ಶಿವಮೊಗ್ಗ; ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಆಗಸ್ಟ್ 25: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಇಲಾಖೆಯಲ್ಲಿ ಬಹುದಿನಗಳಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರವಳಿಕೆ ತಜ್ಞ-1, ಇಎನ್ ‍ಟಿ-1, ವೈದ್ಯರು (ಎಂ.ಎಚ್., ಎನ್.ಎನ್.ಸಿ.ಯು. ಹಾಗೂ ರಕ್ತ ಸಂಗ್ರಹಣೆ ಮತ್ತು ವಿತರಣೆ)-4, ವೈದ್ಯರು (ಆರ್.ಬಿ.ಎಸ್.ಕೆ.)-3, ಆಡಿಯೋಮೆಟ್ರಿಕ್ ಅಸಿಸ್ಟೆಂಟ್-1, ನೇತ್ರಸಹಾಯಕರು-1, ಕೌನ್ಸಿಲರ್-1, ಶುಶ್ರೂಷಕಿಯರು-8 ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು (ಎ.ಎನ್.ಎಂ.)-4 ಹುದ್ದೆಗಳಿದ್ದು, ನಿಯಮಾನುಸಾರ ವಿದ್ಯಾರ್ಹತೆ ಹಾಗೂ ತರಬೇತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ತಜ್ಞ ವೈದ್ಯರು ಆನ್ ಕಾಲ್ ಬೇಸಿಸ್ ಮೇಲೆ ಖಾಸಗಿ ಸಂಸ್ಥೆ, ಸ್ವಾಯತ್ತ ಸಂಸ್ಥೆ ಮತ್ತು ನಿವೃತ್ತ ತಜ್ಞರ ಸೇವೆಯನ್ನು ಪಡೆಯುವುದಕ್ಕಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ತಾ.ಆಸ್ಪತ್ರೆ ಹಾಗೂ ಸಮುದಾಯ ಆಸ್ಪತ್ರೆಯಲ್ಲಿ ಸೇವೆ ಪಡೆಯುವುದಕ್ಕಾಗಿ ಅಥವಾ ಪೂರ್ಣಪ್ರಮಾಣದ ಸೇವೆ ನೀಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Shivamogga Health and Family Welfare Department Invited Application For Various Vacancies

ತಜ್ಞವೈದ್ಯರು, ಮತ್ತು ವೈದ್ಯರು 70 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿರಬೇಕು. ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಅರ್ಹರಿದ್ದು, ದೈಹಿಕ ಮತ್ತು ಕೆ.ಎಎಂ.ಸಿ.ಯೇ ನೋಂದಣಿ ಹೊಂದಿರಬೇಕು. ಸರ್ಕಾರದ ಮಾರ್ಗಸೂಚಿ ಹಾಗೂ ಎನ್.ಹೆಚ್.ಎಂ., ಎನ್.ಯು.ಹೆಚ್.ಎಂ. ಮಾರ್ಗಸೂಚಿಯಂತೆ ಹುದ್ದೆಗೆ ಪ್ರತ್ಯೇಕ ವಯೋಮಿತಿ ಪರಿಗಣಿಸಲಾಗುವುದು.

ಹುದ್ದೆಗಳನ್ನು ಕಡಿತಗೊಳಿಸುವುದು ಹಾಗೂ ಹೆಚ್ಚಿಸುವುದು ಅಥವಾ ತಿರಸ್ಕರಿಸುವ ವಿಷಯಗಳಲ್ಲಿ ಜಿಲ್ಲಾ ಆರೋಗ್ಯ ಸಂಘದ ನಿರ್ಣಯವೇ ಅಂತಿಮವಾಗಿರುತ್ತದೆ. ಶುಶ್ರೂಷಕಿಯರು, ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ನೇತ್ರ ಸಹಾಯಕರ ಹುದ್ದೆಯ ಮೂಲ ದಾಖಲಾತಿಗಳ ಪರಿಶೀಲನೆಯು ಸೆಪ್ಟೆಂಬರ್ 3 ರಂದು ಹಾಗೂ ವೈದ್ಯರ ಹುದ್ದೆ ಆಕಾಂಕ್ಷಿಗಳ ದಾಖಲಾತಿಗಳ ಪರಿಶೀಲನೆಯು ಸೆಪ್ಟೆಂಬರ್ 4ರಂದು ನಡೆಯಲಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-298172ನ್ನು ಸಂಪರ್ಕಿಸಬಹುದು. ನೇಮಕಾತಿಯು ಅಭ್ಯರ್ಥಿಯು ಹೊಂದಿರುವ ಅಂಕಗಳು ಹಾಗೂ ಮೀಸಲಾತಿಯನ್ವಯ ನಡೆಯಲಿದೆ.

ಅರ್ಹರು ತಮ್ಮ ಪ್ರಸ್ತಾವನೆಯೊಂದಿಗೆ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 5ವರ್ಷಗಳ ಅನುಭವ ಪ್ರಮಾಣಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ, ಖಾಯಂ ವಿಳಾಸ ಮತ್ತು ಸ್ವವಿವರಗಳನ್ನು ಆಗಸ್ಟ್ 31ರೊಳಗಾಗಿ ಸಲ್ಲಿಸಬೇಕು.

ನಿಗದಿತ ನಮೂನೆಯ ಅರ್ಜಿಯನ್ನು ಎನ್.ಎಚ್.ಎಂ. ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಎಚ್.ರಸ್ತೆ, ಶಿವಮೊಗ್ಗ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+