Revenue Dept Recruitment 2022: ಕಂದಾಯ ಇಲಾಖೆ ವ್ಯಾಪ್ತಿಯ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ರಾಜ್ಯ ಕಂದಾಯ ಇಲಾಖೆಯು ಆಟಲ್ ಜೀ ಜನಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ಆಯ್ಕೆಯಾದವರು ಹೊರ ಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸಬೇಕಿದೆ.

ಸಾಫ್ಟ್ವೇರ್ ಅಥವಾ ಅಪ್ಲಿಕೇಶನ್ ಡೆವೆಲಪರ್ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸಾಫ್ಟ್ ವೇರ್ ಡೆವೆಲೆಪರ್ ಮತ್ತು ಮೊಬೈಲ್ ಅಪ್ಲಿಕೇಶನ್ ಡೆವೆಲೆಪರ್ ಖಾಲಿ ಹುದ್ದೆಗಳು, ಅರ್ಜಿ ಸಲ್ಲಿಕೆ ಹೇಗೆ, ಹುದ್ದೆಗೆ ಸಂಬಂಧಿಸಿ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

ಹುದ್ದೆ ಸ್ಥಳ, ಸಂಬಳದ ಮಾಹಿತಿ

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸಾಫ್ಟ್ ವೇರ್ ಡೆವೆಲೆಪರ್ ಮತ್ತು ಮೊಬೈಲ್ ಅಪ್ಲಿಕೇಶನ್ ಡೆವೆಲೆಪರ್ ಹುದ್ದೆಗಳಿಗೆ ಆಯ್ಕೆಯಾಗುವವರು ಬೆಂಗಳೂರಲ್ಲಿ ಕಾರ್ಯ ನಿರ್ವಹಿಸಬಹುದು. ಅಭ್ಯರ್ಥಿಗಳ ಅನುಭವದ ಆಧಾರದ ಮೇಲೆ ಮಾಸಿಕ ರೂ. 40,000ರೂಪಾಯಿಂದ 80,000 ರೂಪಾಯಿವರೆಗೆ ವೇತನ ಪಡೆಯಬಹುದು.

Revenue Department recruitment 2022: Revenue Dept invites eligible for two empty posts

ವಿದ್ಯಾರ್ಹತೆ ಏನು?

ಅರ್ಹ ಆಸಕ್ತ ಅಭ್ಯರ್ಥಿಯು ಈ ಸಾಫ್ಟ್ ವೇರ್ ಡೆವೆಲೆಪರ್‌ಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಇಲ್ಲವೇ ಬಿ.ಇ ಅಥವಾ ಇಸಿಇ/ಐಟಿ/ಇಂಫಾರ್ಮೇಷನ್ ಸೈನ್ಸ್ ಅಥವಾ ಎಂಸಿಎ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 3ರಿಂದ 5 ವರ್ಷ ವೃತ್ತಿ ಅನುಭವ ಪಡೆದಿರಬೇಕು.

ಅದೇ ರೀತಿ ಮೊಬೈಲ್ ಅಪ್ಲಿಕೇಶನ್ ಡೆವೆಲೆಪರ್ ಹುದ್ದೆ ಪಡೆಯಲು ಇಚ್ಛಿಸುವವರು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಇಲ್ಲವೇ ಬಿ.ಇ ಅಥವಾ ಇಸಿಇ/ ಐಟಿ/ ಇಂಫಾರ್ಮೇಷನ್ ಸೈನ್ಸ್ ಅಥವಾ ಎಂಸಿಎ ಪದವಿ ಹೊಂದಿರಬೇಕು. ಇದರೊಂದಿಗೆ ಮೊಬೈಲ್ ಅಪ್ಲಿಕೇಶನ್ ಡೆವೆಲೆಪ್ ಮೆಂಟ್ ಕ್ಷೇತ್ರದಲ್ಲಿ 3ರಿಂದ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.

ಜಾವ, ಡಾಟಾ ಬೇಸ್ ಮತ್ತು ಯುಐ/ಯುಎಕ್ಸ್ ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.

ಡಿ.23ರೊಳಗೆ ಅರ್ಜಿ ಸಲ್ಲಿಸಿ

ಹುದ್ದೆಯ ಅನುಭವದ ವಿವರಗಳು ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 23 ರೊಳಗೆ ಇ-ಮೇಲ್ [email protected] ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಯಾವುದೇ ಶುಲ್ಕವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ಕಂದಾಯ ಇಲಾಖೆ, ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯ, ರೆವಿನ್ಯೂ ಸರ್ವೆ ಕಚೇರಿ ಕಟ್ಟಡ, ಕೆ.ಆರ್.ವೃತ್ತ ಬೆಂಗಳೂರು 560001 ಇಲ್ಲಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+