NWKRTC Recruitment 2025: ಸಾರಿಗೆ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ, ಅರ್ಜಿ ಸಲ್ಲಿಕೆ ಯಾವಾಗ
ಬೆಂಗಳೂರು, ಜನವರಿ 05: ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿಸ ರ್ಕಾರಿ ಉದ್ಯೋಗಗಳು ಖಾಲಿ ಇರುವ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಶೀಘ್ರವೇ ಈ ಹುದ್ದೆಗಳಿಗೆ ಅರ್ಜೀ ಸಲ್ಲಿಕೆ ಆರಂಭವಾಗಲಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಗತ್ಯ ತಯಾರಿ ನಡೆಸಿದೆ. ಹಾಗಾದರೆ ಯಾವಾಗ ಅರ್ಜಿ ಸಲ್ಲಿಕೆ ಆರಂಭ, ಎಷ್ಟು ಹುದ್ದೆಗಳು ಖಾಲಿ ಇವೆ, ವಿದ್ಯಾರ್ಹತೆ ಇತರ ಎಲ್ಲ ಮಾಹಿತಿ ಇಲ್ಲಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(NWKRTC)ದಲ್ಲಿ ಒಟ್ಟು 52 ಹುದ್ದೆಗಳ ನೇಮಕಾತಿ ನಡೆಯಬೇಕಿದೆ. ಈ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸುವಂತೆ ನಿಗಮವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿದೆ. ಈ ಸಂಬಂಧ ಪ್ರಾಧಿಕಾರವು ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ. ಯಾವ ಕ್ಷಣದಲ್ಲಾದರೂ ನೇಮಕಾತಿ ಅಧಿಸೂಚನೆ ಬಿಡುಗಡೆ ಆಗಬಹುದು. ಅರ್ಜಿ ಆಹ್ವಾನಿಸಬಹುದು. ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಸಜ್ಜಾಗಿರುವಂತೆ ನಿಗಮ ಹೇಳಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ/ KEA
ಖಾಲಿ ಹುದ್ದೆಗಳು: 52
ಹುದ್ದೆಗಳ ಹೆಸರು: ವಿವಿಧ ಸಹಾಯಕ ಹುದ್ದೆಗಳು
ವಿದ್ಯಾರ್ಹತೆ: SSLC- ಪದವಿ
ಅರ್ಜಿ ಸಲ್ಲಿಕೆ: ಶೀಘ್ರವೇ ಅಧಿಸೂಚನೆ
ಖಾಲಿ ಹುದ್ದೆಗಳ ಇತರ ಮಾಹಿತಿ
ಸಹಾಯಕ ಸಂಚಾರ ನಿರೀಕ್ಷಕ: 19
ಸಹಾಯಕ ಸಂಚಾರ ವ್ಯವಸ್ಥಾಪಕ : 10
ಸಹಾಯಕ ತಾಂತ್ರಿಕ ತಜ್ಞ: 8
ಸಹಾಯಕ ಕಾನೂನು ಅಧಿಕಾರಿ: 6
ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ: 5
ಸಹಾಯಕ ಆಡಳಿತಾಧಿಕಾರಿ ಹುದ್ದೆಗಳು: 2
ಸಹಾಯಕ ಲೆಕ್ಕಾಧಿಕಾರಿ: 2
ವಿದ್ಯಾರ್ಹತೆ ಏನಿರಬೇಕು?
ಆಟೋಮೊಬೈಲ್ / ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ, ಪರ್ಸನಲ್ ಮ್ಯಾನೇಜ್ಮೆಂಟ್ / ಹ್ಯೂಮನ್ ರಿಲೇಷನ್ಸ್ ಸ್ಪೆಷಲೈಸೇಷನ್/ ಎಂ ಎಸ್ ಡಬ್ಲ್ಯೂ / ಎಂಬಿಎ ನಲ್ಲಿ ಸ್ನಾತಕೋತ್ತರ ಪದವಿ/ ಎಂಬಿಎ/ಬಿ.ಕಾಂ ಜೊತೆ ಫೈನಾನ್ಸ್ ಎಂಬಿಎ ನಲ್ಲಿ ಸ್ನಾತಕೋತ್ತರ ಪದವಿ ಕಡ್ಡಾಯ/ ಬಿಇ ಪದವಿ / ಎಸ್‌ಎಸ್‌ಎಲ್‌ಸಿ/ಪಿಯುಸಿ ಉತ್ತೀಣವಾಗಿರಬೇಕು. ಅಧಿಸೂಚನೆ ನೋಡಿಕೊಂಡು ಆಯಾ ಶೈಕ್ಷಣಿಕ ಅರ್ಹತೆ ನೋಡಿಕೊಂಡು ವಿವಿಧ ಹುದ್ದೆಗಳಿಗೆ ರ್ಜಿ ಸಲ್ಲಿಸಬೇಕು.
ಆಯ್ಕೆ ಹೇಗೆ?
ಎರಡು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಸಾಮಾನ್ಯ ಜ್ಞಾನ ಹಾಗೂ ಕನ್ನಡ ಮತ್ತು ಇಂಗ್ಲಿಷ್, ಕಂಪ್ಯೂಟ್ ಜ್ಞಾನದ ಪರೀಕ್ಷೆ ನಡೆಸಿ, ಬಳಿಕ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ನೇಮಕಾತಿ ವಿಳಂಬ ಏಕೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಾಯವ್ಯ ಸಾರಿಗೆ ಸಂಸ್ಥೆ ಸೇರಿ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 747 ಹುದ್ದೆಗಳ ನೇಮಕಾತಿಗೆ ಸಿದ್ಧವಾಗಿತ್ತು. ಒಳ ಮೀಸಲಾತಿ, ವರ್ಗೀಕರಣ ವಿಚಾರದಲ್ಲಿ ಸರ್ಕಾರ ತಡೆ ನೀಡಿತ್ತು. ಇದೀಗ ಪ್ರಾಧಿಕಾರಕ್ಕೆ ನೇಮಕಾರಿ ಮಾಡಿಕೊಳ್ಳಲು ಕೋರಿಕೆ ಸಲ್ಲಿಕೆ ಆಗಿದೆ. ಸರ್ಕಾರ ಇದಕ್ಕೆ ಅನುಮತಿ ನೀಡುತ್ತಿದ್ದಂತೆ ಕೆಇಎ ಈ ಮೇಲಿನ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಶೀಘ್ರವೇ ಅಧಿಸೂಚನೆ ಪ್ರಕಟವಾಗಲಿದೆ.












Click it and Unblock the Notifications