ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1200 ಉದ್ಯೋಗಿಗಳ ರಾಜೀನಾಮೆ ಬೆನ್ನಲ್ಲೇ ಮಸ್ಕ್ ಸಂದೇಶ

|
Google Oneindia Kannada News

ನವದೆಹಲಿ, ನವೆಂಬರ್ 19: ಟ್ವಿಟ್ಟರ್ ಸಂಸ್ಥೆಯ ನೂರಾರು ಉದ್ಯೋಗಿಗಳು ರಾಜೀನಾಮೆ ನೀಡುವುದಕ್ಕೆ ನಿರ್ಧರಿಸಿದ ಒಂದು ದಿನದ ನಂತರ ಸಿಬ್ಬಂದಿಗೆ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್ ಎಸ್ಓಎಸ್( Save our Soul) ಸಂದೇಶವನ್ನು ಕಳುಹಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಿ ಟ್ವಿಟರ್ ಕಚೇರಿಯಲ್ಲಿ ಇರುವಂತೆ ಎಲೋನ್ ಮಸ್ಕ್ ಕೇಳಿಕೊಂಡರು. ಅದಕ್ಕಾಗಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಸಾಫ್ಟವೇರ್ ಕುರಿತು ಮಾಹಿತಿಯುಳ್ಳ ಯಾರಾದರೂ ಒಬ್ಬ ಸಿಬ್ಬಂದಿಯು 10ನೇ ಮಹಡಿಗೆ ಆಗಮಿಸುವಂತೆ ಮನವಿ ಮಾಡಿಕೊಂಡಿದ್ದರು.

ಉದ್ಯೋಗಿಗಳ ಸಾಮೂಹಿಕ ರಾಜೀನಾಮೆಯಿಂದ ಎಲ್ಲಾ ಕಚೇರಿ ಮುಚ್ಚಿದ ಟ್ವಿಟ್ಟರ್‌ಉದ್ಯೋಗಿಗಳ ಸಾಮೂಹಿಕ ರಾಜೀನಾಮೆಯಿಂದ ಎಲ್ಲಾ ಕಚೇರಿ ಮುಚ್ಚಿದ ಟ್ವಿಟ್ಟರ್‌

ಬೇರೆ ಏರಿಯಾಕ್ಕೆ ಬರಲು ಸಾಧ್ಯವಾಗದವರು ಅಥವಾ ಕುಟುಂಬದ ತುರ್ತುಸ್ಥಿತಿಗಳನ್ನು ಹೊಂದಿರುವವರು ಮಾತ್ರ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು ಎಂದು ಎಲೋನ್ ಮಸ್ಕ್ ಹೇಳಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಇಂಜಿನಿಯರ್‌ಗಳಿಗೆ ಮಸ್ಕ್ ಕೇಳಿದ್ದೇನು?

ಇಂಜಿನಿಯರ್‌ಗಳಿಗೆ ಮಸ್ಕ್ ಕೇಳಿದ್ದೇನು?

ಕಳೆದ ಆರು ತಿಂಗಳಲ್ಲಿ ಅವರ ಕೋಡಿಂಗ್ ಸಾಧನೆಗಳ ಬುಲೆಟ್-ಪಾಯಿಂಟ್ ಸಾರಾಂಶವನ್ನು ಕಳುಹಿಸಲು ಟ್ವಿಟ್ಟರ್ ಮಾಲೀಕರು ಇಂಜಿನಿಯರ್‌ಗಳಿಗೆ ಕೇಳಿದ್ದು, ಇದರ ಜೊತೆಗೆ ಕೋಡ್‌ನ ಅತ್ಯಂತ ಪ್ರಮುಖ ಸಾಲುಗಳ 10 ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿದ್ದಾರೆ. ಇದರಿಂದ "ಟ್ವಿಟರ್ ಟೆಕ್ ಸ್ಟಾಕ್ ಅನ್ನು ಅರ್ಥಮಾಡಿಕೊಳ್ಳಲು" ಅವರಿಗೆ ಸಹಾಯ ಮಾಡುತ್ತದೆ ಎಂದು ಮಸ್ಕ್ ಹೇಳಿದ್ದಾರೆ.

