UPSC ನೇಮಕಾತಿ 2022: ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ನ .12: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2021ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. ಸ್ಟೆನೋಗ್ರಾಫರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಈ ಕುರಿತಂತೆ ಯುಪಿಎಸ್ ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನವೆಂಬರ್ 29ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Union Public Service Commission (UPSC)
ಹುದ್ದೆ ಹೆಸರು: Stenographer
ಒಟ್ಟು ಹುದ್ದೆ: ವಿವಿಧ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 29, 2022 ಸಂಜೆ 6
ಹುದ್ದೆಗಳು
ಕೆಟಗೆರಿ 1: ಕೇಂದ್ರ ಸಚಿವಾಲಯದ ಸೇವೆಯ ಅಧಿಕಾರಿಗಳ ದರ್ಜೆ.
ಕೆಟಗೆರಿ 2: ಭಾರತೀಯ ವಿದೇಶಾಂಗ ಸೇವೆಯ ಶಾಖೆ 'ಬಿ' ಯ ಜನರಲ್ ಕೇಡರ್‌ನ ವಿಭಾಗ ಅಧಿಕಾರಿ ಗ್ರೇಡ್,
ಕೆಟಗೆರಿ 3: ರೈಲ್ವೇ ಬೋರ್ಡ್ ಸೆಕ್ರೆಟರಿಯೇಟ್ ಸೇವೆಯ ವಿಭಾಗ ಅಧಿಕಾರಿಗಳ ದರ್ಜೆ
ಕೆಟಗೆರಿ 4: ಕೇಂದ್ರ ಸಚಿವಾಲಯದ ಸ್ಟೆನೋಗ್ರಾಫರ್ಸ್ ಸೇವೆಯ ಖಾಸಗಿ ಕಾರ್ಯದರ್ಶಿ ಗ್ರೇಡ್.
ಕೆಟಗೆರಿ 5: ಭಾರತೀಯ ವಿದೇಶಾಂಗ ಸೇವೆಯ ಶಾಖೆ "ಬಿ", ಸ್ಟೆನೋಗ್ರಾಫರ್ಸ್ ಕೇಡರ್‌ನ ಖಾಸಗಿ ಕಾರ್ಯದರ್ಶಿ ಗ್ರೇಡ್
ಕೆಟಗೆರಿ 6: ಸಶಸ್ತ್ರ ಪಡೆಗಳ ಗ್ರೇಡ್ 'ಎ' ಮತ್ತು 'ಬಿ' ಪ್ರಧಾನ ಕಛೇರಿಯ ಸ್ಟೆನೋಗ್ರಾಫರ್ಸ್ ಸೇವೆ
ಕೆಟಗೆರಿ 7 : ರೈಲ್ವೇ ಬೋರ್ಡ್ ಸೆಕ್ರೆಟರಿಯೇಟ್ ಸ್ಟೆನೋಗ್ರಾಫರ್ಸ್ ಸೇವೆ
ಕೆಟಗೆರಿ 8: ಇಂಟೆಲಿಜೆನ್ಸ್ ಬ್ಯೂರೋದ ವಿಭಾಗ ಅಧಿಕಾರಿ ದರ್ಜೆ.
ಕೆಟಗೆರಿ 9: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಸಗಿ ಕಾರ್ಯದರ್ಶಿ ಗ್ರೇಡ್
ಕೆಟಗೆರಿ 10: ಸಶಸ್ತ್ರ ಪಡೆಗಳ ಪ್ರಧಾನ ಕಛೇರಿ ನಾಗರಿಕ ಸೇವೆಯಲ್ಲಿನ ವಿಭಾಗ ಅಧಿಕಾರಿ
ಕೆಟಗೆರಿ 11: ಉದ್ಯೋಗಿಗಳ ರಾಜ್ಯ ವಿಮಾ ನಿಗಮದಲ್ಲಿ ಸಹಾಯಕ ನಿರ್ದೇಶಕರು/ವಿಭಾಗದ ಅಧಿಕಾರಿಗಳು/ಮ್ಯಾನೇಜರ್ Gr.I

ವಿದ್ಯಾರ್ಹತೆ:
ಕೆಟಗೆರಿ 1 ರಿಂದ 11ರ ತನಕ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ: ಕೇಂದ್ರ ಲೋಕಸೇವಾ ಆಯೋಗ ನಿಯಮಾವಳಿ ಅನುಸಾರ 30 ವರ್ಷ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ/ಸಂದರ್ಶನ
ಪ್ರಮುಖ ದಿನಾಂಕ:
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29/11/2022
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications