NIMHANS Recruitment 2023: ಬೆಂಗಳೂರಿನಲ್ಲಿ ಸೆ.8ರಂದು ನೇರ ಸಂದರ್ಶನ
ಬೆಂಗಳೂರು, ಸೆಪ್ಟಂಬರ್ 07: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ (NIMHANS) ತನ್ನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಅದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಹಾಕಿದವರಿಗೆ ನಾಳೆ ಸೆ.8ರಂದು ಬೆಂಗಳೂರಿನಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ಅರ್ಹರು ಪಾಲ್ಗೊಳ್ಳಬೇಕೆಂದು ಸಂಸ್ಥೆ ತಿಳಿಸಿದೆ.
ನಿಮ್ಹಾನ್ಸ್‌ನಲ್ಲಿ ಒಟ್ಟು 4 ಫೀಲ್ಡ್ ಡೇಟಾ ಕಲೆಕ್ಟರ್ಸ್ ಹುದ್ದೆಗಳು ಖಾಲಿ ಇದ್ದು, ಅವುಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು. ನಾಳೆ ನಡೆಯಲಿರುವ ನೇರ ಸಂದರ್ಶನದಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಿದೆ. ಸಂದರ್ಶನಕ್ಕೆ ತೆರಳುವಾಗ ಅಧಿಸೂಚನೆಯಲ್ಲಿ ತಿಳಿಸಲಾದ ಎಲ್ಲ ಅಗತ್ಯ ದಾಖಲೆಗಳನ್ನು ಒಯ್ಯುವಂತೆ ಸೂಚಿಸಲಾಗಿದೆ.

ನೇಮಕಾತಿ ಪೂರ್ಣ ವಿವರ
ಸಂಸ್ಥೆ- ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ, ಬೆಂಗಳೂರು
ಹುದ್ದೆ- ಫೀಲ್ಡ್ ಡೇಟಾ ಕಲೆಕ್ಟರ್ಸ್
ಖಾಲಿ ಹುದ್ದೆ ಎಷ್ಟು- 4
ಮಾಸಿಕ ವೇತನ - 30,000 ರೂಪಾಯಿ
ಪೊಸ್ಟಿಂಗ್ ಸ್ಥಳ- ಬೆಂಗಳೂರು
ವಿದ್ಯಾರ್ಹತೆ ಏನಿರಬೇಕು
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಷ್ಟೇ ಅಲ್ಲದೇ ಸಾರ್ವಜನಿಕ ಆರೋಗ್ಯ ಅಥವಾ ರಸ್ತೆ ಸುರಕ್ಷತೆ ಯೋಜನೆಗಳಲ್ಲಿ ಡೇಟಾ ಸಂಗ್ರಹಣೆ ಮಾಡಿದ ಅನುಭವ ಹೊಂದಿರುವುದು ಖಡ್ಡಾಯ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ತಿಳಿಸಿದೆ.

ವಯಸ್ಸಿನ ಮಿತಿ-ವೇತನ ವಿವರ
ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಇನ್ನೂ ಮಾಸಿಕ ವೇತನ 30,000 ನೀಡಲಾಗುವುದು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ಹೇಳಿದೆ. ಅರ್ಜಿ ಸಲ್ಲಿಸಿದವರಿಗೆ ಈಗಾಗಲೇ ಲಿಖಿತ ಪರೀಕ್ಷೆ ನಡೆದಿದ್ದು, ಇದೀಗ ನೇರ ಸಂದರ್ಶನ ಆಯೋಜಿಸಲಾಗಿದೆ.
ಸಂದರ್ಶನ ನಡೆಯುವ ಸ್ಥಳದ ವಿವರ
ಅಭ್ಯರ್ಥಿಗಳು ಬೋರ್ಡ್ ರೂಮ್, 1 ನೇ ಮಹಡಿ, NBRC ಕಟ್ಟಡ, ಆಡಳಿತಾತ್ಮಕ ಬ್ಲಾಕ್, ನಿಮ್ಹಾನ್ಸ್, ಬೆಂಗಳೂರು - 560029 ಇಲ್ಲಿಗೆ ನಾಳೆ ಸೆಪ್ಟಂಬರ್ 10.30ಕ್ಕೆ ಹಾಜರಿರಬೇಕು ಎಂದು ಅಧಿಸೂಚನೆಯಲ್ಲಿ ಸಂಸ್ಥೆ ತಿಳಿಸಿದೆ.












Click it and Unblock the Notifications