Job Fair 2026: ಧಾರವಾಡ, ಶಿಕಾರಿಪುರದಲ್ಲಿ ಬೃಹತ್ ಉದ್ಯೋಗ ಮೇಳ, ದಿನಾಂಕ- ನೋಂದಣಿ ವಿವರ
Job Fair 2026: ಕರ್ನಾಟಕ ರಾಜ್ಯದ ಉದ್ಯೋಗಾಸಕ್ತ ಅಭ್ಯರ್ಥಿಗಳಿಗೆ ಇಲ್ಲೊಂದು ಖಷಿ ಸುದ್ದಿ ಇದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ಧಾರವಾಡದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಶಿಕಾರಿಪುರದಲ್ಲಿ ಜಾಬ್ ಫೇರ್ ಹಮ್ಮಿಕೊಳ್ಳಲಾಗಿದೆ.
ಶಿಕಾರಿಪುರದಲ್ಲಿ ಇದೇ ಫೆಬ್ರವರಿ 20ರ ಶುಕ್ರವಾರ ಮತ್ತು 21ರ ಶನಿವಾರದಂದು ಎರಡು ದಿನಗಳ ಕಾಲ 'ಶಿಕಾರಿಪುರ ಉದ್ಯೋಗ ಮೇಳ'ವನ್ನು ಆಯೋಜನೆ ಮಾಡಲಾಗಿದೆ. ಇಲ್ಲಿನ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದ್ದು, ಆಸಕ್ತರು ಇದರಲ್ಲಿ ಭಾಗವಹಿಸುವ ಮೂಲಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ವಿವಿಧ ಭಾಗದಿಂದ ಕಂಪನಿಗಳು ಆಗಮಿಸಲಿವೆ. ಮಲೆನಾಡಲ್ಲಿ ಇದೊಂದು ದೊಡ್ಡ ಪ್ರಯತ್ನವಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಆಗಿರುವ ವಿಜಯೇಂದ್ರ ತಮ್ಮ ಕ್ಷೇತ್ರದ ಜತೆಗೆ ಮಲೆನಾಡಿನ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ 9008907716, 7975223865, 9663190590, ಅಥವಾ 9741440490 ಮೊಬೈಲ್ ಸಂಖ್ಯೆ ಸಂಪರ್ಕಿಸಬೇಕು.
ಧಾರವಾಡದಲ್ಲಿ ಉದ್ಯೋಗ ಮೇಳ
ಧಾರವಾಡದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್, ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬೆಂಗಳೂರು ವತಿಯಿಂದ ಇದೇ ಫೆಬ್ರವರಿ 24 ರಂದು ಮಂಗಳವಾರ 'ಉದ್ಯೋಗ ಮೇಳ' ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 09ರಿಂದ ಸಂಜೆ 06 ಗಂಟೆವರೆಗೆ ಇಲ್ಲಿನ ಸೃಜನಾ ರಂಗ ಮಂದಿರ ಹತ್ತಿರ ಕರ್ನಾಟಕ ಕಾಲೇಜು ಆವರಣ (ಕೆಸಿಡಿ)ದಲ್ಲಿ ಮೇಳ ನಡೆಯಲಿದೆ.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಯ, ಡಿಪ್ಲೋಮಾ, ಬಿಇ, ಸ್ನಾತಕೋತ್ತರ ಪದವಿ ಹಾಗೂ ಇತರ ಯಾವುದೇ ವಿದ್ಯಾರ್ಹತೆ ಹೊಂದಿದೆ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದು. ಕನಿಷ್ಠ 18 ಮತ್ತು ಗರಿಷ್ಠ 45 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳು ಹಾಜರಾಗಬೇಕಿದೆ. ಹೆಚ್ಚಿನ ಮಾಹಿತಿಗೆ 9945441600 ಗೆ ಸಂಪರ್ಕಿಸಬೇಕು.












Click it and Unblock the Notifications