ಸಿಂಡಿಕೇಟ್ ಬ್ಯಾಂಕ್ ನಲ್ಲಿ 400 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳಿವೆ

ಬೆಂಗಳೂರು, ಡಿಸೆಂಬರ್. 13 : ಸಿಂಡಿಕೇಟ್ ಬ್ಯಾಂಕ್ 400 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್/ಸ್ಕೇಲ್ 1 ಹುದ್ದೆಗಳಾಗಿದ್ದು, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 14ರಿಂದ ಅರ್ಜಿ ಸಲ್ಲಿಬಹುದು.

ಒಟ್ಟು 400 ಹುದ್ದೆಗಳಿದ್ದು ಅದರಲ್ಲಿ ಓಬಿಸಿ ವರ್ಗಕ್ಕೆ-108 ಹುದ್ದೆಗಳು, ಪರಿಶಿಷ್ಟ ಜಾತಿ(ಎಸ್ ಸಿ)ಗೆ-60, ಪರಿಶಿಷ್ಟ ಪಂಗಡಕ್ಕೆ-30, ಇತರೆ ವರ್ಗಕ್ಕೆ-202 ಸೀಟ್ ಗಳನ್ನು ಕಾಯ್ದಿರಿಸಲಾಗಿದೆ.

ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಹತೆ, ನೇಮಕಾತಿ ಪ್ರಕ್ರಿಯೆ, ಅರ್ಜಿ ಶುಲ್ಕ ಇನ್ನಿತರ ವಿವರಗಳ ಬಗ್ಗೆ ತಿಳಿಯಲು ಮುಂದೆ ಓದಿ. [ಕ್ಲರ್ಕ್ ಹುದ್ದೆಗಳಿಗೆ ಕರ್ನಾಟಕ ಬ್ಯಾಂಕ್ ಅರ್ಜಿ ಆಹ್ವಾನ]

Syndicate Bank Recruitment 2016 Apply online (400 PO Posts)

ವಯೋಮಿತಿ: 02/10/1988 ರಿಂದ 01/10/1996 ರೊಳಗೆ ಜನಿಸಿದವರಾಗಿರಬೇಕು. 20 ರಿಂದ 28 ವರ್ಷ ವಯೋಮಿತಿ 01/10/2016ರಂತೆ ಇರಬೇಕು. ಎಸ್ ಸಿ. ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಇರುತ್ತದೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ.

ವಿದ್ಯಾರ್ಹತೆ: ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. (ಎಸ್ ಸಿ/ಎಸ್ಟಿ ಅಭ್ಯರ್ಥಿಗಳಿಗೆ ಶೇ 55).

ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 100ರು ಅರ್ಜಿ ಶುಲ್ಕ ಹಾಗೂ ಸಾಮಾನ್ಯ ವರ್ಗಕ್ಕೆ 600 ರು ಪ್ರತಿ ಅರ್ಜಿಗೆ ಶುಲ್ಕ ವಿಧಿಸಲಾಗಿದೆ. ಮಾಸ್ಟರ್ / ವೀಸಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+