Post Office Jobs 2023: 8ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಕೈತುಂಬ ಸಂಬಳ, ಅರ್ಜಿ ಹಾಕಿ
ಬೆಂಗಳೂರು, ಜುಲೈ 19: ಭಾರತೀಯ ಅಂಚೆ ಇಲಾಖೆ (IPD) ತನ್ನಲ್ಲಿ ಖಾಲಿ ಇರುವ ವಿವಿದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಕೆಲಸ ಹುಡುತ್ತಿರುವವರಿಗೆ ಕೈ ತುಂಬ ಸಂಬಳದ ಕೆಲಸಕ್ಕೆ ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ಭಾರತೀಯ ಅಂಚೆ ಇಲಾಖೆ (IPD) ಯಲ್ಲಿ ಒಟ್ಟು 5 ನುರಿತ ಕುಶಲಕರ್ಮಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಆಫ್ಲೈನ್ ಮೂಲಕ ಇಲ್ಲವೇ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗಕಾಶದ ಲಾಭ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ವಿವಿರ, ವೇತನ, ವಯೋಮಿತಿ, ಶೈಕ್ಷಣಿಕ ಅರ್ಹತೆ ಕುರಿತು ಪೂರ್ಣ ಮಾಹಿತಿ ಇಲ್ಲಿ ತಿಳಿಯಬಹುದು.
ಹುದ್ದೆ ವಿವಿರ
ಸಂಸ್ಥೆ - ಭಾರತೀಯ ಅಂಚೆ ಕಚೇರಿ
ಖಾಲಿ ಹುದ್ದೆ- 05
ಮೋಟಾರ್ ವೆಹಿಕಲ್ ಮೆಕ್ಯಾನಿಕ್- 2
ಮೋಟಾರ್ ವೆಹಿಕಲ್ ಎಲೆಕ್ಟ್ರಿಷಿಯನ್- 1
ಪೇಂಟರ್- 1
ಟೈಯರ್ ಮ್ಯಾನ್-1
ಅರ್ಜಿ ಸಲ್ಲಿಕೆ ಕಡೆ ದಿನ - 63,000
ಉದ್ಯೋಗ ಸ್ಥಳ- ಬೆಂಗಳೂರು
ಶೈಕ್ಷಣಿಕ ಅರ್ಹತೆ
ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಉತ್ತೀರ್ಣವಾಗಿರಬೇಕು ಎಂದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದೆ.

ವಯೋಮಿತಿ ಮತ್ತು ಸಡಿಲಿಕೆ
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 2023 ಜುಲೈ 1ಕ್ಕೆ ಕನಿಷ್ಠ 18 ವರ್ಷ ಮತ್ತು 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು- 3 ವರ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.
ವೇತನ ಮಾಹಿತಿ ಮತ್ತು ಉದ್ಯೋಗ
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900 ರೂಪಾಯಿಯಿಂದ 63,200 ವೇತನ ಕೊಡಲಾಗುವುದು ಎಂದು ತಿಳಿಸಿದೆ.
ಆಯ್ಕೆ ಹೇಗೆ?
ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಮತ್ತು ಡ್ರೈವಿಂಗ್ ಲೈಸೆನ್ಸ್, ಟ್ರೇಡ್ ಟೆಸ್ಟ್ ನೋಡಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಜುಲೈ 15ರಂದು ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 5ರಂದು ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.
ಅರ್ಜಿ ಹಾಕೋದು ಹೇಗೆ?
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ''ವ್ಯವಸ್ಥಾಪಕರು,
ಮೇಲ್ ಮೋಟಾರ್ ಸೇವೆ, ನಂ.4, ಬಸವೇಶ್ವರ ರಸ್ತೆ, ವಸಂತ ನಗರ ಬೆಂಗಳೂರು-560001, ಇಲ್ಲಿಗೆ ಸಲ್ಲಿಸುವಂತೆ ಕೋರಲಾಗಿದೆ.












Click it and Unblock the Notifications