ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ; ಜ. 5ರಂದು ನೇರ ಸಂದರ್ಶನ
ಬೆಂಗಳೂರು, ಡಿಸೆಂಬರ್ 30; ಬೆಂಗಳೂರಿನ ಸಿ. ವಿ. ರಾಮನ್ ನಗರ ಜನರಲ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 5ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಫಾರ್ಮಸಿಸ್ಟ್ ಮತ್ತು ಸ್ಟಾಫ್ ನರ್ಸ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 13,000 ರೂ. ವೇತನ ನಿಗದಿ ಮಾಡಲಾಗಿದೆ.
ಫಾರ್ಮಸಿಸ್ಟ್ ಹುದ್ದೆಗೆ ಬಿ.ಫಾರ್ಮ್, ಡಿ.ಫಾರ್ಮ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷದ ಅನುಭವ ಅಗತ್ಯ. ಸ್ಟಾಫ್ ನರ್ಸ್ ಹುದ್ದೆಗೆ ಡಿಪ್ಲೊಮಾ, ಬಿಎಸ್‌ಸಿ ನರ್ಸಿಂಗ್, ಜೆಎನ್‌ಎಂ ವಿದ್ಯಾರ್ಹತೆ ನಿಗದಿಗೊಳಿಸಲಾಗಿದೆ. ಅಭ್ಯರ್ಥಿಗೆ ಕನಿಷ್ಠ 2 ವರ್ಷದ ಅನುಭವ ಅಗತ್ಯ ಎಂದು ಸ್ಪಷ್ಟಪಡಿಸಲಾಗಿದೆ.

ಸಿ. ವಿ. ರಾಮನ್ ನಗರ ಜನರಲ್ ಆಸ್ಪತ್ರೆ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷ ಮೀರಬಾರದು. ನೇಮಕಾತಿ ನಿಯಮಗಳಂತೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಜನವರಿ 5ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನೇರ ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರ ಮತ್ತು ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕಿದೆ.
ನೇರ ಸಂದರ್ಶನ ನಡೆಯುವ ವಿಳಾಸ; Sir C.V. Raman General Hospital, Indiranagar, Bengaluru - 560038. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 080-29912992
ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅರ್ಜಿ ಆಹ್ವಾನ; ಕಲಬುರಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಚಿತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ (ಕರಾಟೆ/ ಜುಡೋ/ ಟೈಕ್ವಾಂಡೋ) ನೀಡಲು ಕಲಬುರಗಿ ಜಿಲ್ಲೆಯಲ್ಲಿ ಮಾನ್ಯತೆಯನ್ನು ಪಡೆದ ನುರಿತ ಮಹಿಳಾ ತರಬೇತಿದಾರರಿಂದ ಅರ್ಜಿ ಕರೆಯಲಾಗಿದೆ.
ತರಬೇತಿದಾರರಿಗೆ ಗರಿಷ್ಠ 500 ರೂ. (ಪ್ರತಿ ಅವಧಿಗೆ) ಗೌರವಧನ ನೀಡಲಾಗುತ್ತದೆ. ಒಂದು ತಿಂಗಳಿಗೆ 800 ರೂ.ಗಳ ತರಬೇತಿದಾರರ ಪ್ರಯಾಣ ವೆಚ್ಚ ನೀಡಲಾಗುತ್ತದೆ. ಇಚ್ಛೆಯುಳ್ಳ ಮಹಿಳಾ ತರಬೇತಿದಾರರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಗುತ್ತಿಗೆ ಆಧಾರದ ಮೇಲೆ ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ (ಎಸ್‍ಸಿ/ಟಿಓ) ಹುದ್ದೆಗಳಿಗಾಗಿ ಅರ್ಹ ಮಾಜಿ ಸೈನಿಕರಿಂದ ಆನ್‍ಲೈನ್ ಮೂಲಕ ಅರ್ಜಿ ಕರೆದಿದೆ.
ಅರ್ಹರು www.bmrc.co.in/career section ಲಿಂಕ್ ಮೂಲಕ 2022ರ ಜನವರಿ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ; ಐಬಿಪಿಎಸ್ ರಾಷ್ಟ್ರೀಕೃತ ಬ್ಯಾಂಕ್‍ನವರು ಮುಂದಿನ ದಿನಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳ ಹಾಗೂ ಗುಮಾಸ್ತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ, ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ 45 ದಿನಗಳ ತರಬೇತಿ ಆಯೋಜಿಸಲಾಗಿದೆ.
ತರಬೇತಿ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಜನವರಿ 5ರೊಳಗಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ತಮ್ಮ ಹೆಸರನ್ನು ನೋಂದಾಯಿಸಬಹುದು. ಹೆಸರಿ ನೋಂದಾಯಿಸಲು ದೂರವಾಣಿ ಸಂಖ್ಯೆ 0821-2515944.












Click it and Unblock the Notifications