SBI Recruitment 2023: ಕ್ಲರ್ಕ್ ಹುದ್ದೆಗಳ ನೇಮಕಾತಿ, ವೇತನ, ಆಯ್ಕೆ ಮಾನದಂಡ ತಿಳಿಯಿರಿ
ಬೆಂಗಳೂರು, ನವೆಂಬರ್ 17: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Recruitment 2023) ತನ್ನಲ್ಲಿ ಖಾಲಿ ಇರುವು ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಕ್ಲರ್ಕ್ ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಮುಂದಿನ ಡಿಸೆಂಬರ್ 7ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಬ್ಯಾಂಕ್ ತಿಳಿಸಿದೆ.

ನೇಮಕಾತಿ ಪೂರ್ಣ ಮಾಹಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿ ಮಾಡಿರುವ ಅರ್ಜಿ ಶುಲ್ಕದ ಮಾಹಿತಿ ನೋಡುವುದಾದರೆ, ಸಾಮಾನ್ಯ, ಇತರೆ ಹಿಂದುಳಿದ ಜಾತಿ (OBC), ಆರ್ಥಿಕವಾಗಿ ದುರ್ಬಲ ವಿಭಾಗ (EWS) ಅಭ್ಯರ್ಥಿಗಳು 750 ರೂಪಾಯಿ ಪಾವತಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC & ST) ವರ್ಗ, ಅಂಗವೈಕಲ್ಯ ಹೊಂದಿರುವ ವ್ಯಕ್ತಿ (PwBD), ಮಾಜಿ ಸೈನಿಕರು (ESM), ಮಾಜಿ ಸೈನಿಕರ (DESM) ಅವಲಂಬಿತರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ ಎನ್ನಲಾಗಿದೆ.

ಶೈಕ್ಷಣಿಕೆ ಅರ್ಹತೆ
ಎಸ್‌ಬಿಐ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಶೈಕ್ಷಣಿಕ ಸಂಸ್ಥೆಗಳು/ಮಂಡಳಿಯಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಖು ಎಂದು ತಿಳಿಸಿದೆ.
ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಪ್ರಮಾಣಪತ್ರ ಕೋರ್ಸ್‌ನಲ್ಲಿ ಉತ್ತೀರ್ಣರಾದವರು ಸಹಿತ ಅರ್ಜಿ ಸಲ್ಲಿಬಹುದು.
ಇನ್ನೂ ಪದವಿ ಅಂತಿಮ ವರ್ಷ ಅಥವಾ ಸೆಮಿಸ್ಟರ್ ಸದ್ಯ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಹರಾಗಿರುತ್ತಾರೆ. ಅಭ್ಯರ್ಥಿಯು 2023ರ ಡಿಸೆಂಬರ್ 31 ರಂದು ಅಥವಾ ಮೊದಲು ಕೋರ್ಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಕ್ಕೆ ಪುರಾವೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಈ ನೇಮಕಾತಿಯಲ್ಲಿ ಜೂನಿಯರ್ ಅಸೋಸಿಯೇಟ್‌ಗಳಿಗೆ ಇಂಟರ್-ಸರ್ಕಲ್ ವರ್ಗಾವಣೆ ಅಥವಾ ಅಂತರ-ರಾಜ್ಯ ವರ್ಗಾವಣೆಗೆ ಯಾವುದೇ ಅವಕಾಶವಿಲ್ಲ. ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಆರಂಭಿಕವಾಗಿ ಮಾಸಿಕ 19,900 ರೂ. ವೇತನ ಇರಲಿದೆ. ಪದವೀಧರರು ಆಯ್ಕೆ ಆದರೆ ಅವರಿಗೆ ಮಾಸಿಕ 17,900 ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದೆ.
ಘಟನೆಗಳ ದಿನಾಂಕಗಳು
ಅರ್ಜಿ ಆರಂಭಿಕ ದಿನಾಂಕ: ನವೆಂಬರ್ 17
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ಡಿಸೆಂಬರ್ 7
ಪೂರ್ವಭಾವಿ ಪರೀಕ್ಷೆ ದಿನಾಂಕ: ಜನವರಿ 2024
ಮುಖ್ಯ ಪರೀಕ್ಷೆ: ಫೆಬ್ರವರಿ 2024












Click it and Unblock the Notifications