ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಸೇಲ್ಸ್‌ಫೋರ್ಸ್

|
Google Oneindia Kannada News

ನವದೆಹಲಿ, ನವೆಂಬರ್ 09: ಜಾಗತಿಕ ಮಟ್ಟದಲ್ಲಿ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತದ ಹಾದಿ ತುಳಿಯುತ್ತಿದೆ. ಅದೇ ಸಾಲಿನಲ್ಲಿ ಮತ್ತೊಂದು ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕಂಪನಿ ಆಗಿರುವ ಸೇಲ್ಸ್‌ಫೋರ್ಸ್ ಕೂಡ ಸೇರಿಕೊಂಡಿದೆ. ಮೊದಲ ಸುತ್ತಿನಲ್ಲೇ 2500 ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ಕಂಪನಿಯು ಯೋಜನೆ ರೆಡಿ ಮಾಡಿಕೊಂಡಿದೆ.

"ಕಾರ್ಯಕ್ಷಮತೆ" ಸಮಸ್ಯೆಗಳನ್ನು ಉಲ್ಲೇಖಿಸಿ ಸೇಲ್ಸ್‌ಫೋರ್ಸ್ ಸಂಸ್ಥೆಯು 2,500 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ.

ಸ್ಲಾಕ್ ಟೆಕ್ನಾಲಜೀಸ್ ಅನ್ನು 2.03 ಲಕ್ಷ ಕೋಟಿಗೆ ಖರೀದಿಸಲು ಸೇಲ್ಸ್‌ಫೋರ್ಸ್‌ ಒಪ್ಪಂದಸ್ಲಾಕ್ ಟೆಕ್ನಾಲಜೀಸ್ ಅನ್ನು 2.03 ಲಕ್ಷ ಕೋಟಿಗೆ ಖರೀದಿಸಲು ಸೇಲ್ಸ್‌ಫೋರ್ಸ್‌ ಒಪ್ಪಂದ

30 ದಿನಗಳವರೆಗೂ ಉದ್ಯೋಗಿಗಳ ಮೇಲೆ ನಿಗಾ ವಹಿಸಲು ನಿರ್ಧರಿಸಲಾಗಿದ್ದು, ಅಲ್ಲಿಂದ ಮುಂದೆ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ನೋಡಿಕೊಂಡು ಅಂಥವರನ್ನು ವಜಾಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಸೇಲ್ಸ್‌ಫೋರ್ಸ್ ಸಂಸ್ಥೆಯು ಬದಲಾವಣೆ ಬಗ್ಗೆ ಹೇಳಿದ್ದೇನು?

ಸೇಲ್ಸ್‌ಫೋರ್ಸ್ ಸಂಸ್ಥೆಯು ಬದಲಾವಣೆ ಬಗ್ಗೆ ಹೇಳಿದ್ದೇನು?

ಸೇಲ್ಸ್‌ಫೋರ್ಸ್ ಕಂಪನಿಯಲ್ಲಿ ಉದ್ಯೋಗ ಕಡಿತದ ಕುರಿತು ಸ್ಪಷ್ಟನೆ ನೀಡಿದೆ. ಈ ಬೆಳವಣಿಗೆ ಬಗ್ಗೆ ಉಲ್ಲೇಖಿಸಿರುವ ಸಂಸ್ಥೆಯು, ತಮ್ಮ ಕಂಪನಿಯು ಮಾರಾಟದ ಕಾರ್ಮಕ್ಷಮತೆ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷೆ ಮಾಡುತ್ತಿದೆ. ಹೀಗಾಗಿ ಕೆಲವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ಉದ್ಯೋಗವನ್ನು ಕಳೆದುಕೊಳ್ಳುವ ಉದ್ಯೋಗಿಗಳ ಪರಿವರ್ತನೆಗೆ ನಾವು ಬೆಂಬಲಿಸುತ್ತೇವೆ ಎಂದು ಕಂಪನಿಯು ತಿಳಿಸಿದೆ.

ಸೇಲ್ಸ್‌ಫೋರ್ಸ್ ವಜಾಗೊಳಿಸುವ ಉದ್ಯೋಗಿಗಳ ಸಂಖ್ಯೆ ಎಷ್ಟು?

ಸೇಲ್ಸ್‌ಫೋರ್ಸ್ ವಜಾಗೊಳಿಸುವ ಉದ್ಯೋಗಿಗಳ ಸಂಖ್ಯೆ ಎಷ್ಟು?

