Railways Recruitment 2025: 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸೆಪ್ಟಂಬರ್ 29 ಕೊನೆ ದಿನ, ವಿವರ

ಬೆಂಗಳೂರು, ಸೆಪ್ಟಂಬರ್ 15: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಸಾವಿರಾರು ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಹುದ್ದೆ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೂರ್ಣ ವಿವರ ಇಲ್ಲಿದೆ.

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025ರಲ್ಲಿ ಒಟ್ಟು 30,307 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 29ರಂದು ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಗ್ಯ ಮಾಹಿತಿ ಇಲ್ಲಿ ತಿಳಿಯಿರಿ.

Railway Jobs RRB NTPC Recruitment 2025 RRB Invited Applications for 30 307 Vacancies Announced

ನೇಮಕಾತಿ ಪೂರ್ಣ ವಿವರ

ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)

ನೇಮಕಾತಿ ಹುದ್ದೆಗಳ ಸಂಖ್ಯೆ: 30,307

ಪೊಸ್ಟಿಂಗ್: ಭಾರತಾದ್ಯಂತ

ಅರ್ಜಿ ಸಲ್ಲಿಕೆ ಕೊನೆ ದಿನ: ಸೆಪ್ಟಂಬರ್ 29

ಅರ್ಜಿ ಸಲ್ಲಿಕೆ ವಿಧಾನ:ಆನ್‌ಲೈನ್

ಹುದ್ದೆವಾರು ಮಾಹಿತಿ, ಮಾಸಿಕ ವೇತನ

* ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು: 6,235 ಹುದ್ದೆಗಳು (ಮಾಸಿಕ ವೇತನ 35,400ರೂ.)

* ಸ್ಟೇಷನ್ ಮಾಸ್ಟರ್: 5,623 ಹುದ್ದೆಗಳು (35,400 ರೂ.)

* ಸರಕು ರೈಲು ವ್ಯವಸ್ಥಾಪಕ (Goods Guard): 3,562 ಹುದ್ದೆಗಳು (29,200 ರೂ.)

* ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್: 7,520 ಹುದ್ದೆಗಳು (29,200 ರೂ.)

* ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ: 7,367 ಹುದ್ದೆಗಳು (29,200 ರೂ.)

ವಿದ್ಯಾರ್ಹತೆ ಏನಿರಬೇಕು

ಈ ಭಾರತೀಯ ರೈಲ್ವೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು. ಇನ್ನು ವಯೋಮಿತಿ ನೋಡುವುದಾದರೆ 2025 01 ಜನವರಿಗೆ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 36 ವರ್ಷ ನಿಗದಿ ಮಾಡಲಾಗಿದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ನಂತರ ಸಂದರ್ಶನ ನಡೆಸಿ, ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ಯಾವುದೇ ರಾಜ್ಯಗಳಲ್ಲಿ ಹುದ್ದೆಗೆ ನಿಯೋಜಿಸಬಹುದು. ಮಾಸಿಕ 29,200 ರಿಂದ 35,400 ರೂಪಾಯಿ ವೇತನ ಸಹಿತ ಇತರ ಸರ್ಕಾರಿ ಭತ್ಯೆಗಳು ಸಿಗಲಿವೆ.

ಅರ್ಜಿ ಸಲ್ಲಿಕೆ ವಿಧಾನಗಳು

ಅರ್ಜಿ ಸಲ್ಲಿಕೆ ಈಗಾಗಲೇ ಆಗಸ್ಟ್ 30 ರಂದು ಆರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 29 ರಂದು ಕೊನೆ ದಿನವಾಗಿದೆ. RRB ಅಧಿಕೃತ ವೆಬ್‌ಸೈಟ್ (indianrailways.gov.in) ಭೇಟಿ ನೀಡಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಅನ್ವಯಿಸಿದರೆ ಶುಲ್ಕವನ್ನು ಪಾವತಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+