ಜೋಕ್: ಸೋಮಾರಿತನದ ಪರಮಾವಧಿ ಎಂದರೆ

**
ಶಿಕ್ಷಕ: ಭಾರತ ದೇಶದ ಜನರಿಗೆ ಅತ್ಯಂತ ಗೊಂದಲದ ದಿನ ಯಾವುದು?
ವಿದ್ಯಾರ್ಥಿ: ಫೆಬ್ರವರಿ 14, ರಕ್ಷಾ ಬಂಧನದ ದಿನ
**
ದೇಶ ಬೇಕು ದ್ವೇಷ ಬೇಡ (ಸ್ವಾಮಿ ವಿವೇಕಾನಂದ)
ಹುಡುಗಿ ಬೇಕು, ಮದುವೆ ಬೇಡ (ಸ್ವಾಮಿ ನಿತ್ಯಾನಂದ)
ಗೆಳೆಯ ಬೇಡ, ಗೆಳೆಯನ ಮಡದಿ ಬೇಕು ( ಹರತಾಳು ಹಾಲಪ್ಪ)
ಮದುವೆ ಬೇಡ, ಮಗು ಬೇಕು ( ಕುಮಾರಸ್ವಾಮಿ)
ಹೆಂಡತಿ ಬೇಡ, ನರ್ಸ್ ಬೇಕು ( ರೇಣುಕಾಚಾರ್ಯ)
**
ಹುಡುಗ: ಏ.. ನಾನು ಇವತ್ತು ಹೊಸ ಮೊಬೈಲ್ ತೆಗೊಂಡೆ ಕಣೇ..
ಹುಡುಗಿ: ಹೌದಾ ... ನಡೀ.. ನನಗೆ ತಾಜ್ ಹೋಟೆಲ್ ನಲ್ಲಿ ಪಾರ್ಟಿ ಕೊಡಿಸು.
ತಾಜ್ ಹೋಟೆಲ್ ನಲ್ಲಿ ಊಟ ಆದ ನಂತರ...
ಹುಡುಗಿ: ಅಲ್ಲಾ ಕಣೋ.. ಪಾರ್ಟಿ ಕೊಡ್ಸೊಕೆ ದುಡ್ಡು ಎಲ್ಲಿಂದ ಬಂತು
ಹುಡುಗ: ಅದೇ ಹೊಸ ಮೊಬೈಲ್ ತೆಗೊಂಡೆ ಅಲ್ವಾ.. ಅದನ್ನು ಮಾರಿ...












Click it and Unblock the Notifications