Uber Layoffs: ಊಬರ್‌ನಿಂದ ಭಾರಿ ಪ್ರಮಾಣದ ಉದ್ಯೋಗ ಕಡಿತದ ಘೋಷಣೆ

Uber Layoffs: ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನ ಕೆಲಸದಿಂದ ಕಿತ್ತು ಹಾಕಲಾಗುತ್ತಿದೆ. ಇದೀಗ ಇದೇ ಹಾದಿಯನ್ನು ಊಬರ್ ಸಂಸ್ಥೆಯು ಅನುಸರಿಸುತ್ತಿದ್ದು, ಭಾರಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಹಾಗಾದ್ರೆ ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಊಬರ್ ಸಂಸ್ಥೆಯು ಸುಮಾರು 3,300 ಉದ್ಯೋಗಿಗಳನ್ನು, ಅಂದರೆ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ಶೇಕಡ 10ರಷ್ಟು ಸಿಬ್ಬಂದಿಯನ್ನು ಕಡಿತ ಮಾಡುವುದಾಗಿ ಘೋಷಣೆ ಮಾಡಿದೆ. ರೈಡ್-ಶೇರಿಂಗ್, ಡೆಲಿವರಿ ಹಾಗೂ ರೋಬೋ ಟ್ಯಾಕ್ಸಿ ವ್ಯವಹಾರಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕಂಪನಿ ಈ ಬೃಹತ್ ಪುನರ್‌ರಚನೆ ಕೈಗೊಂಡಿದೆ ಎಂದು ತಿಳಿದುಬಂದಿದೆ.

Uber Layoffs 2026 3 300 Jobs Cut as Company Restructures Operations Know Key Reasons details

ಊಬರ್ ಷೇರುಗಳು ಕಳೆದ ಒಂದು ವರ್ಷದಲ್ಲಿ ಸುಮಾರು 8% ಕುಸಿದಿವೆ. ಸ್ವಯಂಚಾಲಿತ ರೈಡ್-ಹೇಲಿಂಗ್ ಕಂಪನಿಯಾದ Waymo, ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ Uber ಹೊಂದಿರುವ ಪ್ರಾಬಲ್ಯಕ್ಕೆ ಸವಾಲು ಹಾಕಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿಬಂದಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

Bloombergಗೆ ಲಭ್ಯವಾದ ಇ-ಮೇಲ್‌ನಲ್ಲಿ Uber ಸಿಇಒ ದಾರಾ ಖೋಸ್ರೋಶಾಹಿ, ಇತ್ತೀಚಿನ ವರ್ಷಗಳಲ್ಲಿ ಕಂಪನಿಯ ಬೆಳವಣಿಗೆಯಿಂದಾಗಿ 'ಹೆಚ್ಚಿನ ನಿರ್ವಹಣಾ ಹಂತಗಳು, ಹೆಚ್ಚಿನ ಸಮನ್ವಯ, ವಿಭಜಿತ ಜವಾಬ್ದಾರಿಗಳು' ಉಂಟಾಗಿವೆ ಎಂದು ತಿಳಿಸಿದ್ದಾರೆ. ಊಬರ್ ವಕ್ತಾರರ ಪ್ರಕಾರ, ಈ ಉದ್ಯೋಗ ಕಡಿತದಿಂದ ಕಂಪನಿಯಲ್ಲಿರುವ ಮ್ಯಾನೇಜರ್‌ಗಳ ಸಂಖ್ಯೆ ಶೇಕಡ 20ರಷ್ಟು ಕಡಿಮೆಯಾಗಲಿದೆ. ಕೆಲವು ಮ್ಯಾನೇಜರ್‌ಗಳನ್ನು ವೈಯಕ್ತಿಕ ಕೊಡುಗೆದಾರರ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಊಬರ್‌ನ ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳು

* ಹಂತ-ಹಂತದ ನಿರ್ವಹಣಾ ಪ್ರಕ್ರಿಯೆಗಳನ್ನು ಕಡಿಮೆ ಮಾಡುವುದು ಮತ್ತು ಸಂಸ್ಥೆಯನ್ನು ಸರಳವಾಗಿ ಹಾಗೂ ವೇಗವಾಗಿ ಕಾರ್ಯಾಚರಿಸುವಂತೆ ಮಾಡುವುದು.

* ಸ್ವಯಂಚಾಲಿತ ವಾಹನ ಸೇವೆ ಒದಗಿಸುವ 'Waymo' ಕಂಪನಿಯಿಂದ ಸವಾಲು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಉಂಟಾಗಿರುವ ಆತಂಕ.

* ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರು ಮೌಲ್ಯದಲ್ಲಿ ಸುಮಾರು 8% ನಷ್ಟ ದಾಖಲಾಗಿದೆ.

