ಮಾಜಿ ಸೈನಿಕರ ಮೀಸಲು ನೇಮಕಾತಿ: ವೇತನ ನಿಗದಿ
ಬೆಂಗಳೂರು, ಮಾರ್ಚ್ 01: ಕರ್ನಾಟಕದ ಪೊಲೀಸ್ ಇಲಾಖೆ ಮಾಜಿ ಸೈನಿಕರ ಮೀಸಲಾತಿ ಅಡಿಯಲ್ಲಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ವೇತನ ನಿಗದಿಪಡಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.
ಸೌಮೇಂದು ಮುಖರ್ಜಿ, ಎಡಿಜಿಪಿ (ಆಡಳಿತ). ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಪರವಾಗಿ ಆಫ್ ಪೊಲೀಸ್ ಪರವಾಗಿ ಈ ಸುತ್ತೋಲೆ ಪ್ರಕಟಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಪತ್ರಗಳನ್ನು ಉಲ್ಲೇಖ ಮಾಡಲಾಗಿದೆ.

ನ್ಯಾಯಾಲಯಗಳು, ಆಕ್ಷೇಪಿಸಿರುವಂತೆ ಕೆ.ಸಿ.ಎಸ್. ನಿಯಮಾವಳಿಗಳ ನಿಯಮ 41-ಸಿರಲ್ಲಿ ಕೇಂದ್ರ ಸರ್ಕಾರದ ಸೇವೆಗೆ ಪಡೆಯಬಹುದಾದ ಪಿಂಚಣಿ ಮೇಲಿನ ತುಟ್ಟಿಭತ್ಯೆ ಸ್ಥಗಿತಗೊಳಿಸಲು ಒಪ್ಪಿಗೆ ಪತ್ರ ನೀಡುವಂತೆ ನಿರ್ದೇಶನ ನೀಡಲು ಮತ್ತು ಸ್ಥಗಿತಗೊಳಿಸಲು ಇಲಾಖೆಗೆ ಅವಕಾಶಗಳಿರುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾಜಿ ಸೈನಿಕ ಪಿಂಚಣಿ ಪ್ರಾಧಿಕಾರ ಪರಿಶೀಲಿಸಿ ಕ್ರಮ ಜರುಗಿಸಬೇಕಾಗಿರುತ್ತದೆ. ಅಲ್ಲದೆ ಹಲವು ಘಟಕಗಳಲ್ಲಿ ನಿಯಮಗಳಿಗೆ ವಿರುದ್ಧವಾಗಿ ವೇತನ ಪರಿಷ್ಕರಿಸಿ ನಿಗದಿಪಡಿಸುತ್ತಿರುವುದನ್ನು ಗಮನಿಸಲಾಗಿರುತ್ತದೆ. ಆದುದರಿಂದ, ನಿಯನ್ನು 41-ಸಿದಲ್ಲಿನ ಅವಕಾಶಗಳ ಮೇರೆಗೆ ಮಿಲಿಟರಿ ಸೇವೆಯಲ್ಲಿ ಅಂತಿಮವಾಗಿ ಪಡೆದ ವೇತನ ಹಂತದ ರಕ್ಷಣೆಯೊಂದಿಗೆ ರಾಜ್ಯ ಸಿವಿಲ್ ಸೇವೆಯ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿ ವೇತನ ನಿಗದಿಗೊಳ್ಳುವ ಪ್ರಕರಣಗಳಲ್ಲಿ ಇನ್ನು ಮುಂದೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
* ಈ ಉದ್ದೇಶಕ್ಕಾಗಿ ವೇತನ ಎಂದರೆ ಮಿಲಿಟರಿ ಸೇವೆಯಲ್ಲಿ ಅಂತಿಮವಾಗಿ ಪಡೆದ ಮೂಲ ವೇತನ (ಬ್ಯಾಂಡ್ ಪೇ) ಮತ್ತು ಇದರೊಂದಿಗೆ ದಿನಾಂಕ 01/01/2006 ರಿಂದ ಅನ್ವಯವಾಗುವಂತೆ ಪರಿಗಣಿತವಾಗುವ ಗ್ರೇಡ್ ಪೇ ಮತ್ತು ಎಕ್ಸ್ ಗ್ರೂಪ್ ಸೇ ಸಹ ಈ ಉದ್ದೇಶಕ್ಕಾಗಿ ಒಳಗೊಳ್ಳತಕ್ಕದ್ದು.
* ಮಿಲಿಟರಿ ಸೇವೆಯಲ್ಲಿ ಪಡೆದುಕೊಂಡ ವೇತನವು, ಆತನು ನೇಮಕಗೊಂಡ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿನ ಹಂತಕ್ಕೆ ಸಮನಾಗಿರುವಲ್ಲಿ, ಅದನ್ನು ಆ ಹಂತದಲ್ಲಿಯೇ ನಿಗದಿಪಡಿಸತಕ್ಕದ್ದು.