ಉದ್ಯೋಗ ಕಳೆದುಕೊಳ್ಳುತ್ತೀರ ಹುಷಾರ್

ಉದ್ಯೋಗ ಕಳೆದುಕೊಳ್ಳುತ್ತೀರ ಹುಷಾರ್

"ಅತ್ಯಂತ ಹಾರ್ಡ್‌ಕೋರ್" ಕೆಲಸದ ವಾತಾವರಣಕ್ಕೆ ಬದ್ಧರಾಗಲು ಎಲೋನ್ ಮಸ್ಕ್‌ನ ಸಂದೇಶವನ್ನು ಸಿಬ್ಬಂದಿಯು ಸೀರಿಯಸ್ ಆಗಿ ತೆಗೆದುಕೊಂಡರು. ಸಾಮೂಹಿಕ ನಿರ್ಗಮನದ ಕಡೆಗೆ ಮುಖ ಮಾಡುತ್ತಿದ್ದಂತೆ ಪರಿಸ್ಥಿತಿಯು ಕಚೇರಿಯನ್ನೇ ಮುಚ್ಚುವಂತೆ ಮಾಡಿತು. ಇದಕ್ಕೂ ಪೂರ್ವದಲ್ಲಿ ದೀರ್ಘಾವಧಿಯ ಕೆಲಸವನ್ನು ಮಾಡಿರಿ, ಇಲ್ಲವೇ ಉದ್ಯೋಗವನ್ನು ಕಳೆದುಕೊಳ್ಳಿರಿ ಎಂಬ ಎಚ್ಚರಿಕೆಯನ್ನು ನೀಡಿದ್ದರು.

ರಾಜೀನಾಮೆ ಸಲ್ಲಿಸಿದ 1200 ಉದ್ಯೋಗಿಗಳು

ರಾಜೀನಾಮೆ ಸಲ್ಲಿಸಿದ 1200 ಉದ್ಯೋಗಿಗಳು

"ಎಲೋನ್ ಮಸ್ಕ್ ನೀಡಿದ ಎಚ್ಚರಿಕೆ ಬೆನ್ನಲ್ಲೇ ಉದ್ಯೋಗಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೆ ಶುರು ಮಾಡಿದರು. ಶುಕ್ರವಾರವೊಂದೇ ದಿನ 1200 ಉದ್ಯೋಗಿಗಳು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದರಿಂದ ಕಂಪನಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಕಂಪನಿಯಲ್ಲಿನ ಪ್ರಮುಖ ಸ್ಥಾನಗಳನ್ನು ಯಾರು ನಿರ್ವಹಿಸಬೇಕು ಎಂಬುದೇ ಪ್ರಶ್ನೆಯಾಗಿದೆ," ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

3500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಮಸ್ಕ್

3500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಮಸ್ಕ್

ಕಳೆದ ತಿಂಗಳ ಕೊನೆಯಲ್ಲಿ 44 ಬಿಲಿಯನ್‌ಗೆ ಖರೀದಿಸಿದ ಸಾಮಾಜಿಕ ಮಾಧ್ಯಮ ಕಂಪನಿಯಲ್ಲಿನ ಆಮೂಲಾಗ್ರ ಬದಲಾವಣೆಗಳಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್ ತೀವ್ರ ಟೀಕೆಗೆ ಒಳಗಾದರು. ಅವರು ಈಗಾಗಲೇ ಕಂಪನಿಯ 7,500 ಸಿಬ್ಬಂದಿಯಲ್ಲಿನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ. ಮನೆಯಿಂದ ಕೆಲಸ ಮಾಡುವ ನೀತಿಯನ್ನು ರದ್ದುಗೊಳಿಸಿದ್ದಾರೆ. ದೀರ್ಘಾವಧಿಯ ಸಮಯವನ್ನು ವಿಧಿಸಿರುವುದು ಅವ್ಯವಸ್ಥೆಯನ್ನು ಸೃಷ್ಟಿ ಮಾಡಿವೆ.

English summary
Twitter owner Elon Musk sent an SOS to the staff after 1200 Employees Resign. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X