ಟಾಪ್ ಐಟಿ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ: 91 ಸಾವಿರ ನೇಮಕಾತಿ

ಬೆಂಗಳೂರು, ಜನವರಿ 19: ದೇಶದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಹಾಗೂ ಎಚ್ ಸಿ ಎಲ್ ಟೆಕ್ನಾಲಜೀಸ್ ಮುಂಬರುವ ಆರ್ಥಿಕ ವರ್ಷದ ಕ್ಯಾಂಪಸ್ ನೇಮಕಾತಿ ಕುರಿತಂತೆ ಮಹತ್ವದ ಘೋಷಣೆ ಹೊರಡಿಸಿವೆ.

ಮುಂಬರುವ ಆರ್ಥಿಕ ವರ್ಷದಲ್ಲಿ ಸರಿ ಸುಮಾರು 91,000ಕ್ಕೂ ಅಧಿಕ ಫ್ರೆಶರ್ಸ್ ಉದ್ಯೋಗ ಪಡೆಯಲಿದ್ದಾರೆ. ಎಲ್ಲಾ ನೇಮಕಾತಿಗಳು ಕ್ಯಾಂಪಸ್ ಸಂದರ್ಶನ ಮೂಲಕ ಆಗಲಿದೆ ಎಂದು ಸಂಸ್ಥೆಗಳು ಹೇಳಿವೆ.

ಟಿಸಿಎಸ್ ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಜಾಗತಿಕ ಎಚ್ ಆರ್ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಮಾತನಾಡಿ, ಟಿಸಿಎಸ್ ಮುಂದಿನ ವರ್ಷ ಸರಿ ಸುಮಾರು 40,000 ಹೊಸ ನೇಮಕಾತಿ ಮಾಡಿಕೊಳ್ಳಬಹುದು ಎಂದಿದ್ದಾರೆ. ಇನ್ಫೋಸಿಸ್ 24, 000 ಪದವೀಧರರನ್ನು ಕಾಲೇಜ್ ಕ್ಯಾಂಪಸಿನಿಂದ ನೇಮಕ ಮಾಡಿಕೊಳ್ಳುತ್ತಿದೆ.

TCS, Infosys, HCL Tech and Wipro to hire 91,000 freshers from campuses

ಎಚ್ ಸಿಎಲ್ ಟೆಕ್ನಾಲಜೀಸ್ ಎಚ್ ಆರ್ ಮುಖ್ಯಸ್ಥ ಅಪ್ಪಾರಾವ್ ವಿವಿ ಅವರು ಮಾತನಾಡಿ, ನಮ್ಮ ಸಂಸ್ಥೆ 33% ಅಧಿಕ ನೇಮಕಾತಿಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಕಾಣಬಹುದು. ಕಳೆದ ವರ್ಷ ಶೇ 70ರಷ್ಟು ಭಾರತದಲ್ಲಿ ಹಾಗೂ ಶೇ 30ರಷ್ಟು ವಿದೇಶದಲ್ಲಿ ಮಾನವ ಸಂಪನ್ಮೂಲ ಹೊಂದಲಾಗಿತ್ತು. ಭಾರತದಲ್ಲಿ ಈ ವರ್ಷ ಶೇ 90ರಷ್ಟು ನೇಮಕ ಭಾರತದಲ್ಲೇ ಆಗಲಿದೆ ಎಂದರು. ಹೀಗಾಗಿ 15,000 ಫ್ರೆಶರ್ಸ್ ನೇಮಕ ಮಾಡಿಕೊಳ್ಳುತ್ತಿದೆ.

ವಿಪ್ರೋ ಸಂಸ್ಥೆ ಕಳೆದ ಎರಡು ತ್ರೈಮಾಸಿಕದಲ್ಲಿ ನೇಮಕಾತಿ ಹೆಚ್ಚಳಗೊಳಿಸಿದೆ. ಬೇಡಿಕೆಗೆ ತಕ್ಕಂತೆ ನೇಮಕಾತಿ ಆಗುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ನೇಮಕಾತಿ, ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಹೇಳಿದ್ದಾರೆ. ಒಟ್ಟಾರೆ, ದೇಶದ ಟಾಪ್ ಐಟಿ ಕಂಪನಿಗಳು ನೇಮಕಾತಿ ಹೆಚ್ಚಳ ಮಾಡಲು ಮುಂದಾಗಿದ್ದು, ಪದವೀಧರರಿಗೆ ಶುಭ ಸುದ್ದಿ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+