ಸೂರತ್ಕಲ್ ನ ಎನ್ಐಟಿಯಲ್ಲಿ 29 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 19 : ಕರ್ನಾಟಕದ ಸೂರತ್ಕಲ್ ನ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ(ಎನ್ಐಟಿ)ನಲ್ಲಿ ಖಾಲಿ ಇರುವ 29 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬ್ಯಾಕ್ ಲಾಗ್ ಹುದ್ದೆಗಳಾಗಿದ್ದು, ಎಸ್ ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾಗಿರುತ್ತವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿ ದಿನಾಂಕ ಫೆಬ್ರವರಿ 10ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

NIT Karnataka Surathkal Recruitment 2017 Assistant Professor Posts

ಹುದ್ದೆ: ಅಸಿಸ್ಟೆಂಟ್ ಪ್ರೊಫೆಸರ್(29)
ಸ್ಥಳ: ಕರ್ನಾಟಕ
ವೇತನ: PB-315600-39100+6000/7000/8000(AGP)
ಬ್ಯಾಕ್ ಲಾಗ್ ಹುದ್ದೆಗಳು: ಎಸ್ ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲು.

ಖಾಲಿ ಇರುವ ವಿಭಾಗಗಳು: ಅಪ್ಲೈಡ್ ಮೆಕ್ಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ಕೆಮಿಸ್ಟ್ರಿ, ಕೆಮಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತಯ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್,

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೈನಿಂಗ್ ಇಂಜಿನಿಯರಿಂಗ್, ಬೌತಶಾಸ್ತ್ರ ಮತ್ತು ಸ್ಕೂಲ್ ಮ್ಯಾನೇಜ್ ಮೆಂಟ್ ಸೇರಿದಂತೆ ವಿವಿಧ ಅಧ್ಯನ ವಿಭಾಗಗಳಿಗೆ ಅಸಿಸ್ಟೆಂಟ್ ಪ್ರೊಫೆಸರ್ ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಕರ್ನಾಟಕ ಸೂರತ್ಕಲ್ ಎನ್ಐಟಿ ವೆಬ್ ಸೈಟ್ ಮೂಲಕ ಅಭ್ಯರ್ಥಿಗಳು ನಿರ್ದಿಷ್ಟ ವಿಭಾಕ್ಕೆ ಅರ್ಜಿ ಸಲ್ಲಿಸಬೇಕು.

ಹಾಗೂ ಒಬ್ಬರು ಒಂದಕ್ಕಿಂತ ಹೆಚ್ಚು ವಿಭಾಗದ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕಿದ್ದಲ್ಲಿ ಬೇರೆ-ಬೇರೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
National Institute of Technology (NIT) Karnataka, Surathkal Mangaluru-575 025,invites Online applications positions at the level of 'Assistant Professor' under a 'Special Recruitment Drive'for SC/ST/OBC (Backlog).The last date for submission of applications is 10th February 2017.
Please Wait while comments are loading...