ಕರ್ನಾಟಕ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ, ಅರ್ಜಿ ಹಾಕಿ
ಬೆಂಗಳೂರು, ಡಿಸೆಂಬರ್ 27: ಕರ್ನಾಟಕ ದಕ್ಷಿಣ ಕೆನರಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಖಾಲಿ ಇರುವ ದ್ವಿತೀಯ ದರ್ಜೆ ಕ್ಲರ್ಕ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
125 ದ್ವಿತೀಯ ದರ್ಜೆ ಕ್ಲರ್ಕ್ ಹಾಗೂ 2 ಕಂಪ್ಯೂಟರ್ ಪ್ರೋಗ್ರಾಮರ್ ಒಟ್ಟು 127 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ದಿನಾಂಕ 10 ಜನವರಿ, 2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳು
1. ದ್ವಿತೀಯ ದರ್ಜೆ ಕ್ಲರ್ಕ್
* ವಿದ್ಯಾರ್ಹತೆ: ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪಿಜಿ ಡಿಪ್ಲೋಮಾ, ಡಿಪ್ಲೋಮಾದಲ್ಲಿ ಕಂಪ್ಯೂಟರ್ ಸೈನ್ಸ್ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 21100 ರಿಂದ 47120 ರು. ವರೆಗೆ ತಿಂಗಳಿಗೆ.
* ವಯೋಮಿತಿ: ಕನಿಷ್ಟ 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
2. ಕಂಪ್ಯೂಟರ್ ಪ್ರೋಗ್ರಾಮರ್
* ವಿದ್ಯಾರ್ಹತೆ: ದ್ವಿತೀಯ ದರ್ಜೆ ಕ್ಲರ್ಕ್ ಹುದ್ದೆಗಳಿಗೆ ಅನ್ವಯಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಗುರುತಿಸಲ್ಪಟ್ಟ ಸಂಸ್ಥೆಗಳಿಂದ ಡಿಪ್ಲೊಮಾ (ಕಂಪ್ಯೂಟರ್ ಅಪ್ಲಿಕೇಶನ್) / B.E. (ಕಂಪ್ಯೂಟರ್ ಸೈನ್ಸ್) / ಎಂಎಸ್ಸಿ ಪೂರ್ಣಗೊಳಿಸರಬೇಕು. ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* ವೇತನ ಶ್ರೇಣಿ: 31320 ರಿಂದ 75905 ರು. ವರೆಗೆ ತಿಂಗಳಿಗೆ.
* ವಯೋಮಿತಿ: ಕನಿಷ್ಟ 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications