ಶಿವಮೊಗ್ಗ, ಧಾರವಾಡದಲ್ಲಿ ಕೆಲಸ ಖಾಲಿ ಇದೆ, ವಿವರ

ಶಿವಮೊಗ್ಗ, ಫೆಬ್ರವರಿ 05: ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ. ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿವರಗಳು ಇಲ್ಲಿವೆ.

ಶಿವಮೊಗ್ಗದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಅರೆಕಾಲಿಕ ಯೋಗ ತರಬೇತುದಾರರನ್ನು ನೇಮಿಸಲು ನೇರ ಸಂದರ್ಶನವನ್ನು ಫೆಬ್ರವರಿ 9ರಂದು ಆಯೋಜನೆ ಮಾಡಲಾಗಿದೆ.

Walk In Interview At Shivamogga And Dharwad

ಜಿಲ್ಲೆಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಾದ ಹೊಸನಗರ ತಾಲ್ಲೂಕಿನ ಹರತಾಳು, ಪುರಪ್ಪೆಮನೆ, ಭದ್ರಾವತಿ ತಾಲ್ಲೂಕಿನ ಮೈದೊಳಲು ಇಲ್ಲಿ ತಲಾ 2 ಯೋಗ ತರಬೇತುದಾರರು (1 ಪುರುಷ, 1 ಮಹಿಳೆ) ಮತ್ತು ಭದ್ರಾವತಿಯ ಹನುಂತಾಪುರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ 1 ಯೋಗ ತರಬೇತಿದಾರ (1 ಪುರುಷ) ಒಟ್ಟು 7 ಯೋಗ ತರಬೇತುದಾರರ ಸೇವೆಯನ್ನು 11 ತಿಂಗಳ ಅವಧಿಗೆ ಪಡೆಯಲಾಗುತ್ತದೆ.

ಇದಕ್ಕಾಗಿ ಫೆಬ್ರವರಿ 9ರ ಮಧ್ಯಾಹ್ನ 2.30 ರಿಂದ 4 ಗಂಟೆವರೆಗೆ ಶಿವಮೊಗ್ಗದ ಜಿಲ್ಲಾ ಆಯುಷ್ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಅದೇ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದು.

ವಿದ್ಯಾರ್ಹತೆ, ವಯೋಮಿತಿ ಮತ್ತು ಗೌರವಧನ ಇತರೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರವಾಡದಲ್ಲಿ ನೇರ ಸಂದರ್ಶನ; ಜೈವಿಕ ಇಂಧನ ಉದ್ಯಾನವನ ಯೋಜನೆಯಡಿ ಕೃಷಿ ಅರಣ್ಯ ವಿಭಾಗದಲ್ಲಿ ವೈಜ್ಞಾನಿಕ ಸಹಾಯಕ (ಸೈಂಟಿಫಿಕ್ ಅಸಿಸ್ಟಂಟ್) ತಾತ್ಕಾಲಿಕ ಹುದ್ದೆಗಾಗಿ ಫೆಬ್ರವರಿ 15ರಂದು ಬೆಳಗ್ಗೆ 10.30ಕ್ಕೆ ನೇರ ಸಂದರ್ಶನವನ್ನು ಧಾರವಾಡದಲ್ಲಿ ಏರ್ಪಡಿಸಲಾಗಿದೆ.

ಸಂದರ್ಶನ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರ ಕಾರ್ಯಾಲಯದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ www.uasd.edu ದಂದ ಪಡೆಯಬಹುದು.

ಸಂದರ್ಶನಕ್ಕೆ ಆಹ್ವಾನ; ಧಾರವಾಡ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ, ಕುಟುಂಬ ವಿಭಾಗದಲ್ಲಿ ಖಾಲಿ ಇರುವ ಪ್ರಯೋಗಾಲಯ ಸಹಾಯಕ, ಕಾರ್ಯಕ್ರಮ ಅಧಿಕಾರಿ, ಕಾರ್ಯಕ್ರಮ ನಿರ್ವಾಹಕರು ಮತ್ತು ಹಿರಿಯ ಕಾರ್ಯಕ್ರಮ ಅಧಿಕಾರಿ ಸೇರಿ ತಾತ್ಕಾಲಿಕ 4 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಫೆಬ್ರವರಿ 12ರಂದು ಬೆಳಗ್ಗೆ 10.30 ಗಂಟೆಗೆ ವಿದ್ಯಾಧಿಕಾರಿಗಳು (ಸವಿ), ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0836-2214234 ಹಾಗೂ ಕೃಷಿ ವಿಶ್ವವಿದ್ಯಾಲಯದ ಜಾಲತಾಣ www.uasd.eduಗೆ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+