Get Updates
Get notified of breaking news, exclusive insights, and must-see stories!

Vodafone, Ola ಕಂಪನಿಗಳಿಂದಲೂ ಉದ್ಯೋಗ ಕಡಿತ: ಆರ್ಥಿಕ ಕುಸಿತಕ್ಕೆ ನಲುಗುತ್ತಿವೆ ಖ್ಯಾತ ಸಂಸ್ಥೆಗಳು- ಇದು ಯಾವುದರ ಮುನ್ಸೂಚನೆ?

ಬೆಂಗಳೂರು, ಜನವರಿ 13: Vodafone Group Plc ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಯೋಜಿಸುತ್ತಿದೆ. ಕೆಲಸದಿಂದ ವಜಾಗೊಳ್ಳಲಿರುವ ಉದ್ಯೋಗಿಗಳು ಲಂಡನ್‌ನ ಪ್ರಧಾನ ಕಛೇರಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ ಎಂದು 'ಫೈನಾನ್ಷಿಯಲ್ ಟೈಮ್ಸ್' ಶುಕ್ರವಾರ ವರದಿ ಮಾಡಿದೆ.

ಹದಗೆಡುತ್ತಿರುವ ಆರ್ಥಿಕತೆಯ ಹಿನ್ನೆಯಲೆಯಲ್ಲಿ 1 ಶತಕೋಟಿ € ($1.08 ಶತಕೋಟಿ) ಮೌಲ್ಯದ ವೆಚ್ಚ-ಉಳಿತಾಯ ಕ್ರಮಗಳನ್ನು ವೊಡಾಫೋನ್ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ರೀಡ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಈ ಅವಧಿಯಲ್ಲಿ ಬ್ರಿಟಿಷ್ ಟೆಲಿಕಾಂ ಸಮೂಹದ ಷೇರು ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಏಕೆಂದರೆ ವೊಡಾಪೋನ್‌ ಮಂಡಳಿಯು ಅವರ ಕೆಳಗೆ ನಡೆತ್ತಿದ್ದ ಪ್ರಗತಿಯ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

Vodafon, ola plans hundreds of job cuts in cost-saving measures

ಈ ವಾರದ ಆರಂಭದಲ್ಲಿ, Vodafone ಹಂಗೇರಿಯಲ್ಲಿ ತನ್ನ ವ್ಯವಹಾರವನ್ನು ಸ್ಥಳೀಯ IT ಕಂಪನಿ 4iG ಮತ್ತು Hungarian state ಗೆ € 1.7 ಶತಕೋಟಿಗೆ ($1.82 ಶತಕೋಟಿ) ಮಾರಾಟ ಮಾಡಲು ಒಪ್ಪಿಕೊಂಡಿತು. ಈ ಒಪ್ಪಂದವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಮೊದಲು ಘೋಷಿಸಲಾಯಿತು.

Ola ನಲ್ಲಿ ವಜಾಗಳು ಪ್ರಾರಂಭ

ಓಲಾ ಕ್ಯಾಬ್ಸ್, ಓಲಾ ಎಲೆಕ್ಟ್ರಿಕ್ ಮತ್ತು ಓಲಾ ಫೈನಾನ್ಷಿಯಲ್ ಸರ್ವೀಸಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಓಲಾ ಮಾಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲು ಘೋಷಿಸಲಾದ ವಜಾ ಪಕ್ರಿಯೆ ಮುಂದುವರಿದಿದೆ.

ಅದರ 2,000 ಇಂಜಿನಿಯರ್ ಕಾರ್ಯಪಡೆಯ 10 ಪ್ರತಿಶತವನ್ನು ವಜಾಗೊಳಿಸುವಿಕೆ ಪ್ರಕ್ರಿಯೆ ಒಳಗೊಂಡಿದೆ.

Vodafon, ola plans hundreds of job cuts in cost-saving measures

ಪ್ರಸ್ತುತ, ಕಂಪನಿಯು ಸುಮಾರು 2,000 ಇಂಜಿನಿಯರ್‌ಗಳನ್ನು ಹೊಂದಿದೆ. ಭವಿಶ್ ಅಗರ್ವಾಲ್ ನಡೆಸುತ್ತಿರುವ ಕಂಪನಿಯು ತನ್ನ ಪ್ರಮುಖ ರೈಡ್-ಹೇಲಿಂಗ್ ವ್ಯವಹಾರದಲ್ಲಿ ಸುಮಾರು 1,100 ಉದ್ಯೋಗಿಗಳನ್ನು ಹೊಂದಿದೆ.

ಈ ಆರ್ಥಿಕ ಹೊಡೆತ ಸುಮಾರು 500 ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ಜಗತ್ತಿನ ದೈತ್ಯ ಕಂಪನಿಗಳಾದ ಮೆಟಾ, ಅಮೆಜಾನ್‌, ಟ್ವಿಟರ್‌ ಸೇರಿದಂತೆ ಹಲವಾರು ಕಂಪನಿಗಳು ಉದ್ಯೋಗಗಳಲ್ಲಿ ಕಡಿತಗೊಳಿಸಿದ್ದವು. ಜಾಗತಿಕ ಆರ್ಥಿಕ ಹಿನ್ನೆಡೆಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕೋವಿಡ್‌ ನಂತರ ಜಗತ್ತಿನ ಬಹುತೇಕ ಕಂಪನಿಗಳು ಆರ್ಥಿಕ ಕುಸಿತದ ಬಿಸಿಯನ್ನು ಅನುಭವಿಸುತ್ತಿವೆ. ಇದು ಕೆಲ ತಿಂಗಳುಗಳ ಕಾಲ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+