NIMHANS Jobs 2023: ಒಟ್ಟು 161 ಖಾಲಿ ಇವೆ, ಬೆಂಗಳೂರಿನಲ್ಲೇ ಉದ್ಯೋಗ, 34,800 ವೇತನ, ಅರ್ಜಿ ಹಾಕಿ
ಬೆಂಗಳೂರು, ಅಕ್ಟೊಬರ್ 20: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಯಲ್ಲಿ ಒಟ್ಟು 161 ನರ್ಸಿಂಗ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಸದರಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ನವೆಂಬರ್ 18ರೊಳಗೆ ಅರ್ಜಿ ಸಲ್ಲಿಸುವಂತೆ ನಿಮ್ಹಾನ್ಸ್ ತಿಳಿಸಿದೆ. ಅರ್ಜಿ ಸಲ್ಲಿಲಿಕೆಗೂ ಮೊದಲು ಇಲ್ಲಿರುವ ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ ತಿಳಿದುಕೊಳ್ಳಿ.

ನೇಮಕಾತಿ ಪ್ರಕ್ರಿಯೆ ಮಾಹಿತಿ
ಸಂಸ್ಥೆ ಹೆಸರ: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS)
ಹುದ್ದೆಗಳ ಹೆಸರು: ನರ್ಸಿಂಗ್ ಆಫೀಸರ್
ಖಾಲಿ ಹುದ್ದೆ ಸಂಖ್ಯೆ: 161
ಮಾಸಿಕ ವೇತನ: 34,800 ರೂಪಾಯಿ
ಅರ್ಜಿ ಸಲ್ಲಿಕೆ ದಿನಾಂಕ: ನವೆಂಬರ್ 18.
ಶೈಕ್ಷಣಿಕ ವಿದ್ಯಾರ್ಹತೆ
ಈ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಬಿಎಸ್‌ಸಿ ಹಾನರ್ಸ್ ನರ್ಸಿಂಗ್ / ಬಿಎಸ್‌ಸಿ ನರ್ಸಿಂಗ್ ಅಥವಾ ಬಿಎಸ್‌ಸಿ/ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಉತ್ತೀರ್ಣವಾಗಿರುವುದು ಕಡ್ಡಾಯವಾಗಿದೆ. ಇದರೊಂದಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ನರ್ಸಿಂಗ್ ಕೌನ್ಸಿಲ್ ನಲ್ಲಿ ರಿಜಿಸ್ಟ್ರೇಷನ್ ಪಡೆದಿರಬೇಕು. ಜೊತೆಗೆ ಎರಡು ವರ್ಷದ ಅನುಭವ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಬಾರದು. ಸಾಮಾನ್ಯ ಅರ್ಹತೆ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1180 ರೂಪಾಯಿ ಇದ್ದರೆ, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ 885 ರೂಪಾಯಿ ಇದೆ. ಇತ್ತ PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದು, ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿದೆ. ಪರೀಕ್ಷೆಗಳಿಗೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.
ಅರ್ಜಿ ಸಲ್ಲಕೆ ಹೇಗೆ?
ಮೊದಲು ಅಭ್ಯರ್ತಿಗಳು ಮೊದಲು ನಿಮ್ಹಾನ್ಸ್ ಅಧಿಕೃತ ವೆಬ್‌ಸೈಟ್‌ಗೆ https://nimhansonline.in/Nursing/index.jsp ಭೇಟಿ ನೀಡಬೇಕು. ನಂತರ ಅಲ್ಲಿ ಪ್ರೊಸೀಡ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ನಂತರ ತೆರೆದುಕೊಳ್ಳುವ ಪರದೆ ಮೇಲೆ ಕೇಳಲಾಗುವ ಮಾಹಿತಿಗಳು ಅಂದರೆ, ವೈಯಕ್ತಿಕ ಮಾಹಿತಿಗಳು, ವಿದ್ಯಾರ್ಹತೆ ಮಾಹಿತಿಗಳನ್ನು ಹಾಕಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.












Click it and Unblock the Notifications