ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ನೇರ ಸಂದರ್ಶನಕ್ಕೆ ಹಾಜರಾಗಿ

ಬಳ್ಳಾರಿ, ಡಿಸೆಂಬರ್ 27; ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ಆಯೋಜನೆ ಮಾಡಿದೆ. ಆಸಕ್ತ, ಅರ್ಹರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ವ್ಯಾಪ್ತಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ತಜ್ಞ ವೈದ್ಯರ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ತಾತ್ಕಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

Walk In Interview For Various Post At Ballari Recruitment Details

ಆಸಕ್ತರು ಬಯೋಡಾಟಾದೊಂದಿಗೆ ಅಗತ್ಯ ವಿದ್ಯಾರ್ಹತೆಯ ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಳ್ಳಾರಿ ಇವರ ಕಛೇರಿಯಲ್ಲಿ ಪ್ರತಿ ಸೋಮವಾರ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ಈ ನೇರ ಸಂದರ್ಶನವನ್ನು ಖಾಲಿ ಇರುವ ಹುದ್ದೆಗಳು ಭರ್ತಿ ಆಗುವವರೆಗೂ ಪ್ರತಿ ಸೋಮವಾರ ಮಾತ್ರ ನಡೆಸಲಾಗುತ್ತದೆ. ಖಾಲಿ ಹುದ್ದೆಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಖಾಲಿ ಹುದ್ದೆಗಳಿಗಿಂತ ಕಡಿಮೆ ಅರ್ಜಿಗಳು ಬಂದಲ್ಲಿ ಮೇರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಮಯದಲ್ಲಿ ಸಹಾಯಕ ಆಡಳಿತಾಧಿಕಾರಿಗಳು, ಜಿ.ಆ.ಕು.ಕ ಇಲಾಖೆ, ಬಳ್ಳಾರಿ ಇವರನ್ನು +91 89516 56265 ಸಂಖ್ಯೆ ಮೂಲಕ ಸಂಪರ್ಕಿಸಬಹುದು

ಖಾಲಿ ಹುದ್ದೆಗಳು ಇರುವ ಆರೋಗ್ಯ ಕೇಂದ್ರಗಳು; ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆ. ಬಳ್ಳಾರಿ ನ.ಕು.ಕ.ಕೇಂದ್ರ ಕೌಲ್‌ಜಾರ್ ಸಾ.ಕ.ವೈದ್ಯಾಧಿಕಾರಿಗಳು. ಕಂಪ್ಲಿ, ಶ್ರೀರಾಮರಂಗಾಪುರ ಸಾ.ಕ.ವೈದ್ಯಾಧಿಕಾರಿಗಳು.

ಸಿರುಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ರಾವಿಹಾಳು. ಸಾ.ಕ.ವೈದ್ಯಾಧಿಕಾರಿಗಳು. ಸಿರುಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಗೇವಾಡಿ ಸಾ.ಕ.ವೈದ್ಯಾಧಿಕಾರಿಗಳು. ಸಿರುಗುಪ್ಪ ಪ್ರಾ.ಆ.ಕೇಂದ್ರ ಹುಚ್ಚೋಳ್ಳಿ. ಸಾ.ಕ.ವೈದ್ಯಾಧಿಕಾರಿಗಳು. ಈ ಎಲ್ಲಾ ಹುದ್ದೆಗಳಿಗೆ ಮಾಸಿಕ ಸಂಚಿತ ವೇತನ 60 ಸಾವಿರ ರೂ.ಗಳು. ಅಭ್ಯರ್ಥಿಗಳು ಎಂಬಿಬಿಎಸ್ ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂಟರನ್‌ಶಿಪ್ ಪೂರ್ಣಗೊಳಿಸಿರಬೇಕು. ಕೆಎಂಸಿ ನೋಂದಣಿ ಹೊಂದಿರಬೇಕು. ಗರಿಷ್ಠ ವಯೋಮಿತಿ 45 ವರ್ಷಗಳು.

ಬಳ್ಳಾರಿ ಜಿಲ್ಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ತಜ್ಞ ವೈದ್ಯಾಧಿಕಾರಿಗಳ ವಿವರ. ಬಳ್ಳಾರಿ ಸ. ಆ. ಕೇಂದ್ರ ಮೋಕ. ಮಕ್ಕಳ ತಜ್ಞ ವೈದ್ಯರು.

ಸಿರುಗುಪ್ಪ ಸ.ಆ.ಕೇಂದ್ರ ತೆಕ್ಕಲಕೋಟೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರು. ಮಾಸಿಕ ಸಂಚಿತ ವೇತನ 1,10,000 ರೂ.ಗಳು.

ಸಂಡೂರು ಸ.ಆ.ಕೇಂದ್ರ ತೊರಣಗಲ್ಲು. ಅರವಳಿಕೆ ತಜ್ಞ ವೈದ್ಯರು. ಮಾಸಿಕ ಸಂಚಿತ ವೇತನ 1,10,000 ರೂ.ಗಳೂ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ/ ಡಿಎನ್‌ಬಿ ಸ್ನಾತಕೋತ್ತರ ಪದವಿ ಪಡೆದಿರತಕ್ಕದ್ದು ಹಾಗೂ ಕೆ.ಎಂ.ಸಿಯ ನೋಂದಣಿಯನ್ನು ಹೊಂದಿರತಕ್ಕದ್ದು.

ಈ ಹುದ್ದೆಗಳು ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರ ನೇಮಕಾತಿ ಸಮಿತಿಯು/ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳಿಗೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+