ತುಮಕೂರಿನಲ್ಲಿ ಕೆಲಸ ಖಾಲಿ ಇದೆ; ಜನವರಿ 27ರಂದು ನೇರ ಸಂದರ್ಶನ
ತುಮಕೂರು, ಜನವರಿ 24; ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 27ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೋಸ್ಟರ್ ಅನ್ವಯ ಅಭ್ಯರ್ಥಿಗಳನ್ನು ನೇಕಮಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಆರ್. ಬಿ. ಎಸ್. ಕೆ. ವೈದ್ಯಾಧಿಕಾರಿಗಳು 3 ಹುದ್ದೆಗಳಿವೆ. ಆಯುಷ್ ವೈದ್ಯಾಧಿಕಾರಿ 2, ಆಶಾ ಮೇಲ್ವಿಚಾರಕರು 1, ಶುಶ್ರೂಷಕಿಯರು 1, ಆಪ್ತ ಸಮಾಲೋಚಕರು 1, ಡೆಂಟಲ್ ಸರ್ಜನ್ 1, ಶುಶ್ರೂಷಕರು (ಎನ್.ಪಿ.ಡಿ.ಸಿ.ಎಸ್ ಕಾರ್ಯಕ್ರಮ 6, ಎನ್.ಪಿ.ಸಿ.ಸಿ ಕಾರ್ಯಕ್ರಮ 3, ಎನ್.ಪಿ.ಹೆಚ್.ಸಿ.ಇ ಕಾರ್ಯಕ್ರಮ 2), ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಎಲ್ಲಾ ಹುದ್ದೆಗಳಿಗೆ ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಂಗಳೂರು ಇವರ ಪ್ರಕಾರ ಕಿಯೋನಿಕ್ಸ್ ನವರು ನಡೆಸುವ ಅಥವ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕಡ್ಡಾಯ ಎಮ್ ಎಸ್ ಆಫೀಸ್ ಟೂಲ್ ಬಳಕೆ ಬಗ್ಗೆ ಮಾಹಿತಿ ಹೊಂದಿರ ತಕ್ಕದ್ದು.
ಅರ್ಜಿ ನೂಮೂನೆಯನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಪಡೆದುಕೊಳ್ಳಬಹುದು. ನಂತರ ಬಂದ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ. ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿ ಲಭ್ಯವಾಗದಿದ್ದಲ್ಲಿ ಮೀಸಲಾತಿ ಅನ್ವಯ ರೋಸ್ಟರ್ ಕಂ ಮೆರಿಟ್ ಪ್ರಕಾರ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ಬಾಹ್ಯ ಮೂಲಗಳಿಂದ ಪ್ರಭಾವ ಬೀರುವ ಅಭ್ಯರ್ಥಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಎಲ್ಲಾ ಹುದ್ದೆಗಳಿಗೆ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ನೇರ ಸಂದರ್ಶನಕ್ಕೆ ಆಗಮಿಸು ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಜೊತೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.
ಅಗತ್ಯವಾಗಿ ತರಬೇಕಾದ ದಾಖಲೆಗಳು
* ವಿದ್ಯಾರ್ಹತೆ ಅಂಕಪಟ್ಟಿಗಳು (ಎಸ್. ಎಸ್. ಎಲ್. ಸಿ, ಪಿಯುಸಿ, ಕೆಎಂಸಿ, ಕೆಎನ್‌ಸಿ, ಪ್ಯಾರಾ ಮೆಡಿಕಲ್, ಗಣಕಯಂತ್ರ ಪ್ರಮಾಣ ಪತ್ರಗಳು)
* 1 ರಿಂದ 10ನೇ ತರಗತಿ ತನಕ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ
* 1 ರಿಂದ 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಕನ್ನಡ ಮಾಧ್ಯಮ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ, ಅಂಗವಿಕಲತೆ ಪ್ರಮಾಣ ಪತ್ರ, ವಾಸ ದೃಢೀಕರಣ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರು ಪ್ರಮಾಣ ಪತ್ರ, ಆಧಾರ್ ಕಾರ್ಡ್, ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ.
* ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ಹುದ್ದೆಗೆ ಆಯ್ಕೆ ಬಯಸಿದ್ದಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
ನೇರ ಸಂದರ್ಶನ ನಡೆಯುವ ವಿಳಾಸ; ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು.
ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆ: ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯಿತಿ ವತಿಯಿಂದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿ ಡೇ-ನಲ್ಮ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.
ಗೌರವಧನ ಆಧಾರದ ಮೇಲೆ ಸ್ವ-ಸಹಾಯ ಸಂಘ (ಗುಂಪು) ಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಆಯ್ಕೆಯಾ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ 8 ಸಾವಿರ ರೂ. ಮತ್ತು ಸಾರಿಗೆ ಭತ್ಯೆ 2 ಸಾವಿರ ನಿಗದಿ ಮಾಡಲಾಗಿದೆ. ಆಸಕ್ತರು ಫೆಬ್ರವರಿ 1ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ವಯಸ್ಸು 18 ರಿಂದ 45 ವರ್ಷ ವರ್ಷ ಒಳಗಿರಬೇಕು. ಕನಿಷ್ಠ 3 ವರ್ಷಗಳಿಂದ ಸ್ವ-ಸಹಾಯ ಸಂಘ (ಗುಂಪಿನಲ್ಲಿ) ಸದಸ್ಯರಾಗಿರಬೇಕು.
ಆಂತರಿಕ ಸಾಲ ಪಡೆದು ಕಟುಬಾಕಿದಾರರಾಗಿರಬಾರದು, ಸರ್ಕಾರಿ/ ಅರೆ ಸರ್ಕಾರಿ/ ಎನ್.ಜಿ.ಒ ಗಳಲ್ಲಿ ಉದ್ಯೋಗಸ್ಥರಾಗಿರಬಾರದು. ಉತ್ತಮ ಸಂವಹನ ಕೌಶಲ್ಯ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೊಳ್ಳುವ ಇಚ್ಛಾಶಕ್ತಿ ಹೊಂದಿರಬೇಕು.
ಕಾರ್ಯ ನಿಮಿತ್ತ ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗೆ ಸಂಚಾರಕ್ಕೆ ಸಿದ್ಧರಿರಬೇಕು. ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆಸಕ್ತ ಅರ್ಜಿದಾರರು ಕಛೇರಿಯ ಅವಧಿಯಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.












Click it and Unblock the Notifications