NIRDPR Recruitment 2023: ಪಂಚಾಯತ್ ರಾಜ್ ಇಲಾಖೆಯ 135 ಹುದ್ದೆಗೆ ಅರ್ಜಿ ಆಹ್ವಾನ, ವಿವರ ಇಲ್ಲಿದೆ

ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗು ಮುನ್ನ ವಿಧಾನ, ವಿದ್ಯಾರ್ಹತೆ, ವೇತನ, ವಯೋಮಿತಿ ಬಗ್ಗೆ ತಿಳಿಯಿರಿ.

ಬೆಂಗಳೂರು, ಫೆಬ್ರವರಿ 06: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ ಸೇರ ಬಯಸಲು ಇಚ್ಛಿಸುವವರು ಫೆಬ್ರವರಿ 09ರೊಳಗೆ ಅರ್ಜಿ ಸಲ್ಲಿಸಬೇಕಿದೆ.

ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (NIRDPR)ಯಲ್ಲಿ ವಿವಿಧ 135 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಈ ಅರ್ಜಿ ಸಲ್ಲಿಕೆಯ ವಿಧಾನ, ಅಭ್ಯರ್ಥಿಗಳ ಶೈಕ್ಷಣಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮುಂತಾದ ಅಂಶಗಳನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ಹುದ್ದೆಯ ಸಂಪೂರ್ಣ ವಿವರ

ಸಂಸ್ಥೆ ಹೆಸರು- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಖಾಲಿ ಹುದ್ದೆಗಳು- 135

ಅರ್ಜಿ ಸಲ್ಲಿಕೆ ಕೊನೆ ದಿನಾಂಕ- ಫೆ.09

NIRDPR Recruitment 2023: NIRDPR Invite for 135 posts, Application submit by Feb 9th

ಖಾಲಿ ಹುದ್ದೆಗಳ ಸಂಖ್ಯೆ

ಪ್ರಾಜೆಕ್ಟ್ ಅಸೋಸಯೇಟ್ (ರಿಸರ್ಚ್‌-ಡಾಕ್ಯುಮೆಂಟೇಶನ್ ) - 01

ಮಲ್ಟಿ ಟಾಸ್ಕ್ ಸಪೋರ್ಟ್ ಅಸಿಸ್ಟೆಂಟ್- 01

ಸಿನಿಯರ್ ಪ್ರೋಗ್ರಾಮ್ ಮ್ಯಾನೇಜ್ಮೆಂಟ್ ಕನ್ಸಲ್‌ಟಂಟ್ - 01

ಪ್ರಾಜೆಕ್ಟ್ ಟ್ರೈನಿಂಗ್ ಮ್ಯಾನೇಜರ್ - 01

ಸ್ಟೇಟ್ ಪ್ರೋಗ್ರಾಮ್ ಕೋ ಆರ್ಡಿನೇಟರ್ - 06
ಯಂಗ್ ಫೆಲೋ - 125

ವಿದ್ಯಾರ್ಹತೆ ಏನು?

ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (NIRDPR) ಹೊರಡಿಸಿರುವ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ನಿಗದಿ ಮಾಡಲಾಗಿದೆ. ಸ್ನಾತಕೋತ್ತರ ಡಿಪ್ಲೋಮಾ, ಯಾವುದೇ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ- ವೇತನ ಎಷ್ಟು?

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಹುದ್ದೆಗಳಿಗೆ ಅನ್ವಯವಾಗವಂತೆ ವಿಂಗಡಿಸಲಾಗಿದೆ. ಮೇಲಿನ ಹುದ್ದೆಗಳಿಗೆ ಅನ್ವಯವಾಗುವಂತೆ ಕ್ರಮವಾಗಿ 35/35/50/40/50/35 ವರ್ಷ ಕ್ರಮವಾಗಿ ನಿಗದಿಪಡಿಸಲಾಗಿದೆ. ಇನ್ನು ವೇತನ ನೋಡುವುದಾದರೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 40ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

NIRDPR Recruitment 2023: NIRDPR Invite for 135 posts, Application submit by Feb 9th

ಅರ್ಜಿ ಶುಲ್ಕದ ವಿವರ

ಹಿಂದುಳಿದ ವರ್ಗದ ಅಭ್ಯರ್ಥಿಗಳು/ ಜನರಲ್ ಮತ್ತು EWS ಅಭ್ಯರ್ಥಿಗಳಿಗೆ 300ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಹಣವನ್ನು ಅರ್ಜಿ ಸಲ್ಲಿಕೆ ಜೊತೆಗೆ ಆನ್‌ಲೈನ್‌ನಲ್ಲಿ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ http://career.nirdpr.in/ಗೆ ಭೇಟಿ ನೀಡಿ. ನಂತರ ಪರದೆ ಮೇಲೆ ಕಾಣುವ ರಿಜಿಸ್ಟರ್ ಆಂಡ್ ಅಪ್ಲೈ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಕೇಳಲಾಗುವ ಪ್ರತಿ ಮಾಹಿತಿಯನ್ನು ಭರ್ತಿ ಮಾಡಿ ಬಳಿಕ ಆನ್ ಲೈನ್‌ ಮೂಲಕವೇ ನಿಗದಿತ ಶುಲ್ಕ ಪಾವತಿಸಬೇಕು. ಅರ್ಜಿಯನ್ನು ಫೆ.09ರೊಳಗೆ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+