* ಮಿಲಟರಿ ಸೇವೆಯಲ್ಲಿ ಕೊನೆಯ ಸಲ ಪಡೆದುಕೊಂಡ ವೇತನವು, ಆತನು ನೇಮಕಗೊಂಡ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿನ ಹಂತಕ್ಕೆ ಸಂವಾಧಿಯಾಗಿರದೆ ಇರುವಲ್ಲಿ, ಆ ಕೆಳಗಿನ ಹಂತಕ್ಕೆ ಅದನ್ನು ನಿಗದಿಪಡಿಸತಕ್ಕುದು ಮತ್ತು ವ್ಯತ್ಯಾಸವನ್ನು ವೇತನದಲ್ಲಿನ ಮುಂದಿನ ಏರಿಕೆಯಲ್ಲಿ ಸೇರಿಸಿಕೊಳ್ಳಬಹುದಾದ ವೈಯಕ್ತಿಕ ವೇತನವನ್ನಾಗಿ ಪರಿಗಣಿಸಬೇಕು.
* ಮಿಲಟರಿ ಸೇವೆಯಲ್ಲಿ ಕೊನೆಯ ಸಲ ಪಡೆದುಕೊಂಡ ವೇತನವು ಆತನು ನೇಮಕಗೊಂಡ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ವೇತನಕ್ಕಿಂತ ಕಡಿಮೆ ಇರುವಲ್ಲಿ, ಅದನ್ನು ಕನಿಷ್ಟ ವೇತನಕ್ಕೆ ನಿಗದಿಪಡಿಸತಕ್ಕದ್ದು.
* ಮಿಲಿಟರಿ ಸೇವೆಯಲ್ಲಿ ಕೊನೆಯ ಸಲ ಪಡೆದುಕೊಂಡ ವೇತನವು, ಆತನು ನೇಮಕಗೊಂಡ ಕಾಲಿಕ ವೇತನ ಶ್ರೇಣಿಯ ಶ್ರೇಣಿಯ ಗರಿಷ್ಠ ವೇತನಕ್ಕಿಂತ ಹೆಚ್ಚಿಗೆಯಾಗಿರುವಲ್ಲಿ ಅದನ್ನು ಗರಿಷ್ಠ ವೇತನಕ್ಕೆ ನಿಗದಿಪಡಿಸತಕ್ಕದ್ದು.
* ಕೇಂದ್ರ ಸರ್ಕಾರದ ಪರಿಷ್ಕೃತ ವೇತನ ನಿಯಮಗಳು ಜಾರಿಗೆ ಬರುವ ಪೂರ್ವದಲ್ಲಿಯೇ ಸೈನಿಕ ಸೇವೆಯಿಂದ ಬಿಡುಗಡೆ ಹೊಂದಿರುವ ನೌಕರರು, ವಾಸ್ತವವಾಗಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆದು ಬಿಡುಗಡೆ ಹೊಂದಿರುವುದಿಲ್ಲವಾದ್ದರಿಂದ, ಅವರಿಗೆ ಲಭಿಸಬಹುದಾದ ಕಾಲನಿಕ ವೇತನ ನಿಗದಿಯನ್ನು ಪರಿಗಣಿಸಿ ರಾಜ್ಯ ಸಿವಿಲ್ ಸೇವೆಯಲ್ಲಿನ ಹುದ್ದೆಯಲ್ಲಿ ವೇತನ ನಿಯತಗೊಳಿಸಲು ಅವಕಾಶವಿರುವುದಿಲ್ಲ. ಆದರೆ, ಕೇಂದ್ರ ಸರ್ಕಾರದ ಪರಿಷ್ಕೃತ ವೇತನ ನಿಯಮಗಳು ಜಾರಿಗೆ ಬರುವ ದಿನಾಂಕದ ನಂತರದಲ್ಲಿ ಸೈನಿಕ ಸೇವೆಯಿಂದ ಬಿಡುಗಡೆ ಹೊಂದಿರುವ ನೌಕರರು, ವಾಸ್ತವವಾಗಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆದು ಬಿಡುಗಡೆ ಹೊಂದಿರದಿದ್ದರೂ ಸಹ, ಅವರಿಗೆ ಲಭಿಸಬಹುದಾದ ಪರಿಷ್ಕೃತ ವೇತನ ನಿಗದಿಯನ್ನು ಪರಿಗಣಿಸಿ ರಾಜ್ಯ ಸಿವಿಲ್ ಸೇವೆಯಲ್ಲಿನ ಹುದ್ದೆಯಲ್ಲಿ ವೇತನ ನಿಯತಗೊಳಿಸಬಹುದು.
