ಉದ್ಯೋಗದಲ್ಲಿ ಉದ್ಧಾರವಾಗಲು ಬೆಂಗಳೂರೇ ಬೆಸ್ಟ್: ಸಮೀಕ್ಷೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 17: ನಿಮಗೆ ಕೆಲಸದಲ್ಲಿ ಬೆಳವಣಿಗೆ ಆಗುತ್ತಿಲ್ಲ ಅನ್ನಿಸುತ್ತಿದ್ದರೆ ಅದಕ್ಕೆ ನೀವಿರುವ ಸ್ಥಳ ಕಾರಣ. ಕೆಲಸದಲ್ಲಿನ ಅಭಿವೃದ್ಧಿ ನೀವು ಯಾವ ನಗರದಲ್ಲಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಹಾಗಿದ್ದರೆ ಉದ್ಯೋಗದಲ್ಲಿ ಉದ್ಧಾರ ಆಗುವುದಕ್ಕೆ ಯಾವ ನಗರ ಸೂಕ್ತ ಅಂತ ಕೇಳ್ತೀರಾ?

ಕೆಲಸದಲ್ಲಿ ಅಭಿವೃದ್ಧಿಯಾಗುವುದಕ್ಕೆ ಬೆಂಗಳೂರು ಸೂಕ್ತ ನಗರವಂತೆ. ಆ ನಂತರದ ಸ್ಥಾನ ಪುಣೆ ಹಾಗೂ ಹೈದರಾಬಾದ್ ಗೆ ನೀಡಲಾಗಿದೆ. ಭಾರತದ ಪ್ರಮುಖ ಹದಿಮೂರು ನಗರಗಳಲ್ಲಿ ಸಮೀಕ್ಷೆ ಮಾಡಿದ ಟೀಮ್ ಲೀಸ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

Stuck in your job? Relocate to Bengaluru

ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ನಗರಗಳು ಉದ್ಯೋಗದದಲ್ಲಿ ಅಭಿವೃದ್ಧಿ ವಿಚಾರವಾಗಿ ದೆಹಲಿ, ಮುಂಬೈ ಹಾಗೂ ಚೆನ್ನೈ ಅನ್ನೂ ಮೀರಿಸಿವೆ. ಸ್ಟಾರ್ಟ್ ಅಪ್ಸ್, ಬಿಪಿಒ ಮತ್ತು ಕೆಪಿಒಗಳು ಈ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದಲೇ ಇಂಥ ಶ್ರೇಯ ಸಿಕ್ಕಿದೆ.

2011-2015ರ ಮಧ್ಯೆ ದೇಶದಲ್ಲಿ ಕೇವಲ ಎಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿ

ಆದರೆ, ಮತ್ತೊಂದು ಕಡೆ ವಲಸೆ ಹೋಗಿ, ಅಲ್ಲಿ ನೆಲೆ ನಿಂತು ಯಶಸ್ಸು ಸಾಧಿಸುವುದು ಸುಲಭದ ವಿಚಾರವಲ್ಲ್. ಲಖನೌ, ಆನಂತರ ಕೋಲ್ಕತ್ತ ಹಾಗೂ ಬರೋಡಾ ನಗರಗಳು ವಲಸೆ ಹೋಗಲು ಅಂಥ ಸೂಕ್ತವಲ್ಲವಂತೆ. ಎರಡನೇ ದರ್ಜೆಯ ನಗರಗಳ ಪೈಕಿ ಅಹ್ಮದಾಬಾದ್ ಉದ್ಯೋಗದಲ್ಲಿ ಎತ್ತರಕ್ಕೆ ಏರಲು ಅನುಕೂಲವಾದ ನಗರ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಉದ್ಯೋಗದಲ್ಲಿ ಮೇಲಕ್ಕೆ ಏರಲು ಅನುಕೂಲವಾದ ನಗರಗಳು
ಬೆಂಗಳೂರು
ಪುಣೆ
ಹೈದರಾಬಾದ್
ಮುಂಬೈ
ದೆಹಲಿ
ಚೆನ್ನೈ
ಅಹ್ಮದಾಬಾದ್

ಉದ್ಯೋಗದ ಅಭಿವೃದ್ಧಿಗೆ ಪೂರಕವಲ್ಲದ ನಗರಗಳು
ಲಖನೌ
ಕೋಲ್ಕತ್ತ
ಬರೋಡಾ
ಇಂದೋರ್
ಜೈಪುರ್
ಚಂಡೀಗಢ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore is the best city to move to for job growth, followed by Pune and Hyderabad, according to a TeamLease survey of 13 leading cities in India.
Please Wait while comments are loading...