SBI Recruitment: ಎಸ್‌ಬಿಐ ಬ್ಯಾಂಕ್‌ನಿಂದ ಕರ್ನಾಟಕದಲ್ಲಿ 203 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
SBI Recruitment: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕರ್ನಾಟಕದಲ್ಲಿ ಖಾಲಿ ಇರುವ 203 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಗ ಕರ್ನಾಟಕದಲ್ಲಿ ಖಾಲಿಯಿರುವ ಬರೋಬ್ಬರಿ 203 ಹುದ್ದೆಗಳಿಹೆ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು ಆರಂಭವಾಗಿದ್ದು, ಕೊನೆಯ ದಿನಾಂಕ ಫೆಬ್ರವರಿ 2, 2025 ಆಗಿದೆ.

ಹುದ್ದೆಯ ಹೆಸರು ಜೂನಿಯರ್ ಅಸೋಸಿಯೇಟ್ ಆಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 24,050-64,480 ರೂಪಾಯಿ ನೀಡಲಾಗುತ್ತದೆ. ಬಿಎ, ಬಿ.ಕಾಂ, ಬಿಇ ಸೇರಿದಂತೆ ಯಾವುದೇ ಡಿಗ್ರಿ ಪಾಸದವರು, ಅದರಲ್ಲೂ 20ರಿಂದ 28 ವರ್ಷದವರು ಅರ್ಜಿ ಸಲ್ಲಿಕೆ ಮಾಡಬಹುದು. ಆಯ್ಕೆ ಪ್ರಕ್ರಿಯೆ ವಿಚಾರಕ್ಕೆ ಬಂದರೆ, ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಭಾಷಾ ಪ್ರಾವೀಣ್ಯತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ https://www.onlinesbi.sbi/ ಗೆ ಭೇಟಿ ನೀಡಬಹುದಾಗಿದೆ.
30 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು, ಕೊನೇ ದಿನಾಂಕ ಯಾವಾಗ ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್-ಎ ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾಸಿಸಲಾಗಿದೆ. 2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು. ಆದರೆ, ಇದೀಗ ಇದೇ ಉದ್ಯೋಗಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಮತ್ತೆ ಆಹ್ವಾನಿಸಿದೆ.
ಗ್ರೂಪ್-ಎ 30 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಪೈಕಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಹಾಗೂ 01 ಕೆಲಸಕ್ಕೆ ಸೇವಾನಿರತ ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ. ಸಾಮಾನ್ಯ ವರ್ಗ 13, ಪರಿಶಿಷ್ಟ ಜಾತಿ 05, ಪರಿಶಿಷ್ಟ ಪಂಗಡ 02, ಪ್ರವರ್ಗ1 01, ಪ್ರವರ್ಗ-2ಎ 05, ಪ್ರವರ್ಗ-2ಬಿ 01, ಪ್ರವರ್ಗ-3ಎ 01, ಪ್ರವರ್ಗ-3ಬಿ 01, ಎಸ್ಸಿ 01, ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.












Click it and Unblock the Notifications