ಪ್ರಮುಖ ಬದಲಾವಣೆಗಳ ವಿವರ

* ಮ್ಯಾನೇಜರ್ ಹುದ್ದೆಗಳ ಸಂಖ್ಯೆಯನ್ನು ಶೇಕಡ 20ರಷ್ಟು ತಗ್ಗಿಸಲಾಗುತ್ತಿದ್ದು, ಕೆಲವರನ್ನು 'ಇಂಡಿವಿಜುಯಲ್ ಕಂಟ್ರಿಬ್ಯೂಟರ್' (IC) ಹುದ್ದೆಗಳಿಗೆ ಬದಲಾಯಿಸಲಾಗುತ್ತಿದೆ.

* ಒಬ್ಬರು ಅಥವಾ ಇಬ್ಬರಿರುವ ಸಣ್ಣ ತಂಡಗಳ ಪ್ರಮಾಣವನ್ನು ಶೇಕಡ 50ರಷ್ಟು ಕಡಿಮೆ ಮಾಡಲಾಗುತ್ತಿದೆ.

* ಜಾಗತಿಕ ಕಾರ್ಯಪಡೆಯನ್ನು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಯಾರ್ಕ್ ಕಚೇರಿಗಳಲ್ಲಿ ಕೇಂದ್ರೀಕರಿಸಲಾಗುತ್ತಿದ್ದು, ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆಯನ್ನು ಒಟ್ಟು ಸಿಬ್ಬಂದಿಯ ಶೇಕಡ 1ಕ್ಕೆ ಸೀಮಿತಗೊಳಿಸಲಾಗಿದೆ.

ಉದ್ಯೋಗ ಕಡಿತಕ್ಕೆ ಸಿಇಒ ನೀಡಿದ ಸ್ಪಷ್ಟನೆ ಏನು?

ಈ ವಜಾಗೊಳಿಸುವಿಕೆಗೆ ಕೃತಕ ಬುದ್ಧಿಮತ್ತೆ (AI) ಕಾರಣವಲ್ಲ, ಬದಲಿಗೆ ಆಡಳಿತಾತ್ಮಕ ಸರಳೀಕರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ದಾರಾ ಖೋಸ್ರೋಶಾಹಿ ಸ್ಪಷ್ಟಪಡಿಸಿದ್ದಾರೆ.

ಐಟಿ, ಟೆಕ್ ವಲಯದಲ್ಲಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳು

* ಕಂಪನಿಗಳಲ್ಲಿ ಹೆಚ್ಚಿನ ಮ್ಯಾನೇಜ್‌ಮೆಂಟ್ ಹಂತಗಳನ್ನು ತೆಗೆದುಹಾಕಿ ಸಂಸ್ಥೆಯನ್ನು ಚುರುಕುಗೊಳಿಸಲಾಗುತ್ತಿದೆ.

* ಆದಾಯ ಮತ್ತು ಲಾಭದ ಪ್ರಮಾಣವನ್ನು ಕಾಯ್ದುಕೊಳ್ಳಲು ಕಂಪನಿಗಳು ಮುಂದಾಗುತ್ತಿವೆ.

* ಪ್ರೊಗ್ರಾಮಿಂಗ್ ಮತ್ತು ದೈನಂದಿನ ಕೆಲಸಗಳಲ್ಲಿ AI ಬಳಕೆಯಿಂದ ಕಡಿಮೆ ಸಿಬ್ಬಂದಿಯಲ್ಲೇ ಹೆಚ್ಚು ಉತ್ಪಾದಕತೆ ಪಡೆಯಲಾಗುತ್ತಿದೆ.

* ಕ್ಲೌಡ್, ಕೃತಕ ಬುದ್ಧಿಮತ್ತೆ ಹಾಗೂ ಡೇಟಾ ಸೈನ್ಸ್ ಮೂಲದ ಕೆಲಸಗಳಿಗೆ ಬೇಡಿಕೆ ಹೆಚ್ಚಿದ್ದು, ಸಾಂಪ್ರದಾಯಿಕ ಕೌಶಲ ಹೊಂದಿರುವ ಉದ್ಯೋಗಿಗಳಿಗೆ ಮರು-ತರಬೇತಿಯ ಅಗತ್ಯವಿದೆ.

* ಹೊಸ ಡಿಜಿಟಲ್ ಟೂಲ್ಸ್‌ಗಳ ನೆರವಿನಿಂದ ಒಬ್ಬ ಉದ್ಯೋಗಿಯೇ ಹಲವರ ಕೆಲಸ ನಿರ್ವಹಿಸುವ ಸಾಮರ್ಥ್ಯ ಪಡೆದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+