NIA Jobs 2024: ರಾಷ್ಟ್ರೀಯ ತನಿಖಾ ಸಂಸ್ಥೆ ಹುದ್ದೆಗಳು ಖಾಲಿ ಇವೆ
ಬೆಂಗಳೂರು, ಏಪ್ರಿಲ್ 30: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನ್ನಲ್ಲಿ ಖಾಲಿ ಹಲವು ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಬಯಸಿದ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು.
ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಲ್ಲಿ ಖಾಲಿ ಇರುವ ಒಟ್ಟು 10 ಇನ್ವೆಸ್ಟಿಗೇಶನ್ ಎಕ್ಸ್ಪರ್ಟ್ (ಕನ್ಸಲ್ಟೆಂಟ್) ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಮುಂದಿನ ತಿಂಗಳು ಮೇ 7ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡುವಂತೆ ನ್ಯೂಸ್ 18ವರದಿ ಮಾಡಿದೆ. ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಕ್ರಿಯೆ ಮಾಹಿತಿ
ಸಂಸ್ಥೆ ಹೆಸರು: ರಾಷ್ಟ್ರೀಯ ತನಿಖಾ ಸಂಸ್ಥೆ (NIA)
ಹುದ್ದೆ ಹೆಸರು: ಇನ್ವೆಸ್ಟಿಗೇಶನ್ ಎಕ್ಸ್ಪರ್ಟ್ (ಕನ್ಸಲ್ಟೆಂಟ್)
ಒಟ್ಟು ಹುದ್ದೆ: 10
ವೇತನ: ನಿಗದಿ ಆಗಿಲ್ಲ
ಪೋಸ್ಟಿಂಗ್: ಭಾರತ
ಸಂದರ್ಶನ ದಿನಾಂಕ: ಮೇ 07
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ ಅಧಿಸೂಚನೆ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಸ್ಥೆಯು ಮೊದಲು ಲಿಖಿತ ಪರೀಕ್ಷೆ ನಡೆಸಲಿದೆ. ನಂತರ ಮೇ 7ರಂದು ನೇರ ಸಂದರ್ಶನ ನಡೆಸಲಿದೆ. ಈ ಮೂಲಕ ಆಯ್ಕೆ ಆಗುವವರಿಗೆ ನಿಯಮಾನುಸಾರ ವೇತನ ನೀಡಲಾಗುವುದು ಎಂದು ಎನ್‌ಐಎ ತಿಳಿಸಿದೆ.

ವಯಸ್ಸಿನ ಮಿತಿ
ಆಸಕ್ತ ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷಕ್ಕಿಂತ ಹೆಚ್ಚಿರಬಾರದು. ಅಭ್ಯರ್ಥಿಗಳಿಗೆ ಮೀಸಲಾತಿಗೆ ಅನುಗುಣವಾಗಿ ವಯಸ್ಸಿನಲ್ಲಿ ಸಡಿಲಿಎಕ ಇರಲಿದೆ ಎಂದು ಸಂಸ್ಥೆ ಹೇಳಿದೆ.
ಇನ್ನು ಆಯ್ಕೆ ಆಗುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ ಅಧಿಸೂಚನೆ ತಿಳಿಸಿರುವಂತೆ ಭಾರತದ ಯಾವ ರಾಜ್ಯದಲ್ಲಾರೂ ಪೋಸ್ಟಿಂಗ್ ನೀಡಲಾಗುತ್ತದೆ. ಮೇ 7ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೆಡ್ ಕ್ವಾಟ್ರಸ್, ಸಿಜಿಒ, ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003 ಇಲ್ಲಿಗೆ ಸೂಕ್ತ ದಾಖಲಾತಿಗಳ ಸಮೇತ ತೆರಳಬೇಕು.
ನೆನಪಿಡಬೇಕಾದ ದಿನಗಳು
ಅಧಿಸೂಚನೆ ಬಿಡುಗಡೆ: ಏಪ್ರಿಲ್ 08
ಸಂದರ್ಶನದ ದಿನಾಂಕ: ಮೇ 7












Click it and Unblock the Notifications