ಕೊಪ್ಪಳದಲ್ಲಿ ಜ.17ರಂದು ಮಿನಿ ಉದ್ಯೋಗ ಮೇಳ

Posted By: Gururaj
Subscribe to Oneindia Kannada

ಕೊಪ್ಪಳ, ಜನವರಿ 11 : ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ ಜನವರಿ 17ರಂದು ಮಿನಿ ಉದ್ಯೋಗ ಮೇಳ ಆಯೋಜಿಸಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದ್ದು, ಪ್ರವೇಶ ಉಚಿತ.

ಜನವರಿ 17ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರ ತನಕ ಮಿನಿ ಉದ್ಯೋಗ ಮೇಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಯುವಕ/ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಕೆನರಾ ಬ್ಯಾಂಕಿನಲ್ಲಿ 450ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

ಉದ್ಯೋಗ ಮೇಳದಲ್ಲಿ ಕಿರ್ಲೋಸ್ಕರ್ ಪ್ರೈ.ಲಿ ಗಿಣಿಗೇರಾ (ಕೊಪ್ಪಳ), ಅಮೂಲ್ಯ ಸಲೂಷನ್ಸ್ ಪ್ರೈ.ಲಿ ಬೆಂಗಳೂರು, ಚಾಲುಕ್ಯ ಮೋಟಾರ್ಸ್ ಗದಗ, ನ್ಯಾಷಿನಲ್ ಮ್ಯಾನೇಜ್‍ಮೆಂಟ್ ಸರ್ವೀಷಸ್ ಬೆಂಗಳೂರು ಮತ್ತು ಎ.ಪಿ.ಡಿ ಇಂಡಿಯಾ ಸಂಸ್ಥೆ ಬೆಂಗಳೂರು, ಹಾಗೂ ಖಾಸಗಿ ಕಂಪನಿಗಳು ಪಾಲ್ಗೊಳ್ಳಲಿವೆ.

Mini job fair in Koppal on January 17

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ (ಫಿಟ್ಟರ್, ಎಲೆಕ್ಟ್ರಾನಿಕ್, ಮೆಕಾನಿಕ್, ಡಿಪ್ಲೊಮಾ (ಮೆಕಾನಿಕ್), ಬಿಎ, ಬಿಕಾಂ, ಬಿಎಸ್‌ಸಿ ಪದವಿ ಪಡೆದವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರಿನ ಎ.ಪಿ.ಡಿ ಇಂಡಿಯಾ ಸಂಸ್ಥೆ 5ನೇ ತರಗತಿಯಿಂದ ಯಾವುದೇ ಪದವಿ ವಿದ್ಯಾರ್ಹತೆಯುಳ್ಳ ವಿಕಲ ಚೇತನ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ.

ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಆಧಾರ ಕಾರ್ಡ್‌ ಝೆರಾಕ್ಸ್ ಪ್ರತಿ, ಬಯೋಡಾಟಾ, ಹಾಗೂ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು ಎಂದು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Koppal district employment exchange office organized mini job fair on January 17, 2018. More than 5 companies will take part in job fair.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