬಂಗಾರ ಎಂದು ಬಗೆದಿರುವ ದೊಡ್ಡಣ್ಣ ಸಿಂಗ್ ಅಣ್ಣಾ ಹಜಾರೆ ವಿಷಯದಲ್ಲಿ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.
ಭಾರತದಾಚೆಗೂ ಅಣ್ಣಾಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದು ಸರಿಯಷ್ಟೇ. ಈ ಮಧ್ಯೆ ವಿದೇಶಿ ನೆಲದಲ್ಲಿರುವ ನಮ್ಮ ಟೀಂ ಇಂಡಿಯಾ ಟೀಂ ಅಣ್ಣಾಗೆ ಭರಪೂರ ಬೆಂಬಲ ಘೋಷಿಸಿದೆ. ಟೀಂ ಅಣ್ಣಾ ಗೆಲ್ಲುವವರೆಗೂ (ಜನ ಲೋಕಪಾಲ ಮಸೂದೆ ಜಾರಿಯಾಗುವವರೆಗೂ) ನಾವು ಅಂದರೆ ಟೀಂ ಇಂಡಿಯಾ ಗೆಲ್ಲುವ ಮಾತೇ ಇಲ್ಲ ಎಂದು ತಂಡದ ಪರವಾಗಿ ಕಪ್ತಾನ ಧೋನಿ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಪ್ರಕಟಿಸಿದ್ದಾರೆ.
ಈ ಮಧ್ಯೆ, 'ಅಣ್ಣಾ ಅಂತಹ ನಾಯಕ ನಮ್ಮ ಮಧ್ಯೆ ಇರುವುದು ನಮ್ಮ ಪುಣ್ಯ. ಅವರ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ಸೂಚಿಸುತ್ತೇನೆ' ಎಂದು ಖ್ಯಾತ ನಟ ರಜನಿಕಾಂತ್ ಅವರು ಘೋಷಿಸಿದ್ದಾರೆ.












Click it and Unblock the Notifications