ಎಂಟಿಆರ್‌ನಲ್ಲಿ ಹಲವು ಹುದ್ದೆ, ಬೆಂಗಳೂರಲ್ಲಿ ಕೆಲಸ
ಬೆಂಗಳೂರು, ಸೆಪ್ಟೆಂಬರ್ 25 : ಎಂಟಿಆರ್ ಫುಡ್ಸ್ ಬೆಂಗಳೂರು ನಗರದಲ್ಲಿ ಮೂರು ಹೊಸ ಶಾಖೆಗಳನ್ನು ಆರಂಭಿಸುತ್ತಿದೆ. ಹೊಸ ಶಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಮತ್ತು ಎಚ್.ಎಸ್.ಆರ್.ಲೇಔಟ್‌ನಲ್ಲಿ ಎಂಟಿಆರ್ ಫುಡ್ಸ್ ಹೊಸ ಶಾಖೆಗಳನ್ನು ಶೀಘ್ರದಲ್ಲೇ ಆರಂಭ ಮಾಡಲಿದೆ. ಈ ಶಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
4 ಸ್ಟೋರಿ ಕ್ಯಾಶಿಯರ್, 1 ಕಸ್ಟಮರ್ ಸರ್ವೀಸ್ ಅಸೋಸಿಯೇಟ್, 1 ಸ್ಟೋರ್ ಸೂಪರ್ ವೈಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವಿದ್ಯಾರ್ಹತೆ, ವೇತನದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಈ ವಿಭಾಗದಲ್ಲಿ 1 ವರ್ಷ ಕೆಲಸ ನಿರ್ವಹಣೆ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ವಿಳಾಸ [email protected].
ಅರ್ಜಿ ಆಹ್ವಾನ : ಕರ್ನಾಟಕ ಸರ್ಕಾರದ ನೂತನ ಜವಳಿ ನೀತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಅನ್ವಯವಾಗುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಹಾಸನ ಜಿಲ್ಲೆಯಲ್ಲಿ ಹೊಸದಾಗಿ ಜವಳಿ ಘಟಕ ಹಾಗೂ ಸಿದ್ದ ಉಡುಪು ಘಟಕಗಳ ಸ್ಥಾಪನೆಗೆ ಸಂಬಂಧಿಸಿದಂತೆ 6 ದಿನಗಳ ತರಬೇತಿ ನೀಡಲಾಗುತ್ತದೆ.
ಅಕ್ಟೋಬರ್ 1 ರಿಂದ 6 ರವರೆಗೆ ಆರು ದಿನಗಳ ಉದ್ಯಮ ಶೀಲತಾ ತರಬೇತಿ ಕಾರ್ಯಕ್ರಮ ಕೆನರಾ ಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಹೊಳೆನರಸೀಪುರ ರೋಡ್, ಇಂಡಸ್ಟ್ರೀಯಲ್ ಏರಿಯಾ, ಹಾಸನ ಇಲ್ಲಿ ನಡೆಯಲಿದೆ.
ಉದ್ಯಮಶೀಲತಾ ಕಾರ್ಯಗಾರದಲ್ಲಿ ಭಾಗವಹಿಸಲು ಇಚ್ಚಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಭಾವಿ ಉದ್ದಿಮೆದಾರರು / ಉದ್ಯಮಿಗಳು ಸೆ.25 ರಿಂದ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಕಚೇರಿಗೆ ಸೆ.27ರ ಒಳಗಾಗಿ ಸಲ್ಲಿಸಬೇಕು.












Click it and Unblock the Notifications