ಮತ್ತೆ, ಮದ್ವೆ ಮಾಡಿಸಿದ ಪಾಪ ಸುಮ್ನೆ ಬಿಡುತ್ತಾ..?
ಹೆಂಡತಿ : ರೀ.. ನಿಮಗೆ ಮದ್ವೆ ಮಾಡಿಸಿದ ಪುರೋಹಿತರು, ರೈಲಿಗೆ ಸಿಕ್ಕಿ ಬೆಳಗ್ಗೆ ಸತ್ತು ಹೋದರಂತೆ..
ಗಂಡ : ಮತ್ತೆ, ಮಾಡಿದ ಪಾಪ ಸುಮ್ನೆ ಬಿಡುತ್ತಾ.. ?
***
‘ಅಪ್ಪ ನನಗೆ ದೂರದ ವಸ್ತುಗಳು ಕಾಣಿಸ್ತಾ ಇಲ್ಲ. ಒಂದು ಕನ್ನಡಕ ಕೊಡಿಸು.’ ಎಂದು ಮಗರಾಯ ಪೀಠಿಕೆ ಹಾಕುತ್ತಾನೆ. ಆಗ ಮಗನನ್ನು ಹೊರಕಡೆ ಕರೆದೊಯ್ದು ‘ಅದು ಏನು’ ಎಂದು ಸೂರ್ಯನನ್ನು ತೋರಿಸಿ ಅಪ್ಪ ಪ್ರಶ್ನೆ ಕೇಳ್ತಾನೆ. ‘ಅದು ಸೂರ್ಯ ಅಲ್ವಾ?’ ಎಂದು ಮಗರಾಯ ಹೇಳಿದ ತಕ್ಷಣ, ‘ಏ ಗೂಬೆ, ಇನ್ನೂ ಎಷ್ಟು ದೂರ ಕಾಣಬೇಕು ನಿನ್ಗೆ???’ ಎಂದು ಅಪ್ಪ ಬೈಗುಳ ಆರಂಭಿಸುತ್ತಾನೆ!
(ಜೋಕ್ಸ್ ಕಳಿಸಿದ್ದು; ಸುಜಯ್)
***
ಶಿಕ್ಷಕ : ಪಕ್ಷಿಗಳಿಗೆ ಕಣ್ಣಿನ ಸಮಸ್ಯೆ. ಈ ವಿಷಯ ನಿಮಗೆ ಗೊತ್ತಾ?
ಪುಟಾಣಿ ಸರ್ದಾರ್ಜಿ : ನನಗೆ ಗೊತ್ತು ಮೇಡಂ
ಶಿಕ್ಷಕ : ಅದು ಹೇಗೆ ಗೊತ್ತು?
ಪುಟಾಣಿ ಸರ್ದಾರ್ಜಿ : ಯಾವ ಪಕ್ಷಿಗಳು ಕನ್ನಡಕ ಹಾಕಿಕೊಂಡಿರೋದನ್ನು ನಾನು ನೋಡಿಲ್ಲ.. ಸಮಸ್ಯೆ ಇದ್ದರೆ ಕನ್ನಡಕ ಹಾಕ್ತಾಯಿರಲಿಲ್ವಾ?
(ಜೋಕ್ ಕಳಿಸಿದ್ದು; ಪ್ರವೀಣ್ ಕುಮಾರ್.ಕೆ.)












Click it and Unblock the Notifications