ಸಖತ್ ಜೋಕು: ದೇವೇಗೌಡರ ವರ ಹಾಗೂ ಬ್ರಹ್ಮದೇವ
ದೇವೇಗೌಡರು ದೇಶದ ಬಗ್ಗೆ ಯೋಚನೆ ಮಾಡುತ್ತಾ ಮಲಗಿದ್ದರು. ಯಾಕೋ ಕಣ್ಬಿಟ್ಟು ನೋಡ್ತಾರೆ, ಪಕ್ಕದಲ್ಲಿ ಬ್ರಹ್ಮದೇವ! ಕೂಡಲೇ ಗೌಡ್ರು ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ಅಡ್ಡಡ್ಡ ಬಿದ್ದರು. ಆಗ ಬ್ರಹ್ಮದೇವ 'ಬೇಕಾದ ವರ ಕೇಳು" ಎಂದ.'ಸಡನ್ನಾಗಿ ವರಕೇಳು ಎಂದರೆ ಕಷ್ಟ. ನಾಳೆ ಬಾ ಯೋಚಿಸಿ ಬರೆದಿಡ್ತೀನಿ" ಎಂದ ದೇವೇಗೌಡರು ಸ್ವಲ್ಪ ಟೈಮ್ ಕೇಳಿದರು. ಹಗಲು ರಾತ್ರಿ ನಿದ್ದೆ ಗೆಟ್ಟು ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿದರು. ದೇವರು ಬಂದಾಗ ದೊಡ್ಡದೊಂದು ಪಟ್ಟಿಯನ್ನು ಕೊಟ್ಟರು. ಪಟ್ಟಿ ಓದಿದ ಬ್ರಹ್ಮದೇವ ನಾಪತ್ತೆ!
ಯಾಕೆ ಅಂದ್ರೆ: ಮರೆವಿನಲ್ಲಿ ಗೌಡರು ತಮ್ಮ ಬೇಡಿಕೆ ಪಟ್ಟಿ ಬದಲು, ಜೆಡಿಎಸ್ ಪ್ರಣಾಳಿಕೆ ಪಟ್ಟಿಯನ್ನು ಕೊಟ್ಟಿದ್ದರು!
****
ಗುಂಡ ತನ್ನ ಮದುವೆ ಆಮಂತ್ರಣ ಕಳಿಸಿ ಅದರಲ್ಲೊಂದು ಪತ್ರವನ್ನ್ನಿಟ್ಟಿದ್ದ. ಅದರಲ್ಲಿ ಹೀಗಿತ್ತು-''ಸೆಕೆಂಡ್ ಜೂನ್‌ಗೆ ನನ್ನ ಮದುವೆ, ನೀವೆಲ್ಲ ಫಸ್ಟ್ ನೈಟಿಗೆ ತಪ್ಪದೆ ಬರಬೇಕು!''
****
ಕನ್ನಡಿಯನ್ನು ಜೆರಾಕ್ಸ್ ಮಾಡಿದರೆ ಏನಾಗುತ್ತದೆ?
ಇನ್ನೇನಾಗುತ್ತದೆ, ಜೆರಾಕ್ಸ್ ಮಶೀನ್ ಸಿಗುತ್ತದೆ!
****
ಮಸಿಪಾತ್ರೆ ಹಾಗೂ ಕುಕ್ಕರ ನಡುವೆ ನಡೆದ ಚಿಕ್ಕ ಸಂಭಾಷಣೆ:
ಮಸಿಪಾತ್ರೆ: ಯಾಕ್ ಹಾಂಗ್ ನನ್ನನ್ನು ನೋಡ್ತೀಯಾ?
ಕುಕ್ಕರ್: ನಿನ್ನ ಕರಿಮೂತಿಯನ್ನು ಯಾರು ನೋಡ್ತಾರೆ?
ಮಸಿಪಾತ್ರೆ: ಮತ್ಯಾಕ್ ನನ್ನನ್ನು ನೋಡಿ ವಿಶಲ್ ಹೊಡೀತೀಯಾ?
****
ಪ್ರಶ್ನೆ: ಕಾಲೇಜು ಹುಡುಗರೇಕೆ ದೇವಸ್ಥಾನಕ್ಕೆ ಹೋಗಲು ಬಯಸುತ್ತಾರೆ?
ಉತ್ತರ: ದೇವಸ್ಥಾನದಲ್ಲಿ ಮಾತ್ರ ಪೂಜಾ, ಭಾವನಾ, ಶಾರದಾ, ಸರಸ್ವತಿ, ದೀಪಾ, ಶಾಂತಿ, ಆರತಿ, ಅರ್ಚನಾ ಸಿಗೋದು!
(ದಟ್ಸ್‌ಕನ್ನಡ ಜೋಕ್ಸ್)












Click it and Unblock the Notifications