ಶಿವಮೊಗ್ಗ ಜಿಲ್ಲೆ ಅಂಗನವಾಡಿ ಉದ್ಯೋಗ, ಎಲ್ಲೆಲ್ಲಿ ಎಷ್ಟು ಹುದ್ದೆ?
ಶಿವಮೊಗ್ಗ, ಆಗಸ್ಟ್ 26: ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಗೆ 2020ನೇ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 137 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತ ಹಾಗೂ ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಅರ್ಜಿ ಹಾಕಬಯಸುವವರು ಸೆಪ್ಟಂಬರ್-23, 2020ರೊಳಗೆ ಅರ್ಜಿ ಸಲ್ಲಿಸಬಹುದು.
Recommended Video
ಸಂಸ್ಥೆ ಹೆಸರು: ಮಹಿಳಾ ಮತ್ತು ಕಲ್ಯಾಣ ಇಲಾಖೆ
ಒಟ್ಟು ಹುದ್ದೆ: 137 ಹುದ್ದೆ (46 ಕಾರ್ಯಕರ್ತೆಯರು + 91 ಸಹಾಯಕಿಯರ ಹುದ್ದೆ)
ಹೆಸರು: ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕ
ಉದ್ಯೋಗ ಸ್ಥಳ: ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸೊರಬ, ಸಾಗರ, ಶಿಕಾರಿಪುರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರ
ವಿದ್ಯಾರ್ಹತೆ: ಅಭ್ಯರ್ಥಿಗಳು 4, 9, 12 ಅಥವಾ ತತ್ಸಮಾನ ತರಗತಿಗಳಲ್ಲಿ ತೇರ್ಗಡೆ ಹೊಂದಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟಂಬರ್ 23, 2020
ಇನ್ನಷ್ಟು ಮಾಹಿತಿ ಮುಂದಿದೆ...

ತೀರ್ಥಹಳ್ಳಿಯಲ್ಲಿ ಎಲ್ಲೆಲ್ಲಿ ಹುದ್ದೆಗಳಿವೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತೀರ್ಥಹಳ್ಳಿ ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಅರೆನಲ್ಲಿ (ಮಿನಿ), ಮುಡುಬ (ಮಿನಿ), ಮಲ್ಲಂದೂರು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಶೇಡ್ಗಾರ್, ಕಾಸರವಳ್ಳಿ, ತಲ್ಲೂರುಮಳಲಿ, ಆರಗ, ಬಳಗೋಡು, ಸರಳ, ಮಕ್ಕಿಬೈಲು, ಜಿಗಳಗೋಡು, ಸಾಲೂರು (ಮಾರಿಗುಣಿ) ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕಿಯರ ಹುದ್ದೆಗೆ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08181-295940ನ್ನು ಸಂಪರ್ಕಿಸುವುದು.

ಸೊರಬದಲ್ಲಿ ಎಲ್ಲೆಲ್ಲಿ ಹುದ್ದೆಗಳಿವೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೊರಬ ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ದ್ಯಾವನಹಳ್ಳಿ, ಎಣ್ಣೆಕೊಪ್ಪ (ಮಿನಿ), ಸೀಗೆಹಳ್ಳಿ (ಮಿನಿ), ಮಾಳೆಕೊಪ್ಪ, ಹೊರಬೈಲುಕೊಪ್ಪ (ಮಿನಿ), ಕಾನುಗೋಡು (ಮಿನಿ) ಮತ್ತು ಸಾಬರ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಚಿಟ್ಟೂರು-2, ಕಲ್ಲಂಬಿ, ಹೊರಬೈಲು, ಹುಲ್ತಿಕೊಪ್ಪ, ಚಿಕ್ಕಚೌಟಿ, ನಿಸರಾಣಿ-1, ಚಿಕ್ಕಬ್ಬೂರು ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕಿಯರ ಹುದ್ದೆಗೆ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಹಾಗೂ ಸಹಾಯಕಿಯರ ಹುದ್ದೆಗೆ 4 ರಿಂದ 9ನೇ ತರಗತಿ ಉತ್ತೀರ್ಣ ಹೊಂದಿರುವ 18 ರಿಂದ 35 ವಯೋಮಿತಿಯಲ್ಲಿರುವ ಸ್ಥಳೀಯ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದು. ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08184-295896ನ್ನು ಸಂಪರ್ಕಿಸುವುದು.

ಹೊಸನಗರ : ಅಂಗನವಾಡಿ ಹುದ್ದೆಗಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೊಸನಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಕೋರನಕೋಟೆ, ಗಿಣಿಕಲ್ ಮತ್ತು ಕೆ.ಕುನ್ನೂರು ಗ್ರಾಮದ ಅಂಗನವಾಡಿ ಮತ್ತು ದೊಡ್ಡಿನಮನೆ, ಕಾಳೇಶ್ವರ, ನೆವಟೂರು-2, ನೇರ್ಲಿಗೆ, ಮೈಥಳ್ಳಿ, ಮುಡುಬ, ಸಾವಂತೂರು, ಕಲ್ಲುಘಟ್ಟ ಮತ್ತು ಜಕ್ಕನಗದ್ದೆ ಗ್ರಾಮಗಳ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಕೋಣನಜೆಡ್ಡು, ಬುಕ್ಕಿವರೆ, ಮತ್ತಿಮನೆ, ಮೂಡುಕೊಪ್ಪ, ಎಂ.ಗುಡ್ಡೇಕೊಪ್ಪ, ಚಂದಾಳದಿಂಬ, ಬೆಳ್ಳೂರು, ಮೇಕೇರಿ ಮತ್ತು ಮಳೂರು ಅಂಗನವಾಡಿ ಕೇಂದ್ರಗಳಲ್ಲಿನ ಅಂಗನವಾಡಿ ಸಹಾಯಕಿಯರ 09ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹಾಗೂ ವಯೋಮಿತಿಯೊಳಗಿನ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಭರ್ಥಿಗಳು ಹೊಂದಿರುವ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ವಯ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಸಾಗರ : ಅಂಗನವಾಡಿ ಹುದ್ದೆಗಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಅರ್ಕಳ, ಬಳ್ಳಿಬೈಲು, ಶ್ರೀಧರಪುರ, ಕಪ್ಪದೂರು ಮತ್ತು ಸರಗುಂದ ಗ್ರಾಮದ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಹಾಗೂ ಗಿಳಾಲಗುಂಡಿ, ಲಕ್ಕವಳ್ಳಿ, ಕಂಬಳಿಕೊಪ್ಪ, ಹೊಂಕೇರಿ, ಕಾರ್ಗಲ್-1, ಬೆಳ್ಳೆಣ್ಣೆ, ಇಡುವಾಣಿ, ಕುಡಿಗೆರೆ ಮತ್ತು ಕಾರೆಹೊಂಡ ಅಂಗನವಾಡಿ ಕೇಂದ್ರಗಳಲ್ಲಿನ ಅಂಗನವಾಡಿ ಸಹಾಯಕಿಯರ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ ಅರ್ಹ ಮಹಿಳಾ ಅಭ್ಯರ್ಥಿಗಳು ಸೆಪ್ಟಂಬರ್ 23ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಹೊಂದಿರುವ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ವಯ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08183--226804ನ್ನು ಸಂಪರ್ಕಿಸುವಂತೆ ಸಾಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ











Click it and Unblock the Notifications