ಎಲ್ಲಿ ನೋವು ಇರುತ್ತೋ ಅಲ್ಲಿ MENTHO PLUS ಇರುತ್ತೆ !
ಎಲ್ಲಿ ಮನಸ್ಸಿರುತ್ತೋ ಅಲ್ಲಿ ಹೃದಯ ಇರುತ್ತೆ
ಎಲ್ಲಿ ಹೃದಯ ಇರುತ್ತೋ ಅಲ್ಲಿ ಪ್ರೀತಿ ಇರುತ್ತೆ
ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇರುತ್ತೆ
ಎಲ್ಲಿ ನೋವು ಇರುತ್ತೋ ಅಲ್ಲಿ MENTHO PLUS ಇರುತ್ತೆ !
***
ಭೀಮ : ಪಕ್ಕದ ಬೀದಿಯಲ್ಲಿ ಹೊಸದಾಗಿ ಬಂದಿರೋ ಹುಡುಗೀಗೆ ಲವ್ ಲೆಟರ್ ಕೊಡೋಣಾಂದ್ರೆ, ಅವಳೊಂದಿಗೆ ಯಾವಾಗ್ಲೂ ಇರುವ ಒಬ್ಬ ಅಡ್ಡಿಯಾಗಿದ್ದಾನೆ ರಾಮ...
ರಾಮ : ಯಾರೋ ಅವನು? ಆ ಹುಡುಗಿಯ ಅಣ್ಣನೋ, ತಮ್ಮನೋ, ಮಾವನೋ? ಅವನ ಕೈ ಕಾಲು ಮುರಿದು ಬಿಡೋಣ. ..
ಭೀಮ : ಅವರೆಲ್ಲ ಆಗಿದ್ರೆ ಇಷ್ಟೊತ್ತಿಗೆ ನಾನೇ ಮುರಿಯುತ್ತಿದ್ದೆ. ಆದ್ರೆ ಅವನು, ಅವಳ ಗಂಡನಂತೆ ರಾಮಾ!
***
ಗಂಡ : ಲೇ ಕಾಮಾಕ್ಷಿ, ಅನ್ನದಲ್ಲಿ ಕಲ್ಲು, ಕೂದಲು ಇದೆಯಲ್ಲಾ, ನೋಡ್ದೆ ಹಾಗೇ ಹಾಕಿದ್ದೀಯಲ್ಲಾ, ಅಯ್ಯೋ ಗೂಬೆ ಮುಂಡೇದೆ? ಹಗಲಲ್ಲಿ ಕಣ್ಣು ಕಾಣಿಸಲ್ವಾ ನಿನಗೆ ?
ಹೆಂಡತಿ : ಅಯ್ಯೋ ನಿಮ್ಮ ಬುದ್ಧಿಗೆ ಒಂದಿಷ್ಟು... ವಯಸ್ಸಾಗಿದೆಯೇ ಹೊರತು, ತಿಳಿವಳಿಕೆ ಇದೆಯೇನ್ರೀ ? ಯಾವ ಗೂಬೆಗಾದ್ರೂ ಹಗಲಲ್ಲಿ ಕಣ್ಣು ಕಾಣುತ್ತಾರೀ... ?
***
ಒಂದು ವಕ್ರ ತುಂಡೋಕ್ತಿ : ಗಂಡ ಅಂದ್ರೆ ಟೂತ್ ಬ್ರಶ್ ಇದ್ದ ಹಾಗೆ. ಯಾಕೆಂದ್ರೆ ಅದನ್ನು ಬೇರೆಯವರು ಬಳಸುವುದನ್ನು ಹೆಂಡತಿ ಇಷ್ಟಪಡುವುದಿಲ್ಲ.












Click it and Unblock the Notifications