ಹೊಸಕೋಟೆಯಲ್ಲಿ ಡಿಸೆಂಬರ್ 1, 2ರಂದು ಬೃಹತ್ ಉದ್ಯೋಗ ಮೇಳ

ಬೆಂಗಳೂರು, ನವೆಂಬರ್ 19 : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಸೆಂಬರ್ 1 ಮತ್ತು 2ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು ನಿರುದ್ಯೋಗಿ ಯುವಕ/ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಮತ್ತು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಅವರ ನೇತೃತ್ವದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. 50ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಡಿಸೆಂಬರ್ 1ರ ಶನಿವಾರ ಮತ್ತು ಡಿಸೆಂಬರ್ 2ರ ಭಾನುವಾರ ಶ್ರೀ ವಿವೇಕಾನಂದ ವಿದ್ಯಾ ಕೇಂದ್ರ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಉದ್ಯೋಗ ಮೇಳ ನಡೆಯಲಿದೆ. ಡಿಸೆಂಬರ್ 1ರಂದು ಸಂದರ್ಶನ ಎದುರಿಸಲು ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.

Mega job fair

ಎಸ್‌ಎಸ್‌ಎಲ್‌ಸಿ/ ಪಿಯುಸಿ/ ಐಟಿಐ/ ಡಿಪ್ಲೊಮಾ/ ಜೆಓಸಿ/ ಪದವೀಧರರು/ಸ್ನಾತಕೋತ್ತರ ಪದವೀಧರರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿ ನಿಗದಿ ಮಾಡಿಲ್ಲ.

ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತ. ಮೇಳಕ್ಕೆ ಬರುವಾಗ ಸ್ವ-ವಿವರ (ರೆಸ್ಯುಮ್‌)ನ ಕನಿಷ್ಠ 10 ಪ್ರತಿಗಳನ್ನು ತರಬೇಕು ಎಂದು ಮನವಿ ಮಾಡಲಾಗಿದೆ. ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಖಾತ್ರಿ ಪತ್ರವನ್ನು ವಿತರಣೆ ಮಾಡಲಾಗುತ್ತದೆ.

ನೋಂದಣಿಗಾಗಿ ವಿಳಾಸ : ಜೆಕೆ ಟೈರ್ ಮತ್ತು ವೀಲ್ ಅಲೈನ್ ಮೆಂಟ್, ಮೊದಲನೇ ಮಹಡಿ, ಹಳೆಯ ಮದ್ರಾಸ್ ರಸ್ತೆ (ಎನ್ಎಚ್‌4), ಎಚ್‌ಪಿ ಪೆಟ್ರೋಲ್ ಬಂಕ್ ಹತ್ತಿರ, ಹೊಸಕೋಟೆ.

ಆನ್‌ಲೈನ್ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+