* ಎಲ್ಲಾ ಘಟಕಾಧಿಕಾರಿಗಳು ತಮ್ಮ ಅಧೀನ ಅಧಿಕಾರಿ/ ಸಿಬ್ಬಂದಿಗಳಿಗೆ ವೇತನ ನಿಗದೀಕರಣ ಮಾಡುವಾಗ ಕಡ್ಡಾಯವಾಗಿ ದಿನಾಂಕ 27/06/2013ರ ಸರ್ಕಾರದ ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳ ಪಾಲಿಸುವಂತೆ ಹಾಗೂ ಕ್ರಮ ಸಂಖ್ಯೆ 02ರ ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಲಾಗಿದೆ.
* ಕೆ.ಸಿ.ಎಸ್. ನಿಯಮ 41 ಸಿ ರನ್ವಯ ವೇತನ ಸಂರಕ್ಷಣೆ ನೀಡಿ ವೇತನ ನಿಗಧೀಕರಣ ಮಾಡುವ ಸಕ್ಷಮ ಪ್ರಾಧಿಕಾರವು ಈ ಕುರಿತಾದ ಮಾಹಿತಿಯನ್ನು The Senior Account Officer, SPARSH, Office of PCDA (Pension), Prayagaraj, Draupadi Ghat, Prayagraj 211014, Allahabad, UTTARPRADESH ರವರಿಗೆ ಅಧಿಕೃತವಾಗಿ ಪತ್ರ ಮತ್ತು ಇ-ಮೇಲ್ 1. [email protected] (2) [email protected] (3) pcdaplepalcell cladehub.nic.in ಗಳಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
* ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಮಾಜಿ ಸೈನಿಕ ಮೀಸಲಾತಿ ಅಡಿಯಲ್ಲಿ ನೇಮಕಾತಿ ಹೊಂದುವ ನೌಕರನು SPARSH (System For Pension Administration Raksha) ವೆಬ್‌ಸೈಟ್ ಮುಖಾಂತರ ತಾನು ಹೊಸ ಹುದ್ದೆಯಲ್ಲಿ ನೇಮಕಾತಿಯಾಗಿರುವ ಮತ್ತು ಅವರಿಗೆ ನಿಗದಿಪಡಿಸಿರುವ ವೇತನದ ವಿವರಗಳನ್ನು ತನ್ನ ಲಾಗಿನ್ ಐ.ಡಿ. ಬಳಸಿ ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ (PCDA) ಗೆ ಒದಗಿಸಬೇಕಾಗಿರುತ್ತದೆ.
* ಮಾಜಿ ಸೈನಿಕ ಮೀಸಲಾತಿ ಅಡಿಯಲ್ಲಿ ನೇಮಕಾತಿ ಹೊಂದುವ ಅವರು ಹೊಸದಾಗಿ ನೇಮಕಾತಿಯಾಗಿರುವ ಮತ್ತು ನಿಯಮ 41-(ಸಿ) ಅಡಿಯಲ್ಲಿ ಸೈನಿಕ ಸೇವೆಯಲ್ಲಿ ಪಡೆದ ವೇತನದ ರಕ್ಷಣೆಯನ್ನು ಪಡೆದಿರುವ ವಿವರಗಳನ್ನು ತನ್ನ ಲಾಗಿನ್ ಐಡಿ, ಬಳಸಿ ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ (PCDA) ಒದಗಿಸಿರುವ ಬಗ್ಗೆ ಪೂರಕ ದಾಖಲಾತಿಗಳನ್ನು ವೇತನ ಸಂರಕ್ಷಣೆ ಪಡೆದ 15 ದಿನಗಳಲ್ಲಿ ಸಲ್ಲಿಸುವಂತೆ ಪ್ರತ್ಯೇಕವಾಗಿ ಸೂಚನೆ ನೀಡುವುದು. ನಿಗದಿತ ಅವಧಿಯಲ್ಲಿ ಮಾಹಿತಿ ಸಲ್ಲಿಸುವುದು ಸರ್ಕಾರಿ ನೌಕರರ ಆದ್ಯ ಕರ್ತವ್ಯವಾಗಿರುತ್ತದೆ. ನಿಗದಿತ ಅವಧಿಯಲ್ಲಿ ಮಾಹಿತಿ ಸಲ್ಲಿಸದ ಅಥವಾ ತಪ್ಪು ಮಾಹಿತಿ ನೀಡಿದಂತಹ ಸಿಬ್ಬಂದಿಗಳು ಕೆ.ಸಿ.ಎಸ್. (ಸಂತೆ) ನಿಯಮಾವಳಿ, 2021 ನಿಯಮ 3(1) ಮತ್ತು (2) ಅನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುವುದರಿಂದ ಅಂತಹ ನೌಕರರ ವಿರುದ್ಧ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಜರುಗಿಸಲು ಸಹ ಪರಿಗಣಿಸುವುದು.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications