Massive Layoffs 2025: ಟೆಕ್ ನೌಕರರಿಗೆ ಮೇಲೆ AI ಪ್ರಭಾವ, 'ಮೆಟಾ'ದಿಂದ 5% ಉದ್ಯೋಗ ವಜಾ? ಮೈಕ್ರೋಸಾಫ್ಟ್ ಸಿಹಿ ಸುದ್ದಿ
Meta Massive Layoffs: ಹೊಸ ವರ್ಷದ ಮೊದಲ ಅರ್ಧ ತಿಂಗಳು ಕಳೆದಿರುವ ವಿವಿಧ ರಂಗದ ಉದ್ಯೋಗಿಗಳಿಗೆ ದೊಡ್ಡ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. AI (ಕೃತಕ ಬುದ್ಧಿಮತ್ತೆ) ಈ ವರ್ಷವು ಲಕ್ಷಾಂತರ ನೌಕರರ ಪಾಲಿಗೆ ನುಂಗಲಾರದ ತುತ್ತಾಗಲಿದೆ. 2025 ಎಐ ಪರಿಣಾಮಕಾರಿ ಪ್ರವೇಶದಿಂದ ಕೇವಲ ಗೂಗಲ್ ಮೆಟಾ ಕಂಪನಿ ಮಾತ್ರವಲ್ಲೇ ಅನೇಕ ಐಟಿ ಕಂಪನಿಗಳಿಂದಲೂ ಉದ್ಯೋಗಿಗಳ ತೆಗೆಯುವ ಸಾಧ್ಯತೆ ಇದೆ. ಮೆಟಾ ಶೇಕಡಾ 5ರಷ್ಟು ನೌಕರರ ಕಡಿತಕ್ಕೆ ಮುಂದಾಗಿದೆ. ಇದೇ ರೀತಿ ವಿವಿಧ ಕಂಪನಿಗಳು ನಂತರದ ಸಾಲಿನಲ್ಲಿವೆ.
ಪ್ರಸಕ್ತ ವರ್ಷ 2025 ರಲ್ಲಿ ಬೃಹತ್ ಉದ್ಯೋಗ ವಜಾ ಘೋಷಣೆಗೆ ನಿರ್ಧರಿಸಿದೆ. ಯಾರೆಲ್ಲ ಕಾರ್ಯಕ್ಷಮತೆಯಲ್ಲಿ ಕಳಪೆ ಅನ್ನಿಸುತ್ತಾರೋ ಅವರನ್ನು ಕೆಲಸದಿಂದ ತೆಗೆಯಲು ಯೋಜಿಸಿದೆ. ಕಳೆದ ವರ್ಷ ಮೆಟಾ ಉದ್ಯೋಗ ಕಡಿತವು ಸಾವಿರಾರು ನೌಕರರ ಮೇಲೆ ಪರಿಣಾಮ ಭೀರಿತ್ತು. ಭಾರಿಯು ಟೆಕ್ ವಲಯದಲ್ಲಿ Layoff ನಲ್ಲಿ Meta ಕಂಪನಿ ಮೊದಲ ಸ್ಥಾನದಲ್ಲಿದೆ.

ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ಕಂಪನಿಯು AI ಅಭಿವೃದ್ಧಿ, ಅನುಷ್ಠಾನದ ನಿರ್ಧಾರಗಳು ವಿವಿಧ ವಲಯಗಳ ಉದ್ಯೋಗಿಗಳ ಕೆಲಸ ಮೇಲೆ ಪ್ರಭಾವ ಭೀರಿದೆ. ಈ ವರ್ಷವು ಅತ್ಯಧಿಕ ನೌಕರರ ಉದ್ಯೋಗ ಕಳೆದುಕೊಳ್ಳಬಹುದು ಎಂದು ET ವರದಿ ಮಾಡಿದೆ.
2025ರಲ್ಲಿ ಉದ್ಯೋಗಿಗಳ ಮೇಲೆ AI ಪ್ರಭಾವ
ಉದ್ಯೋಗ ರಂಗದಲ್ಲಿ ಹೊಸದಾಗಿ ಸೃಷ್ಟಿಸಿದ ಆತಂಕವೆಂದರೆ ಅದು ಉದ್ಯೋಗ ಕಳೆದುಕೊಳ್ಳ ಭಯ. ರಂಗದಲ್ಲಿ ಎಐ ಜಾರಿಯು ಈ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಎಐ ಎಲ್ಲ ನೌಕರರ ಮೇಲೂ ಪರಿಣಾಮ ಬೀರುವುದಿಲ್ಲ. ಕೆಲವು ಜಾಗಗಳನ್ನು ಮಾತ್ರವೇ ಎಐ ತುಂಬಲಿದ್ದು, ಆಯಾ ಜಾಗದ ನೌಕರರು ಉದ್ಯೋಗ ಕಳೆದುಕೊಳ್ಳಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
AI ಕಂಪನಿಗಳಲ್ಲಿ ಟೆಕ್ ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಕಂಪನಿ ಮೆಟಾ ಪ್ರಮುಖ ಸ್ಥಾನದಲ್ಲಿದೆ. AI-ಆಧಾರಿತ ಕಾರ್ಯಪಡೆಗೆ ರಚಿಸುವಲ್ಲಿ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಇದು ಮೆಟಾ ಕಂಪನಿಯ ಕೆಲವು ಮಧ್ಯಮ ಮಟ್ಟದ ಎಂಜಿನಿಯರ್‌ಗಳು ಮತ್ತಿತರ ಸಿಬ್ಬಂದಿಯು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
TCS ನೇಮಕಾತಿ ಎಚ್ಚರಿಕೆ
ಟಾಟಾ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಐಟಿ ಕಂಪನಿಯು ಈ ವರ್ಷ (2025) 40,000 ಹೊಸಬರನ್ನು ನೇಮಿಸಿಕೊಳ್ಳುವ ವಿಶ್ವಾಸ ಇದೆ. ಈ ಕಂಪನಿಯಲ್ಲೂ AI ಸ್ಥಾನ ವಹಿಸಿಕೊಳ್ಳಲಿದೆ. ಉದ್ಯೋವ ವಜಾ ಬಗ್ಗೆ ಯಾವ ತೀರ್ಮಾನ ಈ ಕಂಪನಿಯಿಂದ ಸದ್ಯಕ್ಕೆ ಹೊರ ಬಿದ್ದಿಲ್ಲ.
ಭಾರತೀಯರಿಗೆ ಮೈಕ್ರೋಸಾಫ್ಟ್ ಸಿಹಿ ಸುದ್ದಿ
ಪ್ರಪಂಚದ ಅನೇಕ ಇಲಾಖೆಗಳಲ್ಲಿ ಬೃಹತ್ ಉದ್ಯೋಗ ಕಡಿತ ವರದಿ ಆಗಿದೆ. ಆದರೆ ಮೈಕ್ರೋಸಾಫ್ಟ್ ಭಾರತದ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಏಕೆಂದರೆ ಭಾರತದಲ್ಲಿ ನೌಕರರ ವಜಾ ಆತಂಕ ಬೇಡ. ಇಲ್ಲಿ ಉದ್ಯೋಗ ವಜಾ ಮಾಡುವುದಿಲ್ಲ ಎಂದು ಕಂಪನಿಯ ದಕ್ಷಿಣ ಏಷ್ಯಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.












Click it and Unblock the Notifications