Ministery of Textiles Recruitment 2023: 06 ಖಾಲಿ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
ನವದೆಹಲಿ, ಜನವರಿ 13: ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಆಸಕ್ತರಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ಕೇಂದ್ರ ಜವಳಿ ಸಚಿವಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕೆ 10ನೇ ತರಗತಿ ಪಾಸಾದವರು ಸಹ ಅರ್ಜಿ ಸಲ್ಲಿಬಹುದು.
ಜವಳಿ ಸಚಿವಾಲಯದಲ್ಲಿ ಸೀನಿಯರ್ ಪ್ರಿಂಟರ್, ಜೂನಿಯರ್ ವೀವರ್ ಸೇರಿ ಒಟ್ಟು 6 ಹುದ್ದೆಗಳು ಖಾಲಿ ಇವೆ. ಆಸಕ್ತರು ಜನವರಿ 31 ರೊಳಗೆ ಆಪ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ನೀಡಿರುವ ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಕೇಂದ್ರ ಜವಳಿ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹರೆ, ವಿಧಾನ, ವಯೋಮಿತಿ, ವೇತನ ಮುಂತಾದ ಅಂಶಗಳ ಬಗ್ಗೆ ತಿಳಿಯಿರಿ.

ಖಾಲಿ ಹುದ್ದೆಗಳ ವಿವರ
ಹಿರಿಯ ಪ್ರಿಂಟರ್-1
ಕಿರಿಯ ವೀವರ್-1
ಕಿರಿಯ ಪ್ರಿಂಟರ್-1
ಕಿರಿಯ ಸಹಾಯಕ (ವೀವಿಂಗ್)-2
ಅಟೆಂಡೆಂಟ್ (ವೀವಿಂಗ್)-1
ವಯೋಮಿತಿ- ಅರ್ಹತೆ ಏನು?
ಜವಳಿ ಸಚಿವಾಲಯದ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು 2022ರ ಡಿಸೆಂಬರ್ 31 ಗರಿಷ್ಠ 30 ವರ್ಷ ಮೀರಿರಬಾರದು. ಅದೇ ರೀತಿ ಅಭ್ಯರ್ಥಿಗಳು ಅರ್ಹತೆ ನೋಡುವುದಾದರೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥಾವ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೋಮಾ ಪಾಸಾಗಿರಬೇಕು.
ವಯಸ್ಸಿನ ಸಡಿಲಿಕೆ ಮಾಹಿತಿ
ಪರಿಶಿಷ್ಟ ಜಾತಿ ಅಭ್ಯರ್ಥಿಗಳು- 5 ವರ್ಷ
ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು- 3 ವರ್ಷ
ಸರ್ಕಾರಿ ನೌಕರರು- 10 ವರ್ಷ

ವೇತನ -ಉದ್ಯೋಗದ ಸ್ಥಳ
ಜವಳಿ ಸಚಿವಾಲಯದ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಆರುಗಳಿಗೆ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 5,200-20,200 ರೂಪಾಯಿವರೆಗೆ ದೊರೆಯಲಿದೆ. ಆಯ್ಕೆಯಾಗಲಿರುವ ಅಭ್ಯರ್ಥಿಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಕೆಲಸಕ್ಕೆ ನಿಯೋಜಿಸಲಾಗುವುದು. ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆ ತಿಳಿಸುವುದು.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ನಿರ್ದೇಶಕರು (ದಕ್ಷಿಣ ವಲಯ), ನೇಕಾರರ ಸೇವಾ ಕೇಂದ್ರ, ಸಿ.1.ಬಿ, ರಾಜಾಜಿ ಭವನ, ಬೆಸೆಂಟ್ ನಗರ, ಚೆನ್ನೈ-600090 ಈ ವಿಳಾಸಕ್ಕೆ ಕಳುಹಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ handlooms.nic.in ಗೆ ಭೇಟಿ ನೀಡಬಹುದು.












Click it and Unblock the Notifications