ಸೇಲ್ಸ್‌ಫೋರ್ಸ್ ಕಂಪನಿಯು ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡಿದ್ದು ಆಗಿದೆ. ಇದೇ ಸಂದರ್ಭದಲ್ಲಿ ಎಷ್ಟು ಜನರನ್ನು ಉದ್ಯೋಗದಿಂದ ವಜಾಗೊಳಿಸಲಾಗುವುದು ಎಂದು ಕಂಪನಿಯು ತಿಳಿಸಿದೆ. ಇದೇ ವರ್ಷದ ಆರಂಭದಲ್ಲಿ ನೀಡಿರುವ ಅಂಕಿ-ಅಂಶಗಳ ಪ್ರಕಾರ, 73,541 ಉದ್ಯೋಗಿಗಳನ್ನು ಕಂಪನಿಯು ಹೊಂದಿದೆ. ಈ ಕಂಪನಿಯು ಸಾವಿರಕ್ಕಿಂತ ಕಡಿಮೆ ಉದ್ಯೋಗಿಗಳನ್ನು ವಜಾಗೊಳಿಸುತ್ತದೆ ಎಂದು ಹೇಳಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಶೇ.36ರಷ್ಟು ಉದ್ಯೋಗಿಗಳ ನೇಮಕ

ಆಗಸ್ಟ್ ತಿಂಗಳಿನಲ್ಲಿ ಶೇ.36ರಷ್ಟು ಉದ್ಯೋಗಿಗಳ ನೇಮಕ

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಗ್ರಾಹಕರಿಂದ ಹೆಚ್ಚಿನ ಸೇವೆಗಳಿಗೆ ಬೇಡಿಕೆಯು ಸೃಷ್ಟಿಯಾಗಿತ್ತು. ಈ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಆಗಸ್ಟ್ ತಿಂಗಳಿನಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಶೇ.36ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದು ಕಂಪನಿಯು ಹೇಳಿದೆ. ಈ ಪ್ರೋಟೋಕಾಲ್ ಪ್ರಕಾರ, ಸೇಲ್ಸ್‌ಫೋರ್ಸ್ ಈ ಹಿಂದೆ ಸರಿಸುಮಾರು ಶೇ.90 ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಿದ್ದು, 2023ರ ಜನವರಿ ತಿಂಗಳವರೆಗೂ ಯಾವುದೇ ನೇಮಕಾತಿ ಮಾಡಿಕೊಳ್ಳದಿರಲು ನಿರ್ಧರಿಸಿತ್ತು.

ಹೂಡಿಕೆದಾರರಿಂದ ಹೆಚ್ಚಿನ ಆದಾಯದ ನಿರೀಕ್ಷೆ

ಹೂಡಿಕೆದಾರರಿಂದ ಹೆಚ್ಚಿನ ಆದಾಯದ ನಿರೀಕ್ಷೆ

"ಸೇಲ್ಸ್‌ಫೋರ್ಸ್‌ನಿಂದ ಹೂಡಿಕೆದಾರರು ಹೆಚ್ಚಿನ ಲಾಭವನ್ನು ನಿರೀಕ್ಷಿಸುತ್ತಿದ್ದಾರೆ. ಇದು ಸ್ಲಾಕ್ ಮತ್ತು ಟ್ಯಾಬ್ಲೋನಂತಹ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಿಲಿಯನ್‌ಗಟ್ಟಲೆ ಖರ್ಚು ಮಾಡುವುದು ಸೇರಿದಂತೆ ತನ್ನ ಲಾಭವನ್ನು ಯಾವಾಗಲೂ ಬೆಳವಣಿಗೆಯತ್ತ ಹರಿಸುತ್ತಿದೆ," ಎಂದು ವರದಿ ಉಲ್ಲೇಖಿಸಿದೆ. ಸೇಲ್ಸ್‌ಫೋರ್ಸ್ ಹೂಡಿಕೆದಾರರಿಂದ ಒತ್ತಡವನ್ನು ಎದುರಿಸುತ್ತಿದೆ. ಬಿಸಿನೆಸ್ ಸಾಫ್ಟ್‌ವೇರ್‌ನಲ್ಲಿ ಸೇಲ್ಸ್‌ಫೋರ್ಸ್‌ ಕಂಪನಿಯ ಅಗ್ರಮಾನ್ಯ ಪ್ರತಿಸ್ಪರ್ಧಿ ಸಂಸ್ಥೆಗಳಲ್ಲಿ ಒಂದಾಗಿರುವ ಮೈಕ್ರೋಸಾಫ್ಟ್ ಕಂಪನಿಯು ಈ ವರ್ಷದ ಅಕ್ಟೋಬರ್‌ನಲ್ಲಿ ಒಂದು ಸುತ್ತಿನ ಉದ್ಯೋಗ ಕಡಿತವನ್ನು ಘೋಷಿಸಿತ್ತು.

English summary
Why Enterprise software company Salesforce will layoff more than 1000 employees. Read here